ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಉದ್ಯೋಗ ಸೌಧ’ದ ಎದುರು ಇಂದು ಧರಣಿ: ಶಾಸಕ ಸುರೇಶ್‌ ಕುಮಾರ್‌

Published 29 ಜನವರಿ 2024, 23:29 IST
Last Updated 29 ಜನವರಿ 2024, 23:29 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯ ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಪರವಾಗಿ ಕೆಪಿಎಸ್‌ಸಿ (ಉದ್ಯೋಗಸೌಧ) ಮುಂಭಾಗದಲ್ಲಿ ‘ಒಳಜಗಳ ಸಾಕು, ನ್ಯಾಯ ಬೇಕು’ ಎಂದು ಆಗ್ರಹಿಸಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಧರಣಿ ಕುಳಿತುಕೊಳ್ಳುತ್ತೇನೆ’ ಎಂದು ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಸೋಮವಾರ ಬರೆದುಕೊಂಡಿರುವ ಅವರು, ‘ಕೆಪಿಎಸ್‌ಸಿ ಕಾರ್ಯವೈಖರಿಯಿಂದ ನೊಂದಿರುವ 150ಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರು ಸೋಮವಾರ ಬೆಳಿಗ್ಗೆ ನನ್ನ ಮನೆಗೆ ಬಂದಿದ್ದರು. ಅವರ ಪರಿಸ್ಥಿತಿ ವಿವರಿಸಿ ಈಗಾಗಲೇ ಮುಖ್ಯಮಂತ್ರಿಗೆ ಎರಡು ಪತ್ರ ಬರೆದಿದ್ದೇನೆ. ಆಯೋಗದ ಅಧ್ಯಕ್ಷ, ಕಾರ್ಯದರ್ಶಿಯನ್ನು ಭೇಟಿ ಮಾಡಿದ್ದೇನೆ. ಮುಖ್ಯಮಂತ್ರಿಯ ಕಾರ್ಯದರ್ಶಿಗೂ ವಿಚಾರ ತಿಳಿಸಿದ್ದೇನೆ. ಸಚಿವರಾದ ಕೆ.ಜೆ. ಜಾರ್ಜ್ ಅವರಿಗೂ ವಿವರಿಸಿದ್ದೇನೆ‌’ ಎಂದಿದ್ದಾರೆ.

‘ಉದ್ಯೋಗ ಸೌಧ ಎಂದು ಹೆಸರು ಇಟ್ಟುಕೊಂಡಿರುವ ಕೆಪಿಎಸ್‌ಸಿ ಕಟ್ಟಡದಿಂದ ಯುವಕರಿಗೆ ನಿರಂತರ ಅನ್ಯಾಯವಾಗುತ್ತಿದೆ. ಆಯೋಗದ ಅಧ್ಯಕ್ಷರ ವಿಶ್ವಾಸದ ಮಾತು, ಕಾರ್ಯದರ್ಶಿ ಸಹಕರಿಸುತ್ತಿಲ್ಲ ಎಂಬ ಆರೋಪ ಇದ್ಯಾವುದೂ ಸಂತ್ರಸ್ತ ಯುವಕರಿಗೆ ಬೇಕಾಗಿಲ್ಲ. ಅವರಿಗೆ ನ್ಯಾಯಬೇಕಿದೆ. ಹೀಗಾಗಿ, ಯುವ ಸಮೂಹದ ಪರವಾಗಿ ನ್ಯಾಯ ಕೇಳಲು ನಾನೇ ಧರಣಿ ಕುಳಿತುಕೊಳ್ಳುತ್ತಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT