ಶುಕ್ರವಾರ, 4 ಜುಲೈ 2025
×
ADVERTISEMENT
ಗಬ್ಬೆದ್ದು ನಾರುತ್ತಿದೆ ರಸೆಲ್ ಮಾರುಕಟ್ಟೆ
ಗಬ್ಬೆದ್ದು ನಾರುತ್ತಿದೆ ರಸೆಲ್ ಮಾರುಕಟ್ಟೆ
ಮೂಲಸೌಕರ್ಯದ ಕೊರತೆಯಿಂದ ಮುಚ್ಚಿದ 200 ಅಂಗಡಿಗಳು: ಮರುನವೀಕರಣಕ್ಕೆ ವ್ಯಾಪಾರಿಗಳ ಒತ್ತಾಯ
ಫಾಲೋ ಮಾಡಿ
Published 19 ಜುಲೈ 2023, 20:20 IST
Last Updated 19 ಜುಲೈ 2023, 20:20 IST
Comments
ರಸೆಲ್‌ ಮಾರುಕಟ್ಟೆಯ ಹಿಂಭಾಗದಲ್ಲಿ ದುಃಸ್ಥಿತಿಯಲ್ಲಿರುವ ಚರಂಡಿ 
ರಸೆಲ್‌ ಮಾರುಕಟ್ಟೆಯ ಹಿಂಭಾಗದಲ್ಲಿ ದುಃಸ್ಥಿತಿಯಲ್ಲಿರುವ ಚರಂಡಿ  -ಪ್ರಜಾವಾಣಿ ಚಿತ್ರ/ರಂಜು ಪಿ
ರಸೆಲ್‌ ಮಾರುಕಟ್ಟೆಯ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿರುವ ಬಾಯ್ತೆರೆದುಕೊಂಡಿರುವ ಮ್ಯಾನ್‌ಹೋಲ್‌ -ಪ್ರಜಾವಾಣಿ ಚಿತ್ರ/ರಂಜು ಪಿ
ರಸೆಲ್‌ ಮಾರುಕಟ್ಟೆಯ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿರುವ ಬಾಯ್ತೆರೆದುಕೊಂಡಿರುವ ಮ್ಯಾನ್‌ಹೋಲ್‌ -ಪ್ರಜಾವಾಣಿ ಚಿತ್ರ/ರಂಜು ಪಿ
ರಸೆಲ್‌ ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿ ತ್ಯಾಜ್ಯ ನೀರು. -ಪ್ರಜಾವಾಣಿ ಚಿತ್ರ/ರಂಜು ಪಿ
ರಸೆಲ್‌ ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ರಸ್ತೆಯಲ್ಲಿ ತ್ಯಾಜ್ಯ ನೀರು. -ಪ್ರಜಾವಾಣಿ ಚಿತ್ರ/ರಂಜು ಪಿ
ರಸೆಲ್ ಮಾರುಕಟ್ಟೆಯ ಹಿಂಭಾಗದಲ್ಲಿರುವ ಮೀನಿನ ಮಾರುಕಟ್ಟೆ.  -ಪ್ರಜಾವಾಣಿ ಚಿತ್ರ/ ರಂಜು ಪಿ.
ರಸೆಲ್ ಮಾರುಕಟ್ಟೆಯ ಹಿಂಭಾಗದಲ್ಲಿರುವ ಮೀನಿನ ಮಾರುಕಟ್ಟೆ.  -ಪ್ರಜಾವಾಣಿ ಚಿತ್ರ/ ರಂಜು ಪಿ.
ಸರ್ಕಾರದ ಅನುದಾನ ಬಳಸಿಕೊಂಡು ಪಾರಂಪರಿಕ ರಸೆಲ್‌ ಮಾರುಕಟ್ಟೆಯ ಕಟ್ಟಡವನ್ನು ಸಂಪೂರ್ಣ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
- ಸೈಫುದ್ದೀನ್ ಬಿಬಿಎಂಪಿ ಶಿವಾಜಿನಗರ ವಲಯ ಕಾರ್ಯನಿರ್ವಾಹಕ ಎಂಜಿನಿಯರ್
ರಸೆಲ್‌ ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಸ್ವಚ್ಛಗೊಳಿಸಿದರೆ ಮಾತ್ರ ಗ್ರಾಹಕರು ಮಾರುಕಟ್ಟೆಗೆ ಬರುತ್ತಾರೆ.
ಮನೋಹರ್, ರಸೆಲ್‌ ಮಾರುಕಟ್ಟೆ ಮೀನಿನ ವರ್ತಕರ ಸಂಘದ ಅಧ್ಯಕ್ಷ
‘ನವೀಕರಣವಾಗದ ರಸೆಲ್‌ ಮಾರುಕಟ್ಟೆ’
‘1857ರಲ್ಲಿ ನಿರ್ಮಾಣವಾದ ಈ ಮಾರುಕಟ್ಟೆಯ ಮುಂಭಾಗದ ಕಟ್ಟಡ 1927ರಲ್ಲಿ ನಿರ್ಮಾಣವಾಯಿತು. ಕಳೆದ 10 ವರ್ಷಗಳಿಂದ ಇಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮೂಲಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮಾರುಕಟ್ಟೆಯ ಪ್ರವೇಶ ದ್ವಾರಗಳಿಗೆ ಭದ್ರತೆ ಇಲ್ಲದ ಕಾರಣ ಡ್ರಗ್ಸ್ ಸೇರಿ ಇತರೆ ಅಕ್ರಮ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ’ ಎಂದು ಮಹಮ್ಮದ್ ಇದ್ರೀಸ್ ಚೌಧರಿ ದೂರಿದರು.
‘ರಸೆಲ್ ಮಾರುಕಟ್ಟೆ ಅಭಿವೃದ್ಧಿಗೊಳಿಸಿ
’ ‘ರಸೆಲ್‌ ಮಾರುಕಟ್ಟೆಯನ್ನು ಬಿಬಿಎಂಪಿ ಅಭಿವೃದ್ಧಿಗೊಳಿಸಬೇಕು. ಪ್ರತಿ ತಿಂಗಳು ತೆರಿಗೆ ಪಾವತಿಸುವ ವರ್ತಕರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲದಿದ್ದರೆ ರಸೆಲ್‌ ಮಾರುಕಟ್ಟೆಯನ್ನು ಒಡೆದು ಹಾಕಿ ಯಾವುದಾದರೂ ಮಾಲ್‌ ನಿರ್ಮಿಸಬೇಕು. ಗಬ್ಬೆದ್ದು ನಾರುವಂತಿರುವ ಪ್ರದೇಶಕ್ಕೆ ಗ್ರಾಹಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ವ್ಯಾಪಾರಿಗಳಿಗೆ ನಷ್ಟವಾಗುತ್ತಿದೆ’ ಮೀನಿನ ವ್ಯಾಪಾರಿ ಸಲ್ಮಾನ್‌ ಹೇಳಿದರು.
‘ಪಾದಚಾರಿ ಮಾರ್ಗದಲ್ಲಿ ವ್ಯಾಪಾರ’
‘ಮೂಲ ಸೌಕರ್ಯ ಮತ್ತು ಸುರಕ್ಷತೆ ಕೊರತೆಯಿಂದ ಇಲ್ಲಿನ 200ಕ್ಕೂ ಹೆಚ್ಚು ಅಂಗಡಿಗಳು ಮುಚ್ಚಿವೆ. ಪಾದಚಾರಿ ಮಾರ್ಗಗಳಲ್ಲಿ ವ್ಯಾಪಾರ ನಡೆಯುತ್ತಿದೆ. ಸಮರ್ಪಕ ವಿದ್ಯುತ್ ವ್ಯವಸ್ಥೆ ಕಲ್ಪಿಸಬೇಕು. ಗಡಿಯಾರ ಗೋಪುರ ದುರಸ್ತಿಗೊಳಿಸಬೇಕು’ ಎಂದು ವ್ಯಾಪಾರಿ ದಾದಾಪೀರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT