ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ ಬೀಗ ಹಾಕಿದ ಬಳಿಕ ₹ 5 ಕೋಟಿ ಬಾಕಿ ತೆರಿಗೆ ಪಾವತಿಸಿದ ಮಂತ್ರಿ ಮಾಲ್

Published : 30 ಸೆಪ್ಟೆಂಬರ್ 2021, 8:13 IST
ಫಾಲೋ ಮಾಡಿ
Comments

ಬೆಂಗಳೂರು: ಆಸ್ತಿ ತೆರಿಗೆಯ ಹಳೇ ಬಾಕಿ ಪಾವತಿಸದ ಸಂಪಿಗೆ ರಸ್ತೆಯ ಮಂತ್ರಿ ಮಾಲ್‌ಗೆ ಬಿಬಿಎಂಪಿ ಅಧಿಕಾರಿಗಳು ಗುರುವಾರ ಬೆಳಿಗ್ಗೆ ಬೀಗ ಹಾಕಿದರು.

ಪಾಲಿಕೆಯ ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ನೇತೃತ್ವದ ಅಧಿಕಾರಿಗಳ ತಂಡವು ಸುಮಾರು ಒಂದು ಗಂಟೆ ಮಾಲ್ ವಹಿವಾಟುಗಳನ್ನು ಬಂದ್ ಮಾಡಿಸಿತು.

ಬಳಿಕ ಮಂತ್ರಿ ಮಾಲ್ ಮಾಲೀಕರು ₹ 5 ಕೋಟಿಯ ಡಿ.ಡಿ ಪಾವತಿಸಿದರು. ಆ ಬಳಿಕವಷ್ಟೇ ಮಾಲ್‌ನ ಮಳಿಗೆಗಳು ವಹಿವಾಟು ನಡೆಸಲು ಬಿಬಿಎಂಪಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟರು.

‘ಆಸ್ತಿ ತೆರಿಗೆಯ ಹಳೆ ಬಾಕಿ ಪಾವತಿಸುವಂತೆ ಮಾಲ್ ನ ಮಾಲೀಕರಿಗೆ ಅನೇಕ ಬಾರಿ ನೋಟಿಸ್ ನೀಡಿದ್ದೆವು. ಕಳೆದ ಸಾಲಿನಲ್ಲೂ ಮಾಲ್‌ನ ವಹಿವಾಟು ಸ್ಥಗಿತಗೊಳಿಸಿದಾಗ ಕೋವಿಡ್ ಕಾರಣ ನೀಡಿ ಕಾಲಾವಕಾಶ ಕೇಳಿದ್ದರು. ನಮ್ಮ ನೋಟಿಸ್ ಗಳಿಗೆ ಮಾಲ್ ನ‌ಮಾಲೀಕರು ಸ್ಪಂದಿಸದ ಕಾರಣ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಹಾಗೂ ವಿಶೇಷ ಆಯುಕ್ತ (ಕಂದಾಯ) ಎಸ್.ಬಸವರಾಜು ಅವರ ನಿರ್ದೇಶನದಂತೆ ಬಾಕಿ ತೆರಿಗೆ ವಸೂಲಿಗೆ ಕ್ರಮ ಕೈಗೊಂಡಿದ್ದೇವೆ’ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಂತ್ರಿ ಮಾಲ್ 2018-19ರಿಂದ ಈ ಸಾಲಿನವರೆಗೆ ₹ 39.49 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಇಂದು ₹ 5 ಕೋಟಿ ಪಾವತಿಸಿದ್ದು, ಇನ್ನೂ ₹ 34.49 ಕೋಟಿ ತೆರಿಗೆ ಪಾವತಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT