ಸುಬ್ರಮಣ್ಯಪುರದ ಉತ್ತರಹಳ್ಳಿಯಲ್ಲಿ ಶಕ್ಷಾವಲಿ ಅವರು ಹಾಸಿಗೆ ತಯಾರಿಕಾ ಮಳಿಗೆ ನಡೆಸುತ್ತಿದ್ದಾರೆ. ಮಳಿಗೆಯಲ್ಲಿ ಷರೀಫ್ ಕೆಲಸ ಮಾಡುತ್ತಿದ್ದರು. ಒಂದು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದರು. ಇದರಿಂದ ಕೋಪಗೊಂಡಿದ್ದ ಶಕ್ಷಾವಲಿ ಅವರು ಷರೀಫ್‌ಗೆ ಕರೆ ಮಾಡಿ ನಿಂದಿಸಿದ್ದರು. ಆಗ ಸಿಟ್ಟಿಗೆದ್ದ ಷರೀಫ್ ಸಹ ನಿಂದಿಸಿದ್ದರು. ಇದರಿಂದ ಕೋಪಗೊಂಡ ಆರೋಪಿ, ಜುಲೈ 24ರಂದು ಷರೀಫ್ ಅವರು ಕೆಲಸ ಮಾಡುತ್ತಿದ್ದ ಸ್ಥಳಕ್ಕೇ ಹೊಗಿ ಹಲ್ಲೆ ನಡೆಸಿದ್ದಾರೆ. ಮನೆಗೆ ಕರೆ ತಂದಿದ್ಧಾರೆ. ಬಳಿಕ ಷರೀಫ್‌ನನ್ನು ನಗ್ನಗೊಳಿಸಿ ಹಲ್ಲೆ ನಡೆಸಿ, ವಿಡಿಯೊ ಮಾಡಿಕೊಂಡಿದ್ದರು. ಒಂದು ದಿನ ಗೃಹಬಂಧನದಲ್ಲಿ ಇರಿಸಿಕೊಂಡಿದ್ದರು ಎನ್ನಲಾಗಿದೆ.