ಬೆಂಗಳೂರು: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹಾಗೂ ಅಧಿಕಾರಿಗಳ ನಿಯೋಗವು ಕೆಎಸ್ಆರ್ಟಿಸಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು.

ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮಾಹಿತಿ ನೀಡಿದರು. ಕೇರಳ ಸಾರಿಗೆಯ ವ್ಯವಸ್ಥಾಪಕ ನಿರ್ದೇಶಕ ಪಿ.ಎಸ್. ಪ್ರಮೋಜ್ ಸಂಕರ್ ಮಾಹಿತಿ ಪಡೆದುಕೊಂಡರು.

ನಿಗಮದ ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ವಿವಿಧ ಮಾದರಿಯ ಬಸ್ ಬ್ರ್ಯಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಬಸ್ಸುಗಳ ಕಾರ್ಯ ನಿರ್ವಹಣೆ, ಪುನಶ್ಚೇತನ ಕಾರ್ಯ, ₹ 1 ಕೋಟಿ ಅಪಘಾತ ವಿಮಾ ಯೋಜನೆ, ಆರೋಗ್ಯ ಯೋಜನೆ, ವಿದ್ಯಾ ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನಗಳ ಉಪಕ್ರಮಗಳಾದ ಎಚ್ಆರ್ಎಂಎಸ್, ಆನ್ಲೈನ್ ಜಿಯೋ ಟ್ಯಾಗ್ ಹಾಜರಾತಿ, ಬ್ಯುಸಿನೆಸ್ ಇಂಟೆಲಿಜೆಂಟ್ ಡ್ಯಾಶ್ಬೋರ್ಡ್, ಅವತಾರ್ 4.0, ಯುಪಿಐಗಳ ಕ್ರಮಗಳನ್ನು ಶ್ಲಾಘಿಸಿದರು.

ಕೆಎಸ್ಆರ್ಟಿಸಿ ನಿರ್ದೇಶಕಿ ನಂದಿನಿದೇವಿ, ಕೇರಳದ ನಿಗಮದ ಆರ್ಥಿಕ ಸಲಹೆಗಾರ ಎ. ಶಾಜಿ, ಪ್ರಧಾನ ವ್ಯವಸ್ಥಾಪಕ (ಎಸ್ಟೇಟ್) ಉಲ್ಲಾಸ್ಬಾಬು, ಉಪ ಪ್ರಧಾನ ವ್ಯವಸ್ಥಾಪಕ (ಐ.ಟಿ) ನಿಶಾಂತ್ ಎಸ್., ಸಮನ್ವಯ ಅಧಿಕಾರಿ (ಇಂಧನ ವಿಭಾಗ) ನವೀನ್ ಎನ್.ಐ., ಜರ್ಮನಿ ಸರ್ಕಾರದ ಪ್ರತಿನಿಧಿ ಶಿರೀಸ್ ಮಹೇಂದ್ರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.