ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಉದ್ದೇಶಿತ ಪೆರಿಫೆರಲ್ ವರ್ತುಲ ರಸ್ತೆ–ಪಿಆರ್ಆರ್ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ಯೋಜನೆಗೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿರುವ ಜಮೀನುಗಳಿಗೆ ಪ್ರಾಧಿಕಾರ ನಿಗದಿಪಡಿಸಿರುವ ಬ್ರಿಟಿಷರ ಕಾಲದ ಭೂ ಪರಿಹಾರ ಮಾದರಿಗೆ ರೈತರು ವಿರೋಧ ವ್ಯಕ್ತಪಡಿಸಿರುವ ಕಾರಣ ಭೂ ಪರಿಹಾರ ಮತ್ತೆ ಕಗ್ಗಂಟಾಗಿದೆ.

ಯೋಜನೆ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶದ ಘಟಕ (ಎಸ್ಪಿವಿ) ಸ್ಥಾಪಿಸಿದ್ದರೂ ಚುರುಕು ಸಿಕ್ಕಿಲ್ಲ. ಪ್ರಾಧಿಕಾರವೇ ಹುಡ್ಕೊದಿಂದ ₹28 ಸಾವಿರ ಕೋಟಿ ಸಾಲ ಪಡೆದು ಯೋಜನೆ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಸಾಲಕ್ಕೆ ಮಂಜೂರಾತಿಯೂ ದೊರಕಿದೆ. ಆದರೆ, ಯೋಜನೆಗಾಗಿ ಸ್ವಾಧೀನಪಡಿಸಿಕೊಳ್ಳುವ ಪ್ರತಿ ಎಕರೆಗೆ ಎಷ್ಟು ಪರಿಹಾರ ನೀಡಬೇಕು ಎಂಬುದರ ಬಗ್ಗೆ ಈವರೆಗೆ ನಿರ್ಧಾರವಾಗಿಲ್ಲ.

ಪಿಆರ್ಆರ್ ಯೋಜನೆಗೆ ಜಮೀನು ಬಿಟ್ಟುಕೊಡುವವರಿಗೆ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ನಿಗದಿ ಮಾಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ, ಪ್ರಾಧಿಕಾರ ಮಾತ್ರ ಭೂ ಸ್ವಾಧೀನ ಕಾಯ್ದೆ 1894ರ ಅನ್ವಯ ಸಂಧಾನ ಸೂತ್ರದಡಿ ಪರಿಹಾರ ನಿಗದಿಗೆ ಆದೇಶ ಮಾಡಿದೆ.

ಯೋಜನೆಗೆ ಜಮೀನು ಬಿಟ್ಟುಕೊಡಲಿರುವ ಹಳ್ಳಿಗಳಿಗೆ ತೆರಳಿ ರೈತರನ್ನು ಮನವೊಲಿಸಲು ಸಂಧಾನ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಹುಸ್ಕೂರು, ಕೋಗಿಲು, ಸೂಲಿಕುಂಟೆ, ಮಾದನಾಯನಕಹಳ್ಳಿ, ಮಾವಳ್ಳಿಪುರ ಸೇರಿದಂತೆ ಹಲವು ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ರೈತರ ಜತೆ ಚರ್ಚಿಸಿದ್ದಾರೆ. ಆದರೆ, ರೈತರು ಬಿಡಿಎ ಪರಿಹಾರಕ್ಕೆ ಒಪ್ಪಿಕೊಂಡಿಲ್ಲ.

‘ಕೇಂದ್ರ ಸರ್ಕಾರದ 2013ರ ಭೂಸ್ವಾಧೀನ ಕಾಯ್ದೆ ಅಡಿ ಪರಿಹಾರ ನೀಡಬೇಕು ಎಂಬ ರೈತರ ಕೂಗಿಗೆ ಬಿಡಿಎ ಕಿಮ್ಮತ್ತು ನೀಡುತ್ತಿಲ್ಲ. ಈ ಕಾಯ್ದೆ ಪ್ರಕಾರ ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಪರಿಹಾರ ನೀಡುವುದರ ಜತೆಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ. 2007 ರಿಂದ ಪ್ರಾಧಿಕಾರದ ಅಧ್ಯಕ್ಷರು, ಆಯುಕ್ತರು, ಸಚಿವರು, ಮುಖ್ಯಮಂತ್ರಿಗಳು ಹಾಗೂ ಈಗ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೂ ಸಭೆ ನಡೆಸಲಾಗಿದೆ. ಆದರೆ ಎಲ್ಲರೂ ಆಶ್ವಾಸನೆ ನೀಡಿದ್ದಾರೆ ಹೊರತು ನ್ಯಾಯ ದೊರಕಿಸಿಕೊಟ್ಟಿಲ್ಲ’ ಎಂದು ಪಿಆರ್ಆರ್ ರೈತ ಹಾಗೂ ನಿವೇಶನದಾರರ ಸಂಘದ ಅಧ್ಯಕ್ಷ ಮಾವಳ್ಳಿಪುರ ಶ್ರೀನಿವಾಸ್ ಬೇಸರ ವ್ಯಕ್ತಪಡಿಸಿದರು.

‘ಪಿಆರ್ಆರ್ ವಿಳಂಬದಿಂದಾಗಿ ಯೋಜನೆಯನ್ನೇ ರದ್ದುಪಡಿಸಬೇಕು. ಇಲ್ಲವೇ 2013ರ ಕಾಯ್ದೆಯಡಿ ಭೂ ಪರಿಹಾರ ನೀಡಬೇಕೆಂದು ಹಲವು ರೈತರು ಹೈಕೋರ್ಟ್ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶಕ್ಕೆ ಕಾಯುತ್ತಿದ್ದೇವೆ. ಯೋಜನೆ ರದ್ದತಿಗೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು. ಯೋಜನೆ ರದ್ದು ಮಾಡಿ ಎನ್ಒಸಿ ನೀಡಬೇಕು’ ಎಂದು ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದರು.

‘2013ರ ಭೂ ಸ್ವಾಧೀನ ಕಾಯ್ದೆ ಬಿಡಿಎಗೆ ಅನ್ವಯವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಕರ್ನಾಟಕ ಗೃಹ ಮಂಡಳಿ, ಕೆಐಎಡಿಬಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2013ರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮಾಡಿಕೊಂಡಿವೆ. ಬಿಡಿಎಗೆ ಏಕೆ ಸಾಧ್ಯವಾಗಿಲ್ಲ? ಉದಾಹರಣೆಗೆ ಹೆಸರಘಟ್ಟ ಹೋಬಳಿಯ ಮಾವಳ್ಳಿಪುರ ಗ್ರಾಮದಲ್ಲಿ ಎಕರೆಗೆ ₹2.34 ಕೋಟಿ ಪರಿಹಾರ ನಿಗದಿ ಮಾಡಲಾಗಿದೆ. ವಾಸ್ತವವಾಗಿ ಮಾರುಕಟ್ಟೆ ಮೌಲ್ಯ ದುಪ್ಪಟ್ಟು ಇದೆ. ಸಂಪುಟದಲ್ಲಿ ನಿರ್ಣಯ ಕೈಗೊಂಡಂತೆ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸದಿದ್ದರೆ ಯೋಜನೆಗೆ ಭೂಮಿ ನೀಡುವುದಿಲ್ಲ’ ಎಂದು ರೈತ ಸತೀಶ್ ಹೇಳಿದರು.

ರೈತರ ಜತೆ ಚರ್ಚೆ: ಬಿಡಿಎ

‘ಯೋಜನೆ ಅನುಷ್ಠಾನ ಸಂಬಂಧ ಸಾಕಷ್ಟು ಸಭೆಗಳನ್ನು ಮಾಡಲಾಗಿದೆ ಹಾಗೂ ರೈತರೊಂದಿಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಪರಿಹಾರದ ಮೊತ್ತ ನಿಗದಿಪಡಿಸಲಾಗುವುದು. ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ಯೋಜನೆಗೆ ಭೂಮಿ ನೀಡುವ ರೈತರ ಮನವೊಲಿಸಿ ಪರಿಹಾರ ನಿಗದಿಗೊಳಿಸುವಂತೆ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ. ಪರಿಹಾರ ವಿಚಾರದಲ್ಲಿ ಕಾನೂನು ಹೋರಾಟ ಆರಂಭವಾಗಿ ಯೋಜನೆ ವಿಳಂಬವಾಗುವುದು ಬೇಡ. ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದಾರೆ’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು. ‘ಯೋಜನೆಗೆ ಭೂಮಿ ನೀಡುವ ರೈತರಿಗೆ ಎಕರೆಗೆ ₹1.5 ಕೋಟಿಯಿಂದ ₹8 ಕೋಟಿವರೆಗೂ ಪರಿಹಾರ ದೊರೆಯಲಿದೆ. ಆದರೆ ಜಮೀನು ಯಾವ ಪ್ರದೇಶದಲ್ಲಿದೆ ಎಂಬುದರ ಮೇಲೆ ಪರಿಹಾರ ಮೊತ್ತ ಎಷ್ಟು ಎಂಬುದು ತೀರ್ಮಾನ ಆಗಲಿದೆ. ಸರ್ಕಾರದ ಮಾರ್ಗಸೂಚಿ ದರದ ಮೇಲೆ ಪರಿಹಾರ ನೀಡಲಾಗುವುದು’ ಎಂದು ಹೇಳಿದರು.

73 ಕಿ.ಮೀ ಉದ್ದ

ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂರ್ಪಕಿಸುವಂತೆ ಹೊರವಲಯದಲ್ಲಿ ಎಂಟು ಪಥಗಳ ರಸ್ತೆ ಹಾಗೂ ರಸ್ತೆ ಇಕ್ಕೆಲಗಳಲ್ಲಿ ವಾಣಿಜ್ಯ ಉದ್ದೇಶದ ಕಾರಿಡಾರ್ ಅಭಿವೃದ್ಧಿಪಡಿಸುವ ಉದ್ದೇಶ ಹೊಂದಲಾಗಿದೆ. ಹೆಸರಘಟ್ಟ ರಸ್ತೆ ದೊಡ್ಡಬಳ್ಳಾಪುರದ ರಸ್ತೆ ಬಳ್ಳಾರಿ ರಸ್ತೆ ಹೆಣ್ಣೂರು ರಸ್ತೆ ಹಳೇ ಮದ್ರಾಸ್ ರಸ್ತೆ ಹೊಸಕೋಟೆ ರಸ್ತೆ ಮತ್ತು ಸರ್ಜಾಪುರ ಸೇರಿದಂತೆ 77 ಗ್ರಾಮಗಳ ಮೂಲಕ ಸಾಗಿ ತುಮಕೂರು ರಸ್ತೆ ಮತ್ತು ಹೊಸೂರು ರಸ್ತೆಯನ್ನು ಸಂಪರ್ಕಿಸುತ್ತದೆ. ಇದು 73 ಕಿ.ಮೀ. ಉದ್ದ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.