ಬುಧವಾರ, ಅಕ್ಟೋಬರ್ 16, 2019
21 °C

ಮತ್ತೆ ಫ್ಲೆಕ್ಸ್‌ ಬ್ಯಾನರ್ ಹಾವಳಿ

Published:
Updated:
Prajavani

ರಾಜರಾಜೇಶ್ವರಿ ನಗರ:  ಬಿಬಿಎಂಪಿ ವ್ಯಾಪ್ತಿಯಲ್ಲಿ ಫ್ಲೆಕ್ಸ್‌, ಬ್ಯಾನರ್‌ ಹಾವಳಿ ಮತ್ತೆ ಶುರುವಾಗಿದೆ. ನೂತನ ಮೇಯರ್‌ ಗೌತಮ್‌ಕುಮಾರ್‌ ಅವರಿಗೆ ಶುಭಕೋರುವ ಫ್ಲೆಕ್ಸ್‌ ಹಾಗೂ ಬ್ಯಾನರ್‌ಗಳನ್ನು ರಾಜರಾಜೇಶ್ವರಿ ನಗರದ ಸುತ್ತ–ಮುತ್ತ ಹಾಗೂ ಐಡಿಯಲ್ಸ್‌ ಹೋಮ್‌ ಬಡಾವಣೆ, ಹೊಸಕೆರೆಹಳ್ಳಿ, ಮೂಡಲಪಾಳ್ಯ ಮುಂತಾದ ಕಡೆ ಹಾಕಲಾಗಿದೆ.

ಉತ್ತರಹಳ್ಳಿ ಬಸ್ ನಿಲ್ದಾಣ, ಸಹಾಯಕ ಕಂದಾಯ ಅಧಿಕಾರಿ ಕಚೇರಿ ಮುಂಭಾಗ, ಎ.ಜಿ.ಎಸ್ ಬಡಾವಣೆ ಸೇರಿದಂತೆ ಹಲವು ಕಡೆ ಪೌರಾಣಿಕ ನಾಟಕದ ಫ್ಲೆಕ್ಸ್‌ ಹಾಕಲಾಗಿದೆ. 

ಕೆಂಗೇರಿ ಉತ್ತರಹಳ್ಳಿ ರಸ್ತೆಯ ರಜತಾದ್ರಿ ಪ್ಯಾಲೇಸ್ ಸೇರಿದಂತೆ ಹಲವೆಡೆ ವಿವಿಧ ಕಂಪನಿಗಳ ಜಾಹೀರಾತು ಬೋರ್ಡ್‍ಗಳನ್ನು ಹಾಕಲಾಗಿದೆ.

‘ಆಡಳಿತ ಪಕ್ಷದ ಜನಪ್ರತಿನಿಧಿಗಳು ಈ ಫ್ಲೆಕ್ಸ್‌, ಬ್ಯಾನರ್‌ಗಳನ್ನು ತೆರವುಗೊಳಿಸಲು ಬಿಡುವುದಿಲ್ಲ. ನಾವು ಮುಂದಾದರೂ, ಹಿರಿಯ ಅಧಿಕಾರಿಗಳು ನಮ್ಮ ಬೆಂಬಲಕ್ಕೆ ನಿಲ್ಲುವುದಿಲ್ಲ’ ಎಂದು ಅಧಿಕಾರಿಯೊಬ್ಬರು ಹೇಳಿದರು.

Post Comments (+)