ಗುರುವಾರ , ಆಗಸ್ಟ್ 5, 2021
21 °C
₹ 30 ಲಕ್ಷದ ವಿಮಾ ಪರಿಹಾರ–ಟಿಪ್ಪಣಿ ರವಾನೆ

ಪತ್ರಕರ್ತರಿಗೆ ಕೋವಿಡ್‌ ವಿಮೆ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಸೋಂಕು ಲೆಕ್ಕಿಸದೇ, ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಸೇನಾನಿಗಳಂತೆ ಕೆಲಸ ಮಾಡುತ್ತಿರುವ  ಪತ್ರಕರ್ತರಿಗೂ ವಿಮಾ ಪರಿಹಾರ ಯೋಜನೆ ಜಾರಿಗೆ ತರುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಪೊಲೀಸರು, ಆಶಾ ಕಾರ್ಯಕರ್ತೆಯರ ಸಹಿತ ಕೊರೊನಾ ಸೇನಾನಿಗಳಿಗೆ ಒದಗಿಸಲಾಗಿರುವ ₹ 30 ಲಕ್ಷದ ವಿಮಾ ಪರಿಹಾರ ಪ್ಯಾಕೇಜ್‌ ಅನ್ನು ಪತ್ರಕರ್ತರಿಗೂ ವಿಸ್ತರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಎಡಿಟರ್ಸ್ ಗಿಲ್ಡ್‌ನ ಹರಿಪ್ರಕಾಶ್ ಕೋಣೆಮನೆ ನೇತೃತ್ವದಲ್ಲಿ ಮುಖ್ಯಮಂತ್ರಿ ಅವರನ್ನು ಶುಕ್ರವಾರ ಇಲ್ಲಿ ಭೇಟಿ ಮಾಡಿದ ಪತ್ರಕರ್ತರ ನಿಯೋಗ,  ವಿಮಾ ಪ್ಯಾಕೇಜ್‌ಗೆ ಪತ್ರಕರ್ತರನ್ನು ಸೇರಿಸುವಂತೆ ಮನವಿ ಮಾಡಿತು.

ಪರಿಹಾರ: ಇತ್ತೀಚೆಗೆ ಮೃತಪಟ್ಟ ‘ವಿಜಯ‌ಕರ್ನಾಟಕ’ದ ಗೌರಿಪುರ ಚಂದ್ರು ಮತ್ತು ‘ಪ್ರಜಾವಾಣಿ’ಯ ಬೇಲೂರು ವರದಿಗಾರ ಬಿ.ಎಂ.ರವೀಶ್ ಕುಟುಂಬಕ್ಕೆ ಮುಖ್ಯಮಂತ್ರಿ ತಲಾ ₹ 5 ಲಕ್ಷ ಪರಿಹಾರ ಮಂಜೂರು ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು