ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೆಪಿಸಿಎಲ್‌: ಮತ್ತೆ ನೇಮಕಾತಿ ವಿವಾದ

622 ಹುದ್ದೆಗಳ ನೇಮಕಾತಿ ಪ್ರಕ್ರಿಯೆ -ಅಧಿಸೂಚನೆಗೆ ವಿರುದ್ಧವಾಗಿ ಋಣಾತ್ಮಕ ಅಂಕ
Published : 9 ಜೂನ್ 2024, 0:29 IST
Last Updated : 9 ಜೂನ್ 2024, 0:29 IST
ಫಾಲೋ ಮಾಡಿ
Comments
ನೇಮಕಾತಿ ಅಧಿಸೂಚನೆ;2017 ಮೊದಲ ಪರೀಕ್ಷೆ;2018 ಮರು ಪರೀಕ್ಷೆ;2024
ಋಣಾತ್ಮಕ ಅಂಕಗಳಿಗೆ ಅಭ್ಯರ್ಥಿಗಳಿಂದಲೇ ಪರ–ವಿರೋಧ ವ್ಯಕ್ತವಾಗಿದೆ. ಸ್ಪಷ್ಟನೆ ಕೋರಿ ಕೆಪಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿದ್ದೇವೆ. ಅವರಿಂದ ಉತ್ತರ ಬಂದ ನಂತರ ನಿರ್ಧಾರ ಕೈಗೊಳ್ಳಲಾಗುವುದು.
-ಎಚ್.ಪ್ರಸನ್ನ, ಕಾರ್ಯನಿರ್ವಾಹಕ ನಿರ್ದೇಶಕ, ಕೆಇಎ.
ಪ್ರಮಾದ ತಮ್ಮದಲ್ಲ ಎಂದು ಕೆಇಎ–ಕೆಪಿಸಿಎಲ್‌ ನುಳುಚಿಕೊಳ್ಳುತ್ತಿವೆ. ಸರ್ಕಾರ ಮಧ್ಯ ಪ್ರವೇಶಿಸಬೇಕು. ಅಭ್ಯರ್ಥಿಗಳಿಗೆ ನ್ಯಾಯಕೊಡಿಸಬೇಕು.
–ಗೋವಿಂದ ರಾಥೋಡ್, ಅಭ್ಯರ್ಥಿ
ಏಳು ವರ್ಷ ವಿಳಂಬ
ಕೆಪಿಸಿಎಲ್‌ನ ಖಾಲಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಬಿದ್ದು ಏಳು ವರ್ಷಗಳು ಕಳೆದರೂ ಪ್ರಕ್ರಿಯೆ ಮಾತ್ರ ಪೂರ್ಣಗೊಂಡಿಲ್ಲ. ‘ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಮೊದಲಾದ ವಿಚಾರಕ್ಕೆ ಕೋರ್ಟ್ ಮೊದಲು ನಡೆದಿದ್ದ ಪರೀಕ್ಷೆಯನ್ನು ರದ್ದು ಮಾಡಿದರೂ, ಮರು ಪರೀಕ್ಷೆಯಲ್ಲೂ ನಿರ್ಲಕ್ಷ್ಯ ಧೋರಣೆ ಮುಂದುವರಿದಿದೆ. ಋಣಾತ್ಮಕ ಅಂಕಗಳ ವಿವಾದ ಮತ್ತೆ ಕೋರ್ಟ್‌ ಮೆಟ್ಟಿಲೇರಿದರೆ ಉದ್ಯೋಗದ ನಿರೀಕ್ಷೆಯಲ್ಲಿರುವ ಹಲವರು ಹುದ್ದೆ ಸಿಗದೆ ನಿವೃತ್ತಿಯ ಸನಿಹ ತಲುಪಿರುತ್ತಾರೆ’ ಎಂದು ಅಭ್ಯರ್ಥಿ ಶಿವಕುಮಾರ್ ಹೇಳಿದರು. ಕೋರ್ಟ್‌ ಆದೇಶದಂತೆ ಮರು ಪರೀಕ್ಷೆ ನಡೆಸುವುದಾಗಿ 2018ರ ಜೂನ್‌ನಲ್ಲೇ ಕೆಪಿಸಿಎಲ್‌ ಅಭ್ಯರ್ಥಿಗಳಿಗೆ ಭರವಸೆ ನೀಡಿದರೂ, ಆರು ವರ್ಷಗಳ ಕಾಲಹರಣ ಮಾಡಿತ್ತು. ಅಂತಿಮವಾಗಿ ಇದೇ ವರ್ಷದ ಫೆಬ್ರುವರಿಯಲ್ಲಿ ಮರು ಪರೀಕ್ಷೆ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT