ಬೆಂಗಳೂರು: ‘ಖಾದ್ಯ ತೈಲದ ಪ್ಯಾಕೆಟ್ಗಳಲ್ಲಿ ನಿಗದಿತ ಪ್ರಮಾಣದ ಎಣ್ಣೆ ಇದೆಯೇ’ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಫ್ರೀಡಂ ಸನ್ಫ್ಲವರ್ ಆಯಿಲ್ ಹಮ್ಮಿಕೊಂಡಿರುವ ‘ಪ್ಯಾಕ್ ರಿವ್ಯೂ ಸಿಸ್ಟಮ್’ ಜಾಗೃತಿ ಅಭಿಯಾನಕ್ಕೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಚಾಲನೆ ನೀಡಿದರು.

ಫ್ರೀಡಂ ಸನ್ಫ್ಲವರ್ ಆಯಿಲ್ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಎಣ್ಣೆ ಪ್ಯಾಕಿಂಗ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.

‘ಗ್ರಾಹಕ ವ್ಯವಹಾರಗಳ ಸಚಿವಾಲಯದ ಮಾನದಂಡಗಳ ಪ್ರಕಾರ 1 ಲೀಟರ್ ಪ್ಯಾಕೆಟ್ನಲ್ಲಿ ಕನಿಷ್ಠ 910 ಗ್ರಾಂ ಖಾದ್ಯ ತೈಲ ಇರಲೇಬೇಕು. ಆದರೆ, ಕೆಲವು ಉತ್ಪಾದಕರು 1 ಲೀಟರ್ ಪ್ಯಾಕೆಟ್ನಂತೆ ಕಾಣುವ ಪ್ಯಾಕ್ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಎಣ್ಣೆಯನ್ನು ತುಂಬಿ, ಮಾರಾಟ ಮಾಡುತ್ತಿದ್ದಾರೆ. ಈ ಅಸ್ಪಷ್ಟ ಪದ್ಧತಿಗಳತ್ತ ಬೆಳಕು ಚೆಲ್ಲುವುದು ಈ ಅಭಿಯಾನದ ಮುಖ್ಯ ಉದ್ದೇಶ’ ಎಂದು ಫ್ರೀಡಂ ಸನ್ಫ್ಲವರ್ ಆಯಿಲ್ನ ತಯಾರಕರಾದ ಜೆಮಿನಿ ಎಡಿಬಲ್ಸ್ ಆ್ಯಂಡ್ ಫ್ಯಾಟ್ಸ್ ಇಂಡಿಯಾ ಲಿಮಿಟೆಡ್ನ ಪ್ರತಿನಿಧಿಗಳು ತಿಳಿಸಿದರು.

ರಾಹುಲ್ ದ್ರಾವಿಡ್, ‘ಗ್ರಾಹಕರು ದಾರಿ ತಪ್ಪುವುದನ್ನು ತಡೆಯಲು ಅವರೇ ‘ಥರ್ಡ್ ಅಂಪೈರ್’ ಆಗಿ ಕಾರ್ಯನಿರ್ವಹಿಸಬೇಕು. ಕಂಪನಿಯ ಲೇಬಲ್, ಪ್ರಮಾಣವನ್ನು ಪರಿಶೀಲಿಸಿಕೊಳ್ಳಬೇಕು’ ಎಂದು ಹೇಳಿದರು.

ಜೆಮಿನಿ ಎಡಿಬಲ್ಸ್ ಆ್ಯಂಡ್ ಫ್ಯಾಟ್ಸ್ ಇಂಡಿಯಾ ಲಿಮಿಟೆಡ್ನ ಮಾರುಕಟ್ಟೆ ವಿಭಾಗದ ಹಿರಿಯ ಉಪಾಧ್ಯಕ್ಷ ಪಿ. ಚಂದ್ರಶೇಖರ ರೆಡ್ಡಿ, ‘ಹಣಕ್ಕೆ ತಕ್ಕ ಮೌಲ್ಯದ ಉತ್ಪನ್ನ ಪಡೆಯುವ ವಿಶ್ವಾಸ ಮೂಡಿಸುವುದು ನಮ್ಮ ಗುರಿ. ಲೇಬಲ್ ಓದುವ ಮತ್ತು ತೂಕವನ್ನು ಪರಿಶೀಲಿಸುವ ಮೂಲಕ ಗ್ರಾಹಕರು ತಮ್ಮ ಖರೀದಿಯನ್ನು ಖಚಿತಪಡಿಸಿಕೊಳ್ಳಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.