ಭಾನುವಾರ, ಜನವರಿ 19, 2020
23 °C

ಬೆಂಗಳೂರು: ಚರ್ಚ್‌ಸ್ಟ್ರೀಟ್‌ನಲ್ಲಿ 'ಫ್ರೀ ಕಾಶ್ಮೀರ' ಕೂಗು 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಚರ್ಚ್‌ಸ್ಟ್ರೀಟ್‌ನಲ್ಲಿ ಗೋಡೆಗಳ ಮೇಲೆ 'ಫ್ರೀ ಕಾಶ್ಮೀರ' ಎಂದು ಬರೆಯಲಾಗಿದೆ. 

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಾಯ್ದೆ ಜಾರಿಗೆ ಬೆಂಬಲ ಇಲ್ಲ. ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆ ನೀಡುವಂತೆ ಆಗ್ರಹಿಸಿ ಬರಹಗಳನ್ನು ಬರೆಯಲಾಗಿದೆ.

‘ಬಿಜೆಪಿ ಕ್ಯಾನ್ಸರ್‌ ಇದ್ದಂತೆ. ಅದು ನಿಮ್ಮನ್ನು ಕೊಲ್ಲುವ ಮೊದಲು ನೀವು ಅದನ್ನು ಕೊಲ್ಲಿ. ನಾನು ನನ್ನ ದಾಖಲೆಗಳನ್ನು ತೋರಿಸುವುದಿಲ್ಲ’ ಎಂದು ಬರೆಯಲಾಗಿದೆ. 

ಘಟನೆ ಸಂಬಂಧ ಕಬ್ಬನ್‌ ಪಾರ್ಕ್ ಪೊಲೀಸ್‌ ಠಾಣೆಯಲ್ಲಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

ಇದನ್ನೂ ಓದಿ... ಫ್ರೀ ಕಾಶ್ಮೀರ ಫಲಕ ಪ್ರದರ್ಶಿಸಿದ ಪ್ರಕರಣ: ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ


ಗೋಡೆಗಳ ಮೇಲೆ ಫ್ರೀ ಕಾಶ್ಮೀರ ಎಂದು ಬರೆಯಲಾಗಿದೆ.


ಸಿಎಎ ಹಾಗೂ ಎನ್‌ಆರ್‌ಸಿಗೆ ಬೆಂಬಲ ಇಲ್ಲ ಎಂದು ಬರೆಯಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು