‘ಎಂಎಆರ್ ರಸ್ತೆ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ. ಸೂಲಿಕೆರೆ ಬಳಿಯ ಅರಣ್ಯದಲ್ಲಿ 180 ಮೀಟರ್ ರಸ್ತೆ ಕೆಲಸ ಬಾಕಿ ಇದೆ. ಅರಣ್ಯ ಇಲಾಖೆ ಅನುಮತಿ ದೊರೆತಿದ್ದು ಕೆಲಸ ಪ್ರಗತಿಯಲ್ಲಿದೆ. ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಚಲಘಟ್ಟ ಬಳಿ ರೈಲ್ವೆ ಕೆಳಸೇತುವೆ ಕಾಮಗಾರಿ ನಡೆಯುತ್ತಿದ್ದು 6–7 ಹಳಿಗಳನ್ನು ಬದಲಿಸಲು ರೈಲ್ವೆ ಇಲಾಖೆ ಅನುಮತಿ ನೀಡಬೇಕು. ಗರ್ಡರ್‌ಗಳು (ತೊಲೆ) ಸಿದ್ದಗೊಂಡಿದ್ದು 6–7 ತಾಸು ಕೆಲಸ ಹಿಡಿಯಲಿದೆ. ಈ ವೇಳೆ ರೈಲು ಸಂಚಾರ ಸ್ಥಗಿತಗೊಳಿಸಬೇಕಿದೆ. ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅನುಮತಿ ನೀಡುವುದು ವಿಳಂಬವಾದ ಕಾರಣ ಕಾಮಗಾರಿ ಪೂರ್ಣಗೊಳ್ಳುವುದು ಎರಡು ತಿಂಗಳು ತಡವಾಗಬಹುದು. ನವೆಂಬರ್‌ಗೆ ಅನುಮತಿ ನೀಡುವುದಾಗಿ ರೈಲ್ವೆ ಇಲಾಖೆ ಹೇಳಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.