ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಂಟೊ ಆಸ್ಪತ್ರೆ: ವೈದ್ಯರು ಗೈರು, ರೋಗಿಗಳು ಹೈರಾಣು

ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣ
Last Updated 2 ನವೆಂಬರ್ 2019, 21:56 IST
ಅಕ್ಷರ ಗಾತ್ರ

ಬೆಂಗಳೂರು: ಮಿಂಟೊ ಆಸ್ಪತ್ರೆಯಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಕಿರಿಯ ವೈದ್ಯರು ಶನಿವಾರವೂ ಕರ್ತವ್ಯಕ್ಕೆ ಹಾಜರಾಗದೆ ಪ್ರತಿಭಟನೆ ಮುಂದುವರಿಸಿದರು.

ಮಿಂಟೊ ಆಸ್ಪತ್ರೆಯಿಂದ ಬೆಂಗಳೂರು ವೈದ್ಯಕೀಯ ಕಾಲೇಜಿನವರೆಗೆ ಪ್ರತಿಭಟನಾ ರ‍್ಯಾಲಿ ನಡೆಸಿದ ಕಿರಿಯ ವೈದ್ಯರು, ಹಲ್ಲೆ ಮಾಡಿರುವ ಅಶ್ವಿನಿ ಗೌಡ ಕ್ಷಮೆ ಕೇಳುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು‌‌. ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗದೇ ಇದ್ದುದರಿಂದ ಚಿಕಿತ್ಸೆ ಲಭಿಸದೆ ರೋಗಿಗಳು ಸಮಸ್ಯೆ ಎದುರಿಸಿದರು.

ಮಿಂಟೊದಲ್ಲಿ ಸುಮಾರು 70 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿದ್ದಾರೆ. ವಿಕ್ಟೋರಿಯಾ, ವಾಣಿ ವಿಲಾಸ ಸೇರಿ ಒಟ್ಟು 500 ಕಿರಿಯ ವೈದ್ಯರಿದ್ದಾರೆ. ರಕ್ಷಣೆ ಸಿಗುವವರೆಗೆ ಕರ್ತವ್ಯಕ್ಕೆ ಹಾಜರಾಗದಿರಲು ಎಲ್ಲ ಕಿರಿಯ ವೈದ್ಯರು ನಿರ್ಧರಿಸಿದ್ದಾರೆ.

'ವೈದ್ಯರ ಮೇಲೆ ಹಿಂದಿನಿಂದಲೂ ಹಲ್ಲೆ ನಡೆಯುತ್ತಲೇ ಇದೆ. ಕಣ್ಣಿನ ದೃಷ್ಟಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿರುವಾಗ ಹಲ್ಲೆ ನಡೆಸುವ ಅಗತ್ಯವೇನಿತ್ತು. ಪ್ರಚಾರದ ಹುಚ್ಚಿನಿಂದ ಹಲ್ಲೆ ನಡೆಸಲಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಾಜಿ ಅಧ್ಯಕ್ಷ ಡಾ. ರವೀಂದ್ರ ಹೇಳಿದರು.

‘ಶುಕ್ರವಾರ ಹಲ್ಲೆ ಮಾಡಿದ ಹೆಣ್ಣು ಮಗಳು (ಅಶ್ವಿನಿ ಗೌಡ) ಒಂದು ತಿಂಗಳ ಹಿಂದೆ ಕೂಡಾ ಹಲ್ಲೆ ನಡೆಸಿದ್ದರು. ಕನ್ನಡ ಮಾತನಾಡಿ ಎಂದು ಹಲ್ಲೆ ಮಾಡಿರುವುದು ತಪ್ಪು. ಕನ್ನಡ ಹೇರಿಕೆ ತಪ್ಪು. ಪ್ರೀತಿಯಿಂದ ಕನ್ನಡ ಕಲಿಸಬೇಕು' ಎಂದರು.

‘ಕರವೇ ಮತ್ತು ಅದರ ಅಧ್ಯಕ್ಷ ನಾರಾಯಣ ಗೌಡ ಅವರ ಮೇಲೆ ಗೌರವ ಇದೆ. ಹಲ್ಲೆ ನಡೆಸುವುದು ಕನ್ನಡದ ಬಗೆಗಿನ ಪ್ರೀತಿ, ಕಾಳಜಿಯೇ. ಐಟಿ ಬಿಟಿ ಕ್ಷೇತ್ರದಲ್ಲಿ ಕನ್ನಡ ಎಷ್ಟರ ಮಟ್ಟಿಗಿದೆ. ಅದನ್ನು ಪ್ರಶ್ನಿಸಲಿ. ಇದು ಉದ್ದೇಶಪೂರ್ವಕವಾಗಿ ನಡೆದ ಹಲ್ಲೆ’ ಎಂದೂ ಆರೋಪಿಸಿದರು.

‘ಘಟನೆ ಬಗ್ಗೆ ಶುಕ್ರವಾರ ರಾತ್ರಿಯೇ ವಿ.ವಿ. ಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಂಬಂಧಿಸಿದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದೇವೆ. ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಪೊಲೀಸ್‌ ಅಧಿಕಾರಿಗಳು ನೀಡಿದ್ದಾರೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಡಾ.ಎಚ್‌.ಎಸ್‌. ಸತೀಶ್‌ ತಿಳಿಸಿದರು.

ಪೊಲೀಸರಿಗೆ ದೂರು
‘ಘಟನೆ ಬಗ್ಗೆ ಶುಕ್ರವಾರ ರಾತ್ರಿಯೇ ವಿ.ವಿ. ಪುರ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಪೊಲೀಸ್‌ ಅಧಿಕಾರಿಗಳು, ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಂಬಂಧಿಸಿದ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ್ದೇವೆ. ಕ್ರಮ ತೆಗೆದುಕೊಳ್ಳುವ ಭರವಸೆಯನ್ನು ಪೊಲೀಸ್‌ ಅಧಿಕಾರಿಗಳು ನೀಡಿದ್ದಾರೆ’ ಎಂದು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡೀನ್‌ ಡಾ.ಎಚ್‌.ಎಸ್‌. ಸತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT