ಶನಿವಾರ, ಜೂನ್ 19, 2021
22 °C

ಮನ್‌ ಕೀ ಬಾತ್‌ನಲ್ಲಿ ನರ್ಸ್‌ ಬಗ್ಗೆ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕೆ.ಸಿ.ಜನರಲ್ ಆಸ್ಪತ್ರೆಯ ಹಿರಿಯ ಶುಶ್ರೂಷಕಿ ಸುರೇಖಾ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ʼಮನ್‌ ಕೀ ಬಾತ್‌ʼ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದಾರೆ.

‘ನೀವೂ ಸೇರಿದಂತೆ ಎಲ್ಲ ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಈ ಕಠಿಣ ಪರಿಸ್ಥಿತಿಯಲ್ಲಿ ಉತ್ತಮ ಕೆಲಸ ಮಾಡಿದ್ದೀರಿ. ಇದಕ್ಕೆ ದೇಶದ ಜನ ನಿಮಗೆ ಧನ್ಯರಾಗಿದ್ದಾರೆ’ ಎಂದು ಮೋದಿ ಅಭಿನಂದಿಸಿದರು.

‘ದೇಶದ ನಾಗರಿಕರಿಗೆ ಈ ಪರಿಸ್ಥಿತಿಯಲ್ಲಿ ನೀವು ನೀಡುವ ಸಂದೇಶವೇನು?’ ಎಂದು ಪ್ರಧಾನಿ ಮೋದಿ ಅವರ ಪ್ರಶ್ನೆಗೆ ಉತ್ತರಿಸಿದ ಸುರೇಖಾ,‘ಈ ಸಂದರ್ಭದಲ್ಲಿ ಎಲ್ಲರೂ ನೆರೆಹೊರೆಯವರೊಂದಿಗೆ ವಿನಮ್ರವಾಗಿರಿ. ಶೀಘ್ರ ಪರೀಕ್ಷೆ ಹಾಗೂ ನಿಖರ ಟ್ರ್ಯಾಕಿಂಗ್‌ನಿಂದ ಮರಣ ಪ್ರಮಾಣ ಕಡಿಮೆ ಮಾಡಲು ನಮಗೆ ಸಹಕಾರಿಯಾಗಲಿದೆ’.

‘ನಿಮಗೆ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದ ಕೂಡಲೇ ಸ್ವಯಂಪ್ರೇರಿತವಾಗಿ ಐಸೊಲೇಟ್ ಆಗಿ. ಶೀಘ್ರವಾಗಿ ಸಮೀಪದ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳಿ. ಇಡೀ ಸಮುದಾಯ ಈ ಸೋಂಕಿನ ಬಗ್ಗೆ ಎಚ್ಚರವಾಗಿರಬೇಕು. ಪಾಸಿಟಿವ್ ವರದಿ ಬಂದ ಕೂಡಲೇ ಗಾಬರಿಯಾಗಬಾರದು’. 

‘ಯಾವುದೇ ಲಸಿಕೆ ಶೀಘ್ರವೇ ಶೇ 100ರಷ್ಟು ರಕ್ಷಣೆ ನೀಡುವುದಿಲ್ಲ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಮಯ ತೆಗೆದುಕೊಳ್ಳುತ್ತದೆ. ಲಸಿಕೆ ಹಾಕಿಸಿಕೊಳ್ಳುವ ವಿಚಾರದಲ್ಲಿ ಭಯ ಪಡದಿರಿ. ಸ್ವಇಚ್ಛೆಯಿಂದ ಲಸಿಕೆ ಹಾಕಿಸಿಕೊಳ್ಳಿ. ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡವರಿಂದ ದೂರವಿರಿ. ಕೊರೊನಾ ಸೇವೆಯಲ್ಲಿ ತೊಡಗಿರುವ ಮುಂಚೂಣಿ ಕಾರ್ಮಿಕರು ಹಾಗೂ ಅಧಿಕಾರಿಗಳ ಮೇಲೆ ಕರುಣೆ ಇರಲಿ. ಈ ಪರಿಸ್ಥಿತಿಯ ವಿರುದ್ಧ ಹೋರಾಡಲು ನಿಮ್ಮೆಲ್ಲರ ಸಹಕಾರ ಅಗತ್ಯ’ ಎಂದು ಮನವಿ ಮಾಡಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು