ಬೆಂಗಳೂರು: ದಕ್ಷಿಣ ಬೆಂಗಳೂರನ್ನು (ಎಲೆಕ್ಟ್ರಾನಿಕ್ ಸಿಟಿ) ನಗರದ ಕೇಂದ್ರಕ್ಕೆ ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ಇದೇ 10ರಿಂದ ರೈಲು ಸಂಚಾರ ಆರಂಭವಾಗಲಿದೆ. ಆರ್.ವಿ. ರಸ್ತೆ–ಬೊಮ್ಮಸಂದ್ರ ನಡುವಿನ ಈ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್ ಲಾಲ್ ಖಟ್ಟರ್, ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದರಾದ ಪಿ.ಸಿ. ಮೋಹನ್ ಮತ್ತು ತೇಜಸ್ವಿ ಸೂರ್ಯ ತಮ್ಮ ‘ಎಕ್ಸ್’ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಆಗಸ್ಟ್ 10ರಂದು ನಮ್ಮ ಮೆಟ್ರೊ ಹಳದಿ ಮಾರ್ಗವನ್ನು ಉದ್ಘಾಟಿಸಲು ಮತ್ತು ಮೂರನೇ ಹಂತದ ಮೆಟ್ರೊ ಮಾರ್ಗಕ್ಕೆ (ಕಿತ್ತಳೆ ಮಾರ್ಗ) ಶಂಕುಸ್ಥಾಪನೆ ನೆರವೇರಿಸಲು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಸಚಿವ ಮನೋಹರ್ ಲಾಲ್ ಖಟ್ಟರ್ ತಿಳಿಸಿದ್ದಾರೆ.

ಹಳದಿ ಮಾರ್ಗ

ರಾಷ್ಟ್ರೀಯ ವಿದ್ಯಾಲಯ–ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗದ ಕಾಮಗಾರಿ 2018ರಲ್ಲಿ ಆರಂಭವಾಗಿತ್ತು. 2021ರಲ್ಲಿ ಕೊನೆಗೊಳ್ಳಬೇಕಿತ್ತು. ಕೋವಿಡ್ ಇನ್ನಿತರ ಕಾರಣದಿಂದ ತಡವಾಗಿತ್ತು. 2023ಕ್ಕೆ ಆರಂಭಿಸಲು ಗುರಿ ಪುನರ್ನಿಗದಿಯಾಗಿತ್ತು. ಆದರೆ, ಕಾಮಗಾರಿ ಮತ್ತೊಂದು ವರ್ಷ ತಡವಾಗಿ 2024ರ ಜೂನ್ಗೆ ಪೂರ್ಣವಾಗಿತ್ತು. ಈ ಮಾರ್ಗಕ್ಕೆ ಬೇಕಾದ ರೈಲಿನ ಕೋಚ್ಗಳು ಸಕಾಲದಲ್ಲಿ ಪೂರೈಕೆಯಾಗದ ಕಾರಣ ಸಂಚಾರ ಆರಂಭವಾಗಿರಲಿಲ್ಲ.

ಚಾಲಕರಹಿತ ಎಂಜಿನ್ ಹೊಂದಿರುವ ಪ್ರೊಟೊಟೈಪ್ (ಮೂಲ ಮಾದರಿ) ಮೊದಲ ರೈಲು 2024ರ ಏಪ್ರಿಲ್ನಲ್ಲಿ ಪೂರೈಕೆಯಾಗಿತ್ತು. 2025ರ ಜನವರಿಯಲ್ಲಿ ಎರಡನೇ ರೈಲು, ಮೇ ತಿಂಗಳಲ್ಲಿ ಮೂರನೇ ರೈಲು ಬಂದಿತ್ತು. ವಿವಿಧ ತಂತ್ರಜ್ಞರಿಂದ ಪರೀಕ್ಷೆ, ಸಂಶೋಧನಾ ವಿನ್ಯಾಸ ಮತ್ತು ಗುಣಮಟ್ಟ ಸಂಸ್ಥೆ (ಆರ್ಡಿಎಸ್ಒ) ಪ್ರಾಯೋಗಿಕ ಸಂಚಾರದ ಮೂಲಕ ಪರೀಕ್ಷೆ, ‘ಇಂಡಿಪೆಂಡೆಂಟ್ ಸೇಫ್ಟಿ ಅಸೆಸರ್’ (ಐಎಸ್ಎ) ಸೇರಿ ಪರಿಶೀಲನೆಗಳೆಲ್ಲ ಮುಕ್ತಾಯಗೊಂಡ ಬಳಿಕ ಮೆಟ್ರೊ ರೈಲು ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್ ಮಧುಕರ್ ಚೌಧರಿ ನೇತೃತ್ವದ ತಂಡವು ಜುಲೈ 22ರಿಂದ 25ರವರೆಗೆ ಅಂತಿಮ ಪರೀಕ್ಷೆಗಳನ್ನು ನಡೆಸಿತ್ತು.

ಸುರಕ್ಷತಾ ಆಯೋಗದಿಂದ ಆ.1ರಂದು ಅನುಮತಿ ಸಿಕ್ಕಿತ್ತು. ಇದಾದ ಬಳಿಕ ಉದ್ಘಾಟನೆಗೆ ದಿನ ನಿಗದಿ ಮಾಡಲು ಬಿಎಂಆರ್ಸಿಎಲ್ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಕೇಳಿಕೊಂಡಿತ್ತು.

‘ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರೇ ಮಾಹಿತಿ ಹಂಚಿಕೊಂಡಿರುವುದರಿಂದ ಅದು ಸರಿ ಇರುತ್ತದೆ. ನಮಗೆ ಇನ್ನೂ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ಉದ್ಘಾಟನೆಗೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ’ ಎಂದು ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿದ್ದಾರೆ.

ಹಳದಿ ಮಾರ್ಗದ ನಿಲ್ದಾಣಗಳು

ಬೊಮ್ಮಸಂದ್ರ ಹೆಬ್ಬಗೋಡಿ ಹುಸ್ಕೂರು ರಸ್ತೆ ಇನ್ಫೊಸಿಸ್ ಫೌಂಡೇಷನ್ (ಕೋನಪ್ಪನ ಅಗ್ರಹಾರ) ಎಲೆಕ್ಟ್ರಾನಿಕ್ ಸಿಟಿ ಬೆರಟೇನ ಅಗ್ರಹಾರ ಹೊಸ ರಸ್ತೆ ಸಿಂಗಸಂದ್ರ ಕೂಡ್ಲು ಗೇಟ್ ಹೊಂಗಸಂದ್ರ ಬೊಮ್ಮನಹಳ್ಳಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಿಟಿಎಂ ಲೇಔಟ್ ಜಯದೇವ ಆಸ್ಪತ್ರೆ ರಾಗಿಗುಡ್ಡ ಆರ್.ವಿ. ರಸ್ತೆ ನಿಲ್ದಾಣಗಳನ್ನು ನಮ್ಮ ಮೆಟ್ರೊ ಹಳದಿ ಮಾರ್ಗ ಹೊಂದಿದೆ.

19.15 ಕಿ.ಮೀ. ಹಳದಿ ಮಾರ್ಗದ ಉದ್ದ ₹ 5056.99 ಕೋಟಿ ನಿರ್ಮಾಣ ವೆಚ್ಚ 16 ಮೆಟ್ರೊ ನಿಲ್ದಾಣಗಳ ಸಂಖ್ಯೆ 3 ಇಂಟರ್ಚೇಂಜ್ಗಳು (ಆರ್ವಿ ರಸ್ತೆ ಜಯದೇವ ಆಸ್ಪತ್ರೆ ಸೆಂಟ್ರಲ್ ಸಿಲ್ಕ್ ಬೋರ್ಡ್)

ಮೂರು ರೈಲುಗಳ ಸಂಚಾರ

ಹಳದಿ ಮಾರ್ಗದಲ್ಲಿ ಆರಂಭಿಕ ಹಂತದಲ್ಲಿ ಮೂರು ರೈಲುಗಳು ಸಂಚರಿಸಲಿವೆ. 25 ನಿಮಿಷಕ್ಕೊಂದು ಟ್ರಿಪ್ ಇರಲಿದೆ. ಈ ಮಾರ್ಗಕ್ಕೆ ಒಟ್ಟು 15 ರೈಲುಗಳು ಬೇಕಾಗಿದ್ದು ನಾಲ್ಕನೇ ರೈಲು ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್ (ಟಿಆರ್ಎಸ್ಎಲ್) ಕಾರ್ಯಾಗಾರದಿಂದ ಹೊರಟಿದ್ದು ಆಗಸ್ಟ್ 10ರ ವೇಳೆಗೆ ಬೆಂಗಳೂರು ತಲುಪುವ ನಿರೀಕ್ಷೆ ಇದೆ. ಪ್ರತಿ ರೈಲು ಬಂದ ಬಳಿಕ ಅದಕ್ಕೆ ಸಂಬಂಧಿಸಿದ ಪರೀಕ್ಷೆಗಳು ಸುಮಾರು ಮೂರು ವಾರ ನಡೆಯಲಿವೆ. ಸೆಪ್ಟೆಂಬರ್ನಲ್ಲಿ ಮತ್ತೆರಡು ರೈಲುಗಳು ಪೂರೈಕೆಯಾಗುವ ನಿರೀಕ್ಷೆಯಲ್ಲಿ ಬಿಎಂಆರ್ಸಿಎಲ್ ಅಧಿಕಾರಿಗಳಿದ್ದಾರೆ. ಆರಂಭಿಕ ಹಂತದಲ್ಲಿ 25 ಸಾವಿರ ಪ್ರಯಾಣಿಕರು ಸಂಚರಿಸುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದಲ್ಲಿ ರೈಲುಗಳು ಓಡಾಟ ಆರಂಭಿಸಿದಾಗ 3.5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.