ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವೆಡೆ ಜಿಟಿಜಿಟಿ, ಕೆಲವೆಡೆ ಸಾಧಾರಣ ಮಳೆ

Last Updated 21 ಜುಲೈ 2019, 19:32 IST
ಅಕ್ಷರ ಗಾತ್ರ

ಬೆಂಗಳೂರು: ಮುಂಗಾರು ಚುರುಕುಗೊಂಡ ಬೆನ್ನಲ್ಲೆ ನಗರದಲ್ಲೂ ವಿವಿಧ ಕಡೆ ಮಳೆ ಸುರಿಯುವುದರೊಂದಿಗೆ ನಗರ
ದಾದ್ಯಂತ ಚಳಿಯ ವಾತಾವರಣ ಸೃಷ್ಟಿಯಾಯಿತು.

ನಗರದಲ್ಲಿ ಇನ್ನೂ ಎರಡು ದಿನ ಮೋಡ ಕವಿದ ವಾತಾವರಣದ ಜೊತೆಗೆ ಜಿಟಿಜಿಟಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಭಾನುವಾರ ಬೆಳಗ್ಗಿನಿಂದಲೇ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಬಳಿಕ ಹಲವೆಡೆ ಜಿಟಿಜಿಟಿ ಮಳೆಯಾದರೆ, ಕೆಲವೆಡೆ ಜೋರಾಗಿ ಸುರಿಯಿತು. ಕೇಂದ್ರ ಪ್ರದೇಶಗಳಲ್ಲಿ ತುಂತುರು ಮಳೆ ಸುರಿಯಿತು. ಆದರೆ, ಹೊರವಲಯದ ಕೆಲವು ಕಡೆ ಸಾಧಾರಣ ಮಳೆ ಬಿದ್ದಿದೆ.

ಮಹದೇವಪುರ, ಯಲಹಂಕದಲ್ಲಿ 9 ಮಿ.ಮೀ., ಚುಂಚನಕುಪ್ಪೆ, ರಾಮೋಹಳ್ಳಿಯಲ್ಲಿ 8 ಮಿ.ಮೀ., ಹೂಡಿಯಲ್ಲಿ 7 ಮಿ.ಮೀ., ಅಟ್ಟೂರಿನಲ್ಲಿ 4 ಮಿ.ಮೀ., ಬೊಮ್ಮನಹಳ್ಳಿಯಲ್ಲಿ 5 ಮಿ.ಮೀ., ಕೆ.ಆರ್.ಪುರದಲ್ಲಿ 3 ಮಿ.ಮೀ., ರಾಜಾಜಿನಗರ, ನಂದಿನಿ ಲೇಔಟ್, ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ತಾವರೆಕೆರೆ, ಚಾಮರಾಜಪೇಟೆ, ಬಸವನ ಗುಡಿಯಲ್ಲಿ ತುಂತುರು ಮಳೆ ಸುರಿದಿದೆ.

ನಗರದ ಕೇಂದ್ರಭಾಗಗಳಲ್ಲಿ 27.7 ಡಿಗ್ರಿ, ಎಚ್‍ಎಎಲ್‍ನಲ್ಲಿ 29 ಡಿಗ್ರಿ, ಕೆಐಎಎಲ್‍ನಲ್ಲಿ 28.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT