ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ, ತಾಂತ್ರಿಕ ಶಿಕ್ಷಣ: ಶೇ 10ರಷ್ಟು ಮೀಸಲಾತಿಗೆ ಮಾಜಿ ಸೈನಿಕರ ಸಂಘ ಆಗ್ರಹ

Published 12 ಫೆಬ್ರುವರಿ 2024, 15:08 IST
Last Updated 12 ಫೆಬ್ರುವರಿ 2024, 15:08 IST
ಅಕ್ಷರ ಗಾತ್ರ

ಬೆಂಗಳೂರು: ‘ಎಂಬಿಬಿಎಸ್‌, ದಂತ ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‌ಗಳ 2023–24ನೇ ಸಾಲಿನ ಪರಿಷ್ಕೃತ ಸೀಟ್‌ ಮೆಟ್ರಿಕ್‌ ಪಟ್ಟಿಯಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಸರಿಯಾಗಿ ಸೀಟ್‌ ಹಂಚಿಕೆಯಾಗಿಲ್ಲ’ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಆರೋಪಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎನ್.ಕೆ. ಶಿವಣ್ಣ, ‘ಕರ್ನಾಟಕ ಪರೀಕ್ಷಾ ಪ್ರಾಧಿಕಾರವು 2023–24 ನೇ ಸಾಲಿನ ವೈದ್ಯಕೀಯ ಶಿಕ್ಷಣಕ್ಕೆ 3,365 ಸೀಟ್‌ಗಳಿದ್ದು, ಅದರಲ್ಲಿ ಮಾಜಿ ಸೈನಿಕರ ಮಕ್ಕಳಿಗೆ ಕೇವಲ 6 ಸೀಟ್‌ಗಳನ್ನು ಹಂಚಿಕೆ ಮಾಡಲಾಗಿದೆ. ದಂತ ವೈದ್ಯಕೀಯ ಶಿಕ್ಷಣಕ್ಕೆ 1,738 ಸೀಟ್‌ಗಳಿದ್ದು, ಅದರಲ್ಲೂ 6 ಸೀಟ್‌ಗಳನ್ನು ಹಂಚಿಕೆಯಾಗಿದ್ದು, ತಾಂತ್ರಿಕ ಶಿಕ್ಷಣದ ವಿವಿಧ ಕೋರ್ಸ್‌ಗಳಿಗೆ  64 ಸೀಟುಗಳು ಹಂಚಿಕೆ ಮಾಡಿ ಅನ್ಯಾಯ ಮಾಡಲಾಗಿದೆ’ ಎಂದು ದೂರಿದರು.

‘ಮಾಜಿ ಸೈನಿಕರಿಗೆ ಉದ್ಯೋಗದಲ್ಲಿ ಶೇ 10ರಷ್ಟು ಮೀಸಲಾತಿ ನೀಡುತ್ತಿರುವಂತೆ, ಮಾಜಿ ಸೈನಿಕರ ಮಕ್ಕಳಿಗೂ ವೈದ್ಯಕೀಯ ಹಾಗೂ ತಾಂತ್ರಿಕ ಕೋರ್ಸ್‌ಗಳ ಸೀಟ್ ಹಂಚಿಕೆಯಲ್ಲೂ ಶೇ 10ರಷ್ಟು ಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT