ಸುಳ್ಳು ವರದಿ ಸಲ್ಲಿಸಿದ್ದ ಜೈಲು ಅಧಿಕಾರಿಗಳು?
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದು ಹಳೆಯ ವಿಡಿಯೊ ಹಾಗೂ ಫೋಟೊಗಳು ಎಂದು ಜೈಲಿನ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಆದರೆ, ವಿಡಿಯೊವೊಂದರಲ್ಲಿ ಕಾಣಿಸುತ್ತಿರುವ ಪತ್ರಿಕೆಯ ಚಿತ್ರದಲ್ಲಿ 2025ರ ನವೆಂಬರ್ 6 ಎಂಬುದು ಕಾಣಿಸುತ್ತದೆ. ತರುಣ್ ರಾಜ್ ಕಾಣಿಸಿಕೊಂಡಿರುವ ವಿಡಿಯೊದಲ್ಲಿ ನವೆಂಬರ್ ತಿಂಗಳ ಕ್ಯಾಲೆಂಡರ್ ಕಾಣಿಸುತ್ತಿದೆ.