ಬೆಂಗಳೂರು: ಚನ್ನಪಟ್ಟಣದ ಗೊಂಬೆ, ಉತ್ತರಪ್ರದೇಶದ ಕುರ್ಜಾಪಾತ್ರೆ, ಪಶ್ಚಿಮ ಬಂಗಾಳದ ಆಭರಣ, ಆಂಧ್ರದ ಪ್ರಾಚೀನ ಕೆತ್ತನೆ, ರಾಜಸ್ಥಾನದ ಪೀಠೋಪಕರಣ, ಆಗ್ರಾದ ಅಮೃತಶಿಲೆ ಕೆತ್ತನೆ...

ಹೀಗೆ ದೇಶದ ನಾನಾ ರಾಜ್ಯಗಳ ಕುಶಲಕರ್ಮಿಗಳ ಕೈಯಲ್ಲಿ ಅರಳಿದ ಕಲಾಕೃತಿಗಳು ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಶೀರ್ಷಿಕೆಯಡಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ಎಂ.ಜಿ.ರಸ್ತೆಯ ರಂಗೋಲಿ ಮೆಟ್ರೊ ಆರ್ಟ್ ಸೆಂಟರ್ನಲ್ಲಿ ಪ್ರದರ್ಶನಗೊಂಡಿವೆ.

ಪ್ರದರ್ಶನದೊಂದಿಗೆ ಮಾರಾಟವೂ ಇರುವುದರಿಂದ ಕಲಾಪ್ರೇಮಿಗಳಿಗೆ ರೊಮಾಂಚನವನ್ನು ಉಂಟು ಮಾಡಿದೆ. ಕುಶಲಕರ್ಮಿಗಳಿಗೆ ಉತ್ತೇಜನ ದೊರಕಿದೆ. ಸಾಂಸ್ಕೃತಿಕ ಪ್ರದರ್ಶನಗಳು, ವಿವಿಧ ವಾದನಗಳು ಹಬ್ಬದ ವಾತಾವರಣ ನಿರ್ಮಿಸಿದೆ.

ಪರಿಸರ ಸ್ನೇಹಿ ಕರ್ನಾಟಕದ ಟೇಬಲ್ ವೇರ್. ಒಡಿಶಾದ ಬೇವಿನ ಮರದ ಪಾತ್ರೆಗಳು, ಮರದ ಆಟಿಕೆಗಳು, ತಮಿಳುನಾಡಿನ ತಂಜಾವೂರಿನ ವರ್ಣಚಿತ್ರಗಳು, ಮಹಾರಾಷ್ಟ್ರದ ವರ್ಲಿ ಕಲೆ, ಒಡಿಶಾದ ಪಟ್ಟ ಚಿತ್ರ, ಮಧ್ಯಪ್ರದೇಶದ ಭಿಲ್ ಚಿತ್ರಕಲೆ, ಮಹಾರಾಷ್ಟ್ರದ ಗೊಂಡ್ ಚಿತ್ರಕಲೆ, ಜೈಪುರದ ಮುತ್ತುಗಳು, ಕರ್ನಾಟಕದಿಂದ ಲಂಬಾಣಿ ಆಭರಣ, ರಾಜಸ್ಥಾನದ ಲಾತ್ ಬಳೆಗಳು ವಿಶೇಷ ಆಕರ್ಷಣೆಗಳಾಗಿವೆ.

ಪಂಜಾಬಿ ಜೂಥಿ, ಮಣಿಪುರದ ಸೆಣಬಿನ ಚೀಲ, ಕರ್ನಾಟಕದಿಂದ ವಾಟರ್ ರೀಡ್ ಚೀಲ, ಇಳಕಲ್ ಸೀರೆ, ಬಿಹಾರದ ಬಾಗಲ್ಪುರಿ ಸೀರೆ, ಗುಜರಾತ್ನ ಕಚ್ನ ಅಜರಖ್ ಬಂಧಿನಿ, ಲಖನೌನ ಚಿಕನ್ಕರಿ ಎಂಬ್ರಾಯಿಡರಿ, ಮೀರತ್ನ ಖಾದಿ, ಬನಾರಸ್ ಸೀರೆ, ಒಡಿಶಾದ ಸಂಭಾಲ್ಪುರ ಸೀರೆ, ಪಶ್ಚಿಮ ಬಂಗಾಳದ ಕೈಮಗ್ಗ ಸೀರೆ, ಜಮ್ದಾನಿ, ತೆಲಂಗಾಣದಿಂದ ಇಕ್ಕತ್, ಕಾಶ್ಮೀರದ ಕೈಮಗ್ಗಗಳನ್ನು ನೋಡಲು ಜನರು ಮುಗಿಬಿದ್ದಿದ್ದರು.

ತಿರುಪತಿಯ ಪ್ರಾಚೀನ ಕೆತ್ತನೆಗಳು, ಉತ್ತರ ಪ್ರದೇಶದ ಶರಣ್ಪುರ ಪೀಠೋಪಕರಣ, ಮಿರ್ಜಾಪುರದ ಕಾರ್ಪೆಟ್, ದರಿ, ರಗ್ಗು, ಹತ್ತಿ ದರಿಗಳು ಮನ ಸೆಳೆದವು.

ಇದಲ್ಲದೇ ವಿವಿಧ ಆಹಾರ ಪದಾರ್ಥಗಳು, ತಿಂಡಿ ತಿನಿಸುಗಳು ಕೂಡಾ ಇರುವುದರಿಂದ ಹಲವರು ಖರೀದಿಸಿ ಅಲ್ಲೇ ರುಚಿ ಸವಿದರು. ಅನೇಕರು ಮನೆಗೆ ಒಯ್ದರು.

ಉದ್ಘಾಟನಾ ಕಾರ್ಯಕ್ರಮದಲ್ಲಿ ಚಿರಂತನ ಫೌಂಡೇಶನ್ನ ವಿಶೇಷ ಮಕ್ಕಳು ವಿಶಿಷ್ಟ ನೃತ್ಯರೂಪಕಗಳ ಮೂಲಕ ಗಮನಸೆಳೆದರು.

ಕೈಮಗ್ಗ, ಹಸ್ತಶಿಲ್ಪ ಮತ್ತು ಪರಂಪರಾತ್ಮಕ ಕಲೆಗಳನ್ನು ಈ ಪ್ರದರ್ಶನದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ದೇಶದ ವಿವಿಧ ಭಾಗಗಳ ಕಲಾವಿದರು ಈ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ. ತಾವು ತಯಾರಿಸಿದ ಕಲಾತ್ಮಕ ಉತ್ಪನ್ನಗಳನ್ನು ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ದೇಶೀಯ ಉತ್ಸನ್ನಗಳನ್ನು ಪ್ರೋತ್ಸಾಹಿಸುವುದು ಹಾಗೂ ಹೊಸ ಪೀಳಿಗೆಗೆ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪರಿಚಯಿಸುವುದು ಈ ಪ್ರದರ್ಶನದ ಆಶಯ ಎಂದು ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಸಹ ಸಂಸ್ಥಾಪಕರಾದ ನಾಗರಾಜ್ ಹುಂಡೆಕರ್, ಅಹ್ಮದ್ ಖಾನ್ ತಿಳಿಸಿದರು.

‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ‘ಡೆಕ್ಕನ್ ಹೆರಾಲ್ಡ್’ ಕಾರ್ಯನಿರ್ವಾಹಕ ಸಂಪಾದಕ ಕೆ.ವಿ. ಸುಬ್ರಹ್ಮಣ್ಯ ಭಾಗವಹಿಸಿದ್ದರು.

ವಾರಾಂತ್ಯದ ದಿನಗಳಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಸಂಗೀತ ಪ್ರದರ್ಶನಗಳಿರಲಿವೆ ಎಂದು ಸಂಘಟಕರು ತಿಳಿಸಿದ್ದಾರೆ.

ಮಧ್ಯಮ ವರ್ಗಕ್ಕೆ ತಲುಪಿಸುವ ಕಾರ್ಯ: ಡಿ.ಕೆ.ಶಿವಕುಮಾರ್

‘ಭಾರತದ ಕಲೆ ಸ್ವದೇಶಿ ವಸ್ತುಗಳನ್ನು ಮಧ್ಯಮ ವರ್ಗದ ಜನರಿಗೆ ತಲುಪಿಸುವ ಕೆಲಸವನ್ನು ‘ಪ್ರಜಾವಾಣಿ’ ಮತ್ತು ಡೆಕ್ಕನ್ ಹೆರಾಲ್ಡ್’ ಮಾಡಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಶ್ಲಾಘಿಸಿದರು. ‘ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಎಲ್ಲ ತರಹದ ಬಟ್ಟೆಗಳು ಹೊಸ ವಿನ್ಯಾಸಗಳು ಕೆತ್ತನೆ ಗೊಂಬೆ ಕಲಾಕೃತಿಗಳು ಇಲ್ಲಿವೆ. ನಮ್ಮ ರಾಜ್ಯದ ಪಾರಂಪರಿಕ ಕಲಾಕೃತಿ ಗೊಂಬೆ ಸೀರೆಗಳಿವೆ. ಬೆಂಗಳೂರಿನಲ್ಲಿ ಮಾಲ್ಗಳು ಮಾತ್ರ ಇರುವುದಲ್ಲ. ಈ ರೀತಿಯಲ್ಲಿ ರಸ್ತೆ ಬದಿಯಲ್ಲಿ ಪ್ರದರ್ಶನ ಮಾರಾಟಗಳಿಗೆ ಅವಕಾಶವಾಗುವ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ಆಯೋಜಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಜನರು ಇಂಥ ಕಡೆಗಳಿಗೆ ಬಂದು ಖರೀದಿಸಿ ಪ್ರೋತ್ಸಾಹಿಸಬೇಕು’ ಎಂದು ಮನವಿ ಮಾಡಿದರು. ‘ಇಂಥ ಕಾರ್ಯಕ್ರಮಗಳಿಗೆ ಬೆಂಬಲವಾಗಿ ನಾವಿದ್ದೇವೆ ಎಂದು ತಿಳಿಸಲು ನಾನು ಬಂದಿದ್ದೇನೆ’ ಎಂದು ತಿಳಿಸಿದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎ. ಹ್ಯಾರಿಸ್ ಕೆಲವು ವಸ್ತುಗಳನ್ನು ಖರೀದಿಸಿ ಪ್ರದರ್ಶನಕಾರರನ್ನು ಪ್ರೋತ್ಸಾಹಿಸಿದರು.

ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲಿ

‘ಪರಿಸರ ಸ್ನೇಹಿ ಮತ್ತು ಸ್ವದೇಶಿ ಉತ್ಪನ್ನಗಳನ್ನು ‘ದಿ ಇಂಡಿಯನ್ ಆರ್ಟಿಸನ್ಸ್ ಹಾಟ್’ ಪ್ರದರ್ಶಿಸುತ್ತಿದೆ. ಇವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡು ಹೆಸರು ಮಾಡಬೇಕು. ಅಷ್ಟು ಒಳ್ಳೆಯ ವಸ್ತುಗಳು ಇಲ್ಲಿವೆ’ ಎಂದು ನಟಿ ಪೂಜಾಗಾಂಧಿ ಶ್ಲಾಘಿಸಿದರು. ‘ನಮ್ಮ ದೇಶ ಪ್ರಾಚೀನ ಕಲೆ ಸಂಸ್ಕೃತಿ ಆಹಾರೋತ್ಪನ್ನಗಳಿಗೆ ಹೆಸರುವಾಸಿಯಾಗಿದೆ. ಅವುಗಳಿಗೆ ಪ್ರೋತ್ಸಾಹ ನೀಡಿದಾಗ ನಮ್ಮ ರಾಜ್ಯ ದೇಶ ಮುಂದಕ್ಕೆ ಹೋಗಲು ಸಾಧ್ಯ’ ಎಂದು ಹೇಳಿದರು. ಪೂಜಾಗಾಂಧಿ ಅವರು ಸಾಂಪ್ರದಾಯಿಕ ಶೈಲಿಯ ಚಪ್ಪಲಿ ಖರೀದಿಸಿ ಪ್ರದರ್ಶನ ಮತ್ತು ಮಾರಾಟವನ್ನು ಪ್ರೋತ್ಸಾಹಿಸಿದರು.

19ರವರೆಗೆ ಪ್ರದರ್ಶನ

ದೀಪಾವಳಿ ಪ್ರಯುಕ್ತ ಅ.19ರವರೆಗೆ ಪ್ರದರ್ಶನವನ್ನು ಆಯೋಜಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 10.30ರಿಂದ ರಾತ್ರಿ 8.30ರವರೆಗೆ ಪ್ರದರ್ಶನ ಮತ್ತು ಮಾರಾಟ ಇರಲಿದ್ದು ನಾಗರಿಕರು ಇದರ ಪ್ರಯೋಜವನ್ನು ಪಡೆದುಕೊಳ್ಳಬೇಕು ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.