ಬೆಂಗಳೂರು: ನಗರದ ಉಪ್ಪಾರ ಪೇಟೆ ಪೊಲೀಸ್ ಠಾಣೆಯ ಎದುರು ರೋಟರಿ ಇಂಟರ್ನ್ಯಾಷನಲ್ ಡಿಸ್ಟ್ರಿಕ್ಟ್ 3192 ಸಂಸ್ಥೆ ಹಾಗೂ ಸುಲಭ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ನಿರ್ಮಿಸಿರುವ ಶೌಚಾಲಯವನ್ನು ಶುಕ್ರವಾರ ಉದ್ಘಾಟಿಸಲಾಯಿತು.

ಶೌಚಾಲಯ ಉದ್ಘಾಟಿಸಿದ ರೋಟರಿ ಇಂಟರ್ ನ್ಯಾಷನಲ್ (ಆರ್ಐ) ಡೈರೆಕ್ಟರ್ ಕೆ.ಪಿ. ನಾಗೇಶ್ ಮಾತನಾಡಿ, ‘ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಾ ಬಂದಿರುವ ರೋಟರಿ ಸಂಸ್ಥೆ, ದೇಶದಲ್ಲೇ ಮೊದಲ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಪ್ರತ್ಯೇಕ ಶೌಚಾಲಯವನ್ನು ನಿರ್ಮಿಸಿದೆ’ ಎಂದರು.

‘ಸುಲಭ್ ಇಂಟರ್ನ್ಯಾಷನಲ್ ಸಹಯೋಗದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿ(ಸಿಎಸ್ಆರ್) ಬಳಸಿಕೊಂಡು ದೇಶದ ಪ್ರತಿ ಜಿಲ್ಲೆ, ತಾಲ್ಲೂಕು ಹಂತದಲ್ಲೂ ಲಿಂಗತ್ವ ಅಲ್ಪಸಂಖ್ಯಾತರಿಗಾಗಿ ಇಂಥ ಶೌಚಾಲಯವನ್ನು ನಿರ್ಮಿಸುವುದು ನಮ್ಮ ಗುರಿಯಾಗಿದೆ’ ಎಂದರು.

ಆರ್ಐನ ಚಾರ್ಟರ್ ಗವರ್ನರ್ ವಿ. ಶ್ರೀನಿವಾಸ ಮೂರ್ತಿ, ‘ಲಿಂಗತ್ವ ಅಲ್ಪಸಂಖ್ಯಾತರು ಪುರುಷರು ಮತ್ತು ಮಹಿಳೆಯರ ಶೌಚಾಲಯಗಳನ್ನು ಪ್ರವೇಶಿಸಲು ಅವಕಾಶ ಇಲ್ಲ. ಇದರಿಂದ ಅವರು ಶೌಚಾಲಯದ ಸೌಲಭ್ಯವಿಲ್ಲದೇ ಪರಿತಪಿಸುವುದನ್ನು ಗಮನಿಸಿದ್ದೆವು. ಅವರಿಗೆ ಶೌಚಾಲಯ ನಿರ್ಮಿಸಬೇಕೆಂಬ ಕನಸಿತ್ತು. ಅದು ಈಗ ಸಾಕಾರಗೊಂಡಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.