ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (ಕೆಎಸ್ಆರ್ಟಿಸಿ) ಕೈಗೊಂಡಿರುವ ಅತ್ಯುತ್ತಮ ಮಾನವ ಸಂಪನ್ಮೂಲ ಉಪಕ್ರಮಗಳಿಗಾಗಿ ಚಿನ್ನದ ವರ್ಗದಲ್ಲಿ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಶ್ರೇಷ್ಠತೆ ಪ್ರಶಸ್ತಿ ಮತ್ತು 2,600 ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿನ ಪಾರದರ್ಶಕತೆ, ತ್ವರಿತ, ತಂತ್ರಜ್ಞಾನ ಅವಲಂಬಿತ ಪ್ರಕ್ರಿಯೆಗೆ ಅಪೆಕ್ಸ್ ಇಂಡಿಯಾ ಮಾನವ ಸಂಪನ್ಮೂಲ ಧಾರಣಾ ಶ್ರೇಷ್ಠತೆ ಪ್ರಶಸ್ತಿ ಲಭಿಸಿದೆ.

ರಾಜಸ್ಥಾನದ ಉದಯಪುರದಲ್ಲಿ ನಡೆದ ಅಪೆಕ್ಸ್ ಇಂಡಿಯಾ ಸುರಕ್ಷತೆ, ಗುಣಮಟ್ಟ, ಮಾನವ ಸಂಪನ್ಮೂಲ ಮತ್ತು ವ್ಯಾಪಾರ ಶ್ರೇಷ್ಠತೆ ಸಮ್ಮೇಳನದಲ್ಲಿ ಉದಯಪುರ ರಾಜಮನೆತನದ ಜಾಹ್ನವಿ ಕುಮಾರಿ ಮತ್ತು ಸೈಲ್ ಮಾಜಿ ಪ್ರಧಾನ ವ್ಯವಸ್ಥಾಪಕ ಎಸ್.ಸಿ. ಬಾಸಿನ್ ಪ್ರಶಸ್ತಿ ಪ್ರದಾನ ಮಾಡಿದರು. ಕೆಎಸ್ಆರ್ಟಿಸಿ ಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಜಿ.ಎನ್. ಲಿಂಗರಾಜು, ಮುಖ್ಯ ಸಂಚಾರ ವ್ಯವಸ್ಥಾಪಕ ಜೆ. ಅಂಥೋಣಿ ಜಾರ್ಜ್ ಪ್ರಶಸ್ತಿ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.