ಬೆಂಗಳೂರು: ಈಗಾಗಲೇ ಖರೀದಿಸಿದ ಪುಸ್ತಕಗಳ ಬಾಕಿ ಹಣ ಬಿಡುಗಡೆ, ಪುಟವಾರು ದರ ಪರಿಷ್ಕರಣೆ ಸೇರಿ ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕರ್ನಾಟಕ ರಾಜ್ಯ ಲೇಖಕ–ಪ್ರಕಾಶಕ–ಮುದ್ರಕರ ಒಕ್ಕೂಟವು 20 ದಿನಗಳ ಗಡುವು ನೀಡಿದೆ.

ಗುರುವಾರ ಇಲ್ಲಿ ಒಕ್ಕೂಟದ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದ ಇಲಾಖೆ ಆಯುಕ್ತ ಬಸವರಾಜೇಂದ್ರ, ಪುಸ್ತಕೋದ್ಯಮದ ಸಮಸ್ಯೆಗಳನ್ನು ಆಲಿಸಿದರು.

‘ಈಗ ತುರ್ತಾಗಿ 2022ರ ಪುಸ್ತಕ ಆಯ್ಕೆ ಪಟ್ಟಿ ಮತ್ತು 2021ರಲ್ಲಿ ಖರೀದಿಸಿದ ಪುಸ್ತಕಗಳ ಬಾಕಿ ಹಣವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಕನ್ನಡ ಪುಸ್ತಕಗಳ ಪುಟವಾರು ಬೆಲೆ ಏರಿಕೆ ಮತ್ತು ಖರೀದಿಗೆ ಸಂಬಂಧಿಸಿದಂತೆ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ಪ್ರಕಾಶಕರ, ಮುದ್ರಕರ ಮತ್ತು ಹಣಕಾಸು ಅಧಿಕಾರಿಗಳ ಸಭೆ ಕರೆದು, ಶೀಘ್ರದಲ್ಲಿಯೇ ತೀರ್ಮಾನಿಸಲಾಗುವುದು’ ಎಂದು ಆಯುಕ್ತರು ಭರವಸೆ ನೀಡಿದರು.

‘ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಗರ ಕೇಂದ್ರ ಗ್ರಂಥಾಲಯಗಳು ನೀಡುತ್ತಿರುವ ಅಭಿವೃದ್ಧಿ ಶುಲ್ಕವನ್ನು ಶೇ 5ರಿಂದ ಶೇ 10ಕ್ಕೆ ಏರಿಸಬೇಕು. ಆ ಹಣದಿಂದಲೇ ಏಕಗವಾಕ್ಷಿ ಸಗಟು ಪುಸ್ತಕ ಖರೀದಿ ಪ್ರಕ್ರಿಯೆ ನಡೆಸಬಹುದು’ ಎಂದು ಒಕ್ಕೂಟದ ಪ್ರತಿನಿಧಿಗಳು ಸಲಹೆ ನೀಡಿದರು.

ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಬಸವರಾಜೇಂದ್ರ, ‘ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಅನುಮತಿಗಾಗಿ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಪುಸ್ತಕೋದ್ಯಮಕ್ಕೆ ಯಾವ ತೊಂದರೆಯೂ ಆಗದಂತೆ, ಸುಗಮವಾಗಿ ಪುಸ್ತಕ ಖರೀದಿ ವ್ಯವಸ್ಥೆ ನಡೆಸಿಕೊಂಡು ಹೋಗಲು ಇಲಾಖೆಯ ವತಿಯಿಂದ ಎಲ್ಲ ಬಗೆಯ ಆಡಳಿತ ಸಹಕಾರವನ್ನು ನೀಡಲಾಗುವುದು. ಎಲ್ಲ ಸಮಸ್ಯೆಗಳಿಗೂ ಡಿ.20ರೊಳಗೆ ಪರಿಹಾರ ಒದಗಿಸಿ, ಪುಸ್ತಕೋದ್ಯಮದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಆಯುಕ್ತರ ಈ ಭರವಸೆಯಿಂದ ಹೋರಾಟವನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿದ ಒಕ್ಕೂಟದ ಪ್ರತಿನಿಧಿಗಳು, ಸಭೆಯಲ್ಲಿ ಚರ್ಚೆಯಾದ ವಿಷಯಗಳು 20 ದಿನಗಳ ಒಳಗೆ ಕಾರ್ಯಗತವಾಗದಿದ್ದರೆ ಮುಂದಿನ ದಿನಗಳಲ್ಲಿ ಸಮೂಹಿಕವಾಗಿ ಹೋರಾಟ ಮಾಡುವುದಾಗಿ ತಿಳಿಸಿದರು.

ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ, ಕರ್ನಾಟಕ ಪ್ರಕಾಶಕರ ಸಂಘದ ಕಾರ್ಯದರ್ಶಿ ಅಭಿನವ ರವಿಕುಮಾರ್, ಒಕ್ಕೂಟದ ಸೃಷ್ಟಿ ನಾಗೇಶ್, ಚಂದ್ರಕೀರ್ತಿ, ಆರ್. ದೊಡ್ಡೇಗೌಡ, ಧಾತ್ರಿ ಉಮೇಶ್, ರಾಜೇಶ್ ಬಿ. ಹೊನ್ನೇನಹಳ್ಳಿ, ವಿಶಾಲಾಕ್ಷಿ, ಅವಿರತ ಹರೀಶ್, ಮುರಳಿ, ಮಂಜೇಗೌಡ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.