ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯ ರಕ್ಷಣೆಗಾಗಿ ‘ಸೇಫ್‌ ಸಿಟಿ’ ಯೋಜನೆ

₹667 ಕೋಟಿ ವೆಚ್ಚದ ಯೋಜನೆಗೆ ಸಂಪುಟ ಒಪ್ಪಿಗೆ, ಕೇಂದ್ರಕ್ಕೆ ಶೀಘ್ರ ಪ್ರಸ್ತಾವ
Last Updated 22 ಅಕ್ಟೋಬರ್ 2019, 19:56 IST
ಅಕ್ಷರ ಗಾತ್ರ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲೆ ಯಾವುದೇ ರೀತಿಯ ಹಲ್ಲೆ ಅಥವಾ ದೌರ್ಜನ್ಯ ನಡೆದ ಕೆಲವೇ ನಿಮಿಷಗಳಲ್ಲಿ ಅವರ ರಕ್ಷಣೆಗೆ ಪೊಲೀಸರು ಧಾವಿಸುವ ‘ಸೇಫ್ ಸಿಟಿ’ ಯೋಜನೆ ನಗರದಲ್ಲಿ ಜಾರಿಗೆ ಬರಲಿದೆ.

ಇದಕ್ಕಾಗಿ ಡ್ರೋನ್‌, ಫೇಷಿಯಲ್‌ ರೆಕಗ್ನಿಷನ್‌ ಕ್ಯಾಮೆರಾ, ಸಿಸಿಟಿವಿ ಕ್ಯಾಮೆರಾ ಇತ್ಯಾದಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳಲಾಗುವುದು. ತ್ವರಿತಗತಿಯಲ್ಲಿ ಸಮೀಪದ ಠಾಣೆಗೆ ಮಾಹಿತಿ ತಲುಪಿಸುವ ವ್ಯವಸ್ಥೆ ಆಗಲಿದೆ. ಕೇಂದ್ರ ಸರ್ಕಾರದ ‘ನಿರ್ಭಯಾ’ ನಿಧಿಯಡಿ ಬೆಂಗಳೂರಿನಲ್ಲಿ ‘ಸೇಫ್‌ ಸಿಟಿ’ ಯೋಜನೆ ಜಾರಿ ಮಾಡಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಸುಮಾರು ₹667 ಕೋಟಿಯ ಪ್ರಸ್ತಾವವನ್ನು ರೂಪಿಸಿದ್ದು, ಇದಕ್ಕೆ ಕೇಂದ್ರ ಸರ್ಕಾರ ಶೇ 60 ರಷ್ಟು ಮತ್ತು ರಾಜ್ಯ ಸರ್ಕಾರ ಶೇ 40 ರಷ್ಟು ಹಣ ಭರಿಸಲಿವೆ. ಮೂರು ವರ್ಷಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುವುದು. ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧು ಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಯೋಜನೆ ಜಾರಿ ಬಂದ ಬಳಿಕ ನಗರದಲ್ಲಿ ಎಲ್ಲ ಕಡೆಗಳಲ್ಲಿ 24x7 ಎಲೆಕ್ಟ್ರಾನಿಕ್‌ ಕಣ್ಗಾವಲು ವ್ಯವಸ್ಥೆ ಇರುತ್ತದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ಅಪರಾಧ ಎಸಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ನಿಯೋಜಿಸುವ ಕ್ಯಾಮೆರಾಗಳು: ಒಟ್ಟು 7500 ವಿವಿಧ ರೀತಿಯ ಕ್ಯಾಮೆರಾಗಳನ್ನು ಅಳವಡಿಸಲಾಗುವುದು. ಫಿಕ್ಸೆಡ್‌ ಕ್ಯಾಮೆರಾ 5,000, ಪಿಟಿಜೆಡ್‌ ಕ್ಯಾಮೆರಾ 1,000, ಎಎನ್‌ಪಿಆರ್‌ ಕ್ಯಾಮೆರಾ 1,000, ಫೇಷಿಯಲ್‌ ರೆಕಗ್ನಿಷನ್‌ ಕ್ಯಾಮೆರಾ 500, ಮೊಬೈಲ್‌ ಡೇಟಾ ಟರ್ಮಿನಲ್ಸ್‌ 850 ಮತ್ತು ಡ್ರೋನ್‌ಗಳು 20 ಇರಲಿವೆ.

* ಬೆಂಗಳೂರು ಸಿಟಿ ಪೊಲೀಸ್, ಕರ್ನಾಟಕ ರಾಜ್ಯ ಪೊಲೀಸ್‌ ಅಪ್ಲಿಕೇಷನ್, ನಮ್ಮ 100, ಸುರಕ್ಷಾ ಎಸ್‌ಒಎಸ್‌
ಅಪ್ಲಿಕೇಷನ್‌ಗಳನ್ನು ಸಂಯೋಜಿಸಲಾಗುವುದು.

* ಎಂಟು ಡಿಸಿಪಿ ವಲಯ ಕಚೇರಿಗಳಲ್ಲಿ ಆಯಾ ಸ್ಥಳೀಯ ಪೊಲೀಸ್‌ ಠಾಣೆಗಳಲ್ಲಿ ವೀಕ್ಷಣೆ ಸೌಲಭ್ಯ ಇರುತ್ತದೆ.

*ಕ್ಯಾಮೆರಾದೊಳಗಿನ ಎಸ್‌ಡಿ ಕಾರ್ಡ್‌ನಲ್ಲಿ ದಾಖಲಾದ ವಿಡಿಯೊ ಫೀಡ್‌ಗಳನ್ನು ಡೇಟಾ ಕೇಂದ್ರದಲ್ಲಿ ಕನಿಷ್ಠ 30 ದಿನಗಳವರೆಗೆ ಪೂರ್ಣ ಎಚ್‌ಡಿ ರೆಸಲ್ಯೂಷನ್‌ ಮತ್ತು 20 ಎಫ್‌ಪಿಎಸ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ.

* ಎಲ್ಲ ಆಧುನಿಕ ಸಂವಹನ ಸಾಧನಗಳನ್ನು ಒಳಗೊಂಡ ಎರಡು ಮೊಬೈಲ್‌ ಕಮಾಂಡ್‌ ಕಂಟ್ರೋಲ್‌
ಸೆಂಟರ್‌ಗಳಿರುತ್ತವೆ.

* ಸಿ 4 ಐ ಅಂದರೆ ಕಮಾಂಡ್‌, ಕಂಟ್ರೋಲ್‌, ಕಂಪ್ಯೂಟ್‌, ಕಮ್ಯುನಿಕೇಷನ್‌ ಮತ್ತು ಇಂಟೆಲಿಜೆನ್ಸ್‌ ವ್ಯವಸ್ಥೆ ಇರುತ್ತದೆ. ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ನ ಎಲ್ಲಾ ಕ್ಯಾಮೆರಾಗಳಲ್ಲಿ ಸುಮಾರು ಶೇ 10 ರಷ್ಟು ಏಕ ಕಾಲದಲ್ಲಿ ನೋಡುವ ಸಾಮರ್ಥ್ಯ ಹೊಂದಿರುತ್ತದೆ. ಇದು 40 ಕಾರ್ಯ ನಿರ್ವಹಣಾ ಕೇಂದ್ರವನ್ನು ಹೊಂದಿರುತ್ತದೆ.

* ಇದು 70 ಇಂಚಿನ 6x2 ನ 12 ವಿಡಿಯೊ ವಾಲ್‌ ಪ್ಯಾನೆಲ್‌ಗಳನ್ನು ಒಳಗೊಂಡಿರುವ ವಿಡಿಯೊ ವಾಲ್‌ ಅನ್ನು ಹೊಂದಿರುತ್ತವೆ. ಇದನ್ನು ಬಿಸಿಪಿ ಸಿಬ್ಬಂದಿಗಳು ನಿರ್ವಹಿಸುತ್ತಾರೆ.

* ಪ್ರತಿ ದಿನ ಒಂದು ದಶಲಕ್ಷ ಚಿತ್ರಗಳನ್ನು ಸೆರೆ ಹಿಡಿಯಲಾಗುತ್ತದೆ. ನೈಜ ಸಮಯದ ವಿಶ್ಲೇಷಣೆ ಮಾಡುವ ಸುಧಾರಿತ ವಿಡಿಯೊ ವಿಶ್ಲೇಷಣೆ.

* ಶಂಕಿತ ಮುಖ ಪತ್ತೆಯಾದಲ್ಲಿ ಪೊಲೀಸ್‌ ಠಾಣೆ ಮತ್ತು ಸಿಸಿಸಿಯಲ್ಲಿ ಎಚ್ಚರಿಕೆ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT