ಕೆ.ಆರ್.ಪುರ: ಶ್ರೀಸತ್ಯ ಸಾಯಿ ಇನ್ಸ್ಟಿಟ್ಯೂಟ್ ಆಫ್ ಹೈಯರ್ ಲರ್ನಿಂಗ್ ಸುಸ್ಥಿರತೆ, ಜಾಗೃತಿ ಮತ್ತು ಒಳಗೊಳ್ಳುವಿಕೆಯನ್ನು ಉತ್ತೇಜಿಸುವ ಜತೆಗೆ ಸಂಸ್ಥಾಪಕ ಕುಲಪತಿ ಸತ್ಯಸಾಯಿ ಬಾಬಾ ಅವರ 100ನೇ ಜನ್ಮದಿನದ ಸ್ಮರಣಾರ್ಥ ವಿಶಿಷ್ಟ ಸೈಕ್ಲಿಂಗ್ ಯಾತ್ರೆ ಪ್ರಾರಂಭಿಸಿದೆ.

ಕಾಡುಗೋಡಿಯ ಬೃಂದಾವನ ಕ್ಯಾಂಪಸ್ನಿಂದ ಬುಧವಾರ ವಿದ್ಯಾರ್ಥಿಗಳು, ಸಿಬ್ಬಂದಿ ಒಳಗೊಂಡ 150 ಸೈಕ್ಲಿಸ್ಟ್ಗಳು ನಂದಿಗಿರಿ ಕ್ಯಾಂಪಸ್ ಮೂಲಕ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ಪ್ರಶಾಂತಿ ನಿಲಯಕ್ಕೆ 161 ಕಿ.ಮೀ ಪ್ರಯಾಣವನ್ನು ಪ್ರಾರಂಭಿಸಿದರು.

ಗುರುವಾರ ಸಂಜೆ ಪ್ರಶಾಂತಿ ನಿಲಯಂನ ಶ್ರೀ ಸತ್ಯಸಾಯಿ ಹಿಲ್ ವ್ಯೂ ಕ್ರೀಡಾಂಗಣವನ್ನು ತಲುಪಲಿದೆ. ಕಾರ್ಯಕ್ರಮಕ್ಕೆ ಬಿ.ರಾಘವೇಂದ್ರ ಪ್ರಸಾದ್ ಚಾಲನೆ ನೀಡಿದರು. ರಿಜಿಸ್ಟ್ರಾರ್ ಶ್ರೀಕಾಂತ್ ಖನ್ನಾ, ವಿನಯ್ ಕುಮಾರ್, ಡಿ.ಸಿ. ಸುಂದರೇಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.