ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ್ಕ್‌ ಹಾಕಲ್ಲ, ದಂಡ ಕಟ್ಟಲ್ಲ, ಏನಾದ್ರೂ ಮಾಡ್ಕೊ: ಕಾರು ಮಾಲೀಕನ ದರ್ಪ

Last Updated 23 ಏಪ್ರಿಲ್ 2021, 21:09 IST
ಅಕ್ಷರ ಗಾತ್ರ

ಬೆಂಗಳೂರು: ಪುಲಿಕೇಶಿನಗರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾರು ಮಾಲೀಕರೊಬ್ಬರು ಮಾಸ್ಕ್ ಧರಿಸದೇ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದು, ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನ ವಿರುದ್ಧ ದೂರು ನೀಡಲಾಗಿದೆ.

ಠಾಣೆಯ ಎಎಸ್‌ಐ ನೇತೃತ್ವದ ತಂಡ, ವಾಹನಗಳನ್ನು ಪರಿಶೀಲನೆ ನಡೆಸುತ್ತಿತ್ತು. ಸ್ಥಳಕ್ಕೆ ಬಂದಿದ್ದ ಕಾರಿನಲ್ಲಿದ್ದ ಮಾಲೀಕ, ಮಾಸ್ಕ್ ಹಾಕಿರಲಿಲ್ಲ. ಅದನ್ನು ಪ್ರಶ್ನಿಸಿದ್ದ ಎಎಸ್‌ಐ, ದಂಡ ಕಟ್ಟುವಂತೆ ಹೇಳಿದ್ದರು.

ಅದಕ್ಕೆ ಒಪ್ಪದ ಮಾಲೀಕ, ರಸ್ತೆಯಲ್ಲೇ ಕಾರು ನಿಲ್ಲಿಸಿ ಲಾಕ್‌ ಮಾಡಿಕೊಂಡು ಓಡಾಡಿದ್ದರು. ಅದರಿಂದ ಸಾರ್ವಜನಿಕರ ವಾಹನಗಳ ಓಡಾಟಕ್ಕೂ ತೊಂದರೆಯಾಗಿ, ದಟ್ಟಣೆ ಉಂಟಾಯಿತು.

‘ನಾನು ಮಾಸ್ಕ್ ಹಾಕುವುದಿಲ್ಲ. ದಂಡವನ್ನೂ ಕಟ್ಟುವುದಿಲ್ಲ. ಏನಾದರೂ ಮಾಡಿಕೊ. ನಿನ್ನ ಬೆದರಿಕೆಗೂ ಹೆದರುವುದಿಲ್ಲ’ ಎಂದು ಮಾಲೀಕ, ಎಎಸ್‌ಐ ಅವರಿಗೆ ಅವಾಜ್ ಹಾಕಿ ಹೊರಟು ಹೋಗಿದ್ದಾನೆ, ಈ ಘಟನೆಯನ್ನು ಸ್ಥಳೀಯರೊಬ್ಬರು ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

‘ಕರ್ತವ್ಯಕ್ಕೆ ಕಾರಿನ ಮಾಲೀಕ ಅಡ್ಡಿಪಡಿಸಿದ್ದಾನೆ. ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಮಾಲೀಕನ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಠಾಣೆಗೆ ದೂರು ನೀಡಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT