ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕುಸಿಯುತ್ತಿದೆ ಸಾಹಿತ್ಯ ಪರಿಷತ್ತಿನ ಘನತೆ’

ಮಹೇಶ ಜೋಶಿಗೆ ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಪ್ರಕಾಶಮೂರ್ತಿ ಬಹಿರಂಗ ಪತ್ರ
Last Updated 31 ಮಾರ್ಚ್ 2023, 20:14 IST
ಅಕ್ಷರ ಗಾತ್ರ

ಬೆಂಗಳೂರು: ‘ತಮ್ಮ ನಡೆ, ನುಡಿ ಹಾಗೂ ನಿಲುವುಗಳನ್ನು ಬದಲಾಯಿಸಿಕೊಳ್ಳುವ ಮೂಲಕ ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಘನತೆಯನ್ನು ಎತ್ತಿ ಹಿಡಿಯಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಪ್ರಕಾಶಮೂರ್ತಿ ಅವರು ಕಸಾಪ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಜೋಶಿ ಅವರಿಗೆ ಆಗ್ರಹಿಸಿದ್ದಾರೆ.

ಈ ಬಗ್ಗೆ ಅವರು 5 ಪುಟಗಳ ಬಹಿರಂಗ ಪತ್ರ ಬರೆದಿದ್ದಾರೆ. ‘108 ವರ್ಷಗಳಿಂದ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಪರಿಷತ್ತಿನ ಘನತೆ–ಗೌರವ ರಾಜ್ಯಾಧ್ಯಕ್ಷರಾದ ತಮ್ಮಿಂದ ಕುಸಿದು, ಮಣ್ಣುಪಾಲಾಗುತ್ತಿದೆ. ಪ್ರಾರಂಭದ ದಿನಗಳಿಂದಲೂ ತಮ್ಮ ನಡೆ, ನುಡಿ, ನಿಲುವುಗಳು ನಾಡಿನಾದ್ಯಂತ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ವಲಯಗಳಲ್ಲಿ ವ್ಯಾಪಕ ಟೀಕೆ ಮತ್ತು ವಿವಾದ
ಗಳಿಗೆ ಗುರಿಯಾಗಿವೆ. ಅಲ್ಲದೆ, ಇಡೀ ಕಾರ್ಯಕಾರಿ ಸಮಿತಿಯೂ ತೀವ್ರನಿಂದನೆಗೆ ಒಳಗಾಗುತ್ತಿದೆ. 1915ರಿಂದ
2018ರವರೆಗೆ ಕಸಾಪ ನಿಬಂಧನೆಯನ್ನು 6 ಬಾರಿ ತಿದ್ದುಪಡಿ ಮಾಡಲಾಗಿತ್ತು. ಆದರೆ, ತಾವು ‘ಆಮೂಲಾಗ್ರ, ಕ್ರಾಂತಿಕಾರಿ ಬದಲಾವಣೆ’ ಎಂದು ತಿದ್ದುಪಡಿಗಳನ್ನು ಮಾಡಿರುವಿರಿ’ ಎಂದು ಪ್ರಕಾಶಮೂರ್ತಿ ಬೇಸರಿಸಿದರು.

‘ಸದಸ್ಯತ್ವದ ಅಮಾನತು, ಚುನಾಯಿತ ಕಾರ್ಯಕಾರಿ ಸಮಿತಿಗೆ ಕಟ್ಟುಪಾಡುಗಳ ಸುತ್ತೋಲೆ, ಹಣಕಾಸಿನ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಕಾರ್ಯಕಾರಿ ಸಮಿತಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿಲ್ಲ. ಚುನಾಯಿತ ಸದಸ್ಯರ ಸಲಹೆ, ಸೂಚನೆ, ಮನವಿಗಳನ್ನು ಪರಿಗಣಿಸದೇ, ರಾಜ್ಯಾಧ್ಯಕ್ಷರಾದ ತಮಗೇ ಪರಮಾಧಿಕಾರವಿದೆ ಎಂದು ಪ್ರತಿನಿಧಿಗಳ ಸ್ವಾಯತ್ತತೆಗಳೆಲ್ಲವನ್ನೂ ಹತ್ತಿಕ್ಕಿ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬರಲಾಗಿದೆ. ಈ ಕ್ರಮವನ್ನು ನಿಲ್ಲಿಸಬೇಕು’ ಎಂದಿದ್ದಾರೆ.

‘ಶಿಶುನಾಳ ಷರೀಫರ ಗುರು ಗೋವಿಂದ ಭಟ್ಟರ ಮರಿಮೊಮ್ಮಗ ಎಂದೂ, ಮುಖ್ಯಮಂತ್ರಿ ನನಗೆ ಹೋಗೋ ಬಾರೊ ಗೆಳೆಯ ಎಂಬಿತ್ಯಾದಿಅನೇಕ ವೈಯಕ್ತಿಕ ವಿಚಾರಗಳನ್ನು ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಮಾತನಾಡುತ್ತಾ, ಸಮಯ ವ್ಯರ್ಥ ಮಾಡ
ಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT