ಶುಕ್ರವಾರ, ಜೂನ್ 25, 2021
29 °C

10 ದಿನಕ್ಕೊಮ್ಮೆ ಮನೆ ಮನೆ ಸರ್ವೆ: ಬಿಬಿಎಂಪಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬೂತ್‌ ಮಟ್ಟದ ತಂಡಗಳು ಪ್ರತಿ 10 ದಿನಗಳಿಗೊಮ್ಮೆ ಮನೆ ಮನೆ ಸರ್ವೆ ನಡೆಸಬೇಕು. ಕೆಮ್ಮು, ಶೀತ ಜ್ವರದ ಲಕ್ಷಣ ಇದ್ದವರನ್ನು, ತೀವ್ರ ಉಸಿರಾಟದ ತೊಂದರೆ ಹೊಂದಿರುವವನ್ನು, ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತಿತರ ಆರೋಗ್ಯ ಸಮಸ್ಯೆ ಹೊಂದಿದವರನ್ನು ಗುರುತಿಸಬೇಕು’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ರೋಗ ಉಲ್ಬಣಿಸಿದ ನಂತರ ಚಿಕಿತ್ಸೆ ಫಲಿಸದಿರುವ ಸಾಧ್ಯತೆ ಹೆಚ್ಚು. ತಡವಾಗಿ ಪರೀಕ್ಷೆ ನಡೆಸಿದರೆ ರೋಗ ಉಲ್ಬಣಿಸುವ ಸಾಧ್ಯತೆ ಅಧಿಕ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಪರೀಕ್ಷೆ ನಡೆಸಿದರೆ ಈ ಕಾಯಿಲೆಯನ್ನು ನಿಯಂತ್ರಿಸಬಹುದು. ಕೋವಿಡ್‌ ಸೋಂಕಿನಿಂದ ಹೆಚ್ಚು ಅಪಾಯ ಎದುರಿಸುವವರನ್ನು ಗುರುತಿಸುವುದಕ್ಕೆ ಹಾಗೂ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಅವರನ್ನು ಉಳಿಸಿಕೊಳ್ಳುವುದಕ್ಕೆ ಸರ್ವೆ ನೆರವಾಗುತ್ತದೆ’ ಎಂದರು.

‘ವಾರದ ಹಿಂದಿನವರೆಗೂ ಬಿಬಿಎಂಪಿಯಿಂದ ನಿತ್ಯ ಸರಾಸರಿ 3 ಸಾವಿರ ಕೋವಿಡ್‌ ಪರೀಕ್ಷೆ ನಡೆಸಲಾಗುತ್ತಿತ್ತು. ಈ ಪ್ರಮಾಣವನ್ನು ಈಗ 6 ಸಾವಿರಕ್ಕೆ ಹೆಚ್ಚಿಸಿದ್ದೇವೆ. ಇದಲ್ಲದೇ ಖಾಸಗಿ ಪ್ರಯೋಗಾಲಯಗಳಲ್ಲಿ ನಿತ್ಯ ಸುಮಾರು 4 ಸಾವಿರ ಮಂದಿಯ ಗಂಟಲ ದ್ರವ ಪರೀಕ್ಷೆ ನಡೆಯುತ್ತಿದೆ. ಕಳೆದ ವಾರ ಒಟ್ಟು 27,468 ಮಂದಿಯನ್ನು ಕ್ಷಿಪ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 2,586 ಮಂದಿಯನ್ನು ಸೋಂಕು ಪತ್ತೆಯಾಗಿದೆ. 5,419 ಮಂದಿಯ ಗಂಟಲ ದ್ರವ ಸಂಗ್ರಹಕ್ಕೆ ವಿಜ್ಞಾನ ಪದವೀಧರರನ್ನು ಹಾಗೂ ಪೌರರಕ್ಷಣಾ ತಂಡಗಳ ಕಾರ್ಯಕರ್ತರನ್ನು ಬಳಸಿಕೊಳ್ಳಲಾಗುತ್ತದೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು