ಶನಿವಾರ, ಜುಲೈ 24, 2021
28 °C

ಲಾಕ್‌ಡೌನ್ ಸಡಿಲಿಕೆ: ಹಲವೆಡೆ ಸಂಚಾರ ದಟ್ಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‌ಡೌನ್‌ ಸಡಿಲಿಕೆ ಆದಾಗಿನಿಂದಲೂ ನಗರದ ಹಲವೆಡೆ ವಾಹನಗಳ ಸಂಚಾರ ಹೆಚ್ಚಾಗಿದ್ದು, ವಿಪರೀತ ದಟ್ಟಣೆಯೂ ಉಂಟಾಗುತ್ತಿದೆ.

ಲಾಕ್‌ಡೌನ್‌ ವೇಳೆಯಲ್ಲಿ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು. ಹೊರಗೆ ಬಂದ ವಾಹನಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಆದರೀಗ, ಎಲ್ಲ ಬಗೆಯ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇದುವೇ ದಟ್ಟಣೆಗೆ ಕಾರಣವಾಗುತ್ತಿದೆ.

ಯಶವಂತಪುರ, ಪೀಣ್ಯ, ಮೆಜೆಸ್ಟಿಕ್, ಆನಂದರಾವ್ ವೃತ್ತ, ಕೆ.ಆರ್‌.ವೃತ್ತ, ಪುರಭವನ, ಕೆ.ಆರ್‌.ಮಾರುಕಟ್ಟೆ, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಯ ಹಲವೆಡೆ ಸೋಮವಾರ ಸಂಚಾರ ದಟ್ಟಣೆ ಕಂಡುಬಂತು. ಅಲ್ಲೆಲ್ಲ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗೆ ಇಳಿದಿದ್ದವು. ಪ್ರತಿ ವೃತದ ಸಿಗ್ನಲ್‌ನಲ್ಲೂ ವಾಹನಗಳು ನಿಂತಿದ್ದು ಕಂಡುಬಂತು. ರಾತ್ರಿ 9ರ ನಂತರ ನಿಷೇಧಾಜ್ಞೆ ಇದ್ದಿದ್ದರಿಂದ ಅಲ್ಲಿಯ
ವರೆಗೂ ವಾಹನಗಳ ಸಂಚಾರ ಇದ್ದೇ ಇತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು