ಬೆಂಗಳೂರು: ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಯನ್ನು ಸಹ ಪ್ರಯಾಣಿಕರು ಹಿಡಿದು ಸಂಜಯನಗರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ದಾಸರಹಳ್ಳಿಯ ಭುವನೇಶ್ವರಿನಗರದ ವೈದ್ಯೆ ನೀಡಿದ ದೂರಿನ ಮೇರೆಗೆ ದೊಡ್ಡಬಳ್ಳಾಪುರದ ಫೈರೋಜ್ಖಾನ್ (46) ಅವರನ್ನು ಬಂಧಿಸಿ, ಹೇಳಿಕೆ ದಾಖಲಿಸಿಕೊಂಡು ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಂತ್ರಸ್ತ ವೈದ್ಯೆಯು ಅ.2ರಂದು ಸಂಜೆ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅದೇ ಬಸ್ಗೆ ಹತ್ತಿದ್ದ ಫೈರೋಜ್ಖಾನ್, ವೈದ್ಯೆಯ ಪಕ್ಕದ ಸೀಟಿನಲ್ಲೇ ಕುಳಿತಿದ್ದರು. ಬಸ್ ಹೆಬ್ಬಾಳದ ಎಸ್ಟೀಮ್ ಮಾಲ್ನ ಬಳಿ ಬಂದಾಗ ಆರೋಪಿ, ವೈದ್ಯೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಸಾರ್ವಜನಿಕವಾಗಿ ಅವರ ಮುಂಗೈ ಮತ್ತು ತೊಡೆಯ ಭಾಗವನ್ನು ಮುಟ್ಟಿ, ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.

‘ಆರೋಪಿಯ ಅನುಚಿತ ವರ್ತನೆಯಿಂದ ಕಸಿವಿಸಿಗೊಂಡ ವೈದ್ಯೆ, ಸಹೋದರನಿಗೆ ಕರೆ ಮಾಡಿ ಈ ವಿಷಯ ತಿಳಿಸಿದ್ದಾರೆ. ಜತೆಗೆ, ಬಸ್ ಚಾಲಕನಿಗೂ ಮಾಹಿತಿ ನೀಡಿದ್ದಾರೆ. ನಂತರ ವೈದ್ಯೆಯ ಸಹೋದರ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಫೈರೋಜ್ಖಾನ್ನ ದುರ್ವತನೆಯ ವಿಚಾರ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಪೊಲೀಸ್ ನಿಯಂತ್ರಣ ಕೊಠಡಿಯ ಸಿಬ್ಬಂದಿ ಹೊಯ್ಸಳ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ನಂತರ ಹೊಯ್ಸಳ ಸಿಬ್ಬಂದಿಯು ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಬಸ್ ನಿಲ್ಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ತಿಳಿಸಿದರು.

ಫೈರೋಜ್ಖಾನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಆತ ರೇಷ್ಮೆ ಗೂಡಿನ ವ್ಯಾಪಾರಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.