ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್.ನಾಗರಾಜು, ‘ಪಿತೃಪಕ್ಷ ನಿಮಿತ್ತ ಕೋಟ್ಯಂತರ ಜನರು ಮಾಂಸಾಹಾರ ಸಿದ್ಧಪಡಿಸಿ, ಅಗಲಿದ ಹಿರಿಯರಿಗೆ ಎಡೆ ಇಟ್ಟು, ಪೂಜೆ ಮಾಡುತ್ತಾರೆ. ಇದನ್ನು ಹಬ್ಬವಾಗಿ ಆಚರಿಸಲಾಗುತ್ತದೆ. ಈ ವರ್ಷ ಮಹಾಲಯ ಅಮಾವಾಸ್ಯೆ ದಿನವೇ ಗಾಂಧಿ ಜಯಂತಿ ಬಂದಿದೆ. ಅ. 2ರಂದು ಪ್ರಾಣಿ ವಧೆ ನಿಷೇಧಿಸಲಾಗಿದೆ. ಇದರಿಂದ, ಪಿತೃಪಕ್ಷ ಹಬ್ಬ ಆಚರಿಸುವವರಿಗೆ ಅಡಚಣೆ ಆಗಲಿದ್ದು, ಆ ದಿನ ಮಾಂಸ ಮಾರಾಟಕ್ಕೆ ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು.