ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುದ್ಧ ನೀರು ಕೊಡಿ; ಜಲಮಾಲಿನ್ಯಕ್ಕೆ ತಡೆ ನೀಡಿ

Last Updated 25 ನವೆಂಬರ್ 2019, 18:19 IST
ಅಕ್ಷರ ಗಾತ್ರ

ಬೆಂಗಳೂರು: ‘ನಾವು ಕುಡಿಯುವ ನೀರು ಎಷ್ಟು ಸುರಕ್ಷಿತ ?’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಸೋಮವಾರ (ನ.25) ಪ್ರಕಟವಾದ ‘ನಮ್ಮ ನಗರ ನಮ್ಮ ಧ್ವನಿ’ ವರದಿಗೆ ಓದುಗರು ಪ್ರತಿಕ್ರಿಯಿಸಿದ್ದಾರೆ. ‘ಕುಡಿಯುವ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು’ ಎಂದು ಹಲವರು ಮನವಿ ಮಾಡಿದ್ದಾರೆ’. ಆಯ್ದ ಪ್ರತಿಕ್ರಿಯೆಗಳು ಇಲ್ಲಿವೆ.

ಶುದ್ಧತೆಯ ಮಾಹಿತಿ ತಿಳಿಯಲಿ

ನಗರದ ಸುತ್ತಮುತ್ತಲಿನ ಜಲಮೂಲಗಳೆಲ್ಲ ಕಲುಷಿತಗೊಂಡಿವೆ. ಶುದ್ಧೀಕರಣ ಘಟಕಗಳ ನೀರು ಸಹ ಕುಡಿಯಲು ಅರ್ಹವಲ್ಲ ಎಂದು ವರದಿಗಳು ಹೇಳುತ್ತಿವೆ. ಈ ನೀರಿನ ಪರಿಶುದ್ಧತೆ ಬಗ್ಗೆ ಅಧ್ಯಯನ ನಡೆಸಬೇಕಿದೆ.

ರವಿ, ಅಂಜನಾನಗರ

ಸರ್ಕಾರ ವಿಫಲ

ಆರೋಗ್ಯ ಸಮಸ್ಯೆಗಳಿಗೆ ಅಶುದ್ಧ ನೀರು ಮೂಲ ಕಾರಣ. ಈ ಬಗ್ಗೆ ಹಲವು ಸಂಶೋಧನೆಗಳು ನಡೆದಿವೆ. ಸರ್ಕಾರಗಳು ಶುದ್ಧ ಕುಡಿಯುವ ನೀರು ಪೂರೈಸಲು ಹೆಚ್ಚಿನ ಆಸಕ್ತಿ ತೋರುತ್ತಿಲ್ಲ. ಮುಂದಿನ ದಿನಗಳಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ.

ಶ್ರೀನಿವಾಸ್, ವಿಜಯನಗರ

ಮಾಲಿನ್ಯಕ್ಕೆ ಕಡಿವಾಣ ಹಾಕಿ

ನಗರದಲ್ಲಿ ಮಾಲಿನ್ಯದಿಂದ ಜನ ಈಗಾಗಲೇ ಕಂಗಾಲಾಗಿದ್ದಾರೆ. ಜಲಮಾಲಿನ್ಯ ಹೆಚ್ಚಾಗಲು ಅವಕಾಶ ನೀಡಬಾರದು.ಗುಣಮಟ್ಟದ ಕುಡಿಯುವ ನೀರು ಪೂರೈಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು.

ಶಿವಶಂಕರ್, ಯಲಹಂಕ

ನೀರಿನ ಗುಣಮಟ್ಟ ಪರೀಕ್ಷಿಸಲಿ

ಉಸಿರಾಡಲು ಜನರಿಗೆ ಶುದ್ಧ ಗಾಳಿ ಎಷ್ಟು ಮುಖ್ಯವೋ, ಕುಡಿಯುವ ನೀರು ಅಷ್ಟೇ ಮುಖ್ಯ. ಶುದ್ಧ ನೀರಿನ ಘಟಕಗಳಿಂದ ಹಣ ಪಾವತಿಸಿ ನಿತ್ಯ ನೀರು ತರುತ್ತೇವೆ. ಆದರೆ, ನೀರಿನ ಗುಣಮಟ್ಟದ ಮೇಲೆ ಯಾರಿಗೂ ಅನುಮಾನ ಮೂಡುತ್ತಿಲ್ಲ. ಎಲ್ಲ ಘಟಕಗಳ ನೀರಿನ ಗುಣಮಟ್ಟವನ್ನು ಪರೀಕ್ಷಿಸಬೇಕು.

ಧರ್ಮರಾಜ, ಬೆಂಗಳೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT