ಬೆಂಗಳೂರು: ಡೆಕ್ಕನ್ ಹೆರಾಲ್ಡ್ ಇನ್ ಎಜುಕೇಶನ್ (ಡಿಎಚ್ಐಇ) ಕಬ್ಬನ್ ಉದ್ಯಾನದಲ್ಲಿರುವ ಬಾಲಭವನದ ಆವರಣದಲ್ಲಿ ಆಯೋಜಿಸಿರುವ ಡಿಎಚ್ಐಇ ಎಕ್ಸ್ಪ್ರೆಷನ್ಸ್ ಅಂತರ ಶಾಲಾ ‘ಸ್ಪೆಲ್ ಬೀ’ ಹಾಗೂ ‘ವರ್ಡ್ ವಿಂಡರ್’ ಸ್ಪರ್ಧೆಯಲ್ಲಿ ಗುರುವಾರ ನೂರಾರು ಮಕ್ಕಳು ಭಾಗವಹಿಸಿದ್ದರು.

ಎರಡೂ ಸ್ಪರ್ಧೆಗಳು ಮಕ್ಕಳ ಪದಪುಂಜ ವೃದ್ಧಿಗೆ ಸಹಕಾರಿ ಆಗಿದ್ದವು. ನಗರದ ವಿವಿಧ ಶಾಲೆಗಳಿಂದ ಬಂದಿದ್ದ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದರು. ಕಿರಿಯರ ವಿಭಾಗ, ಹಿರಿಯರ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರತಿ ವಿಭಾಗದ ಸ್ಪರ್ಧೆ ವೇಳೆಯಲ್ಲೂ ನೆರೆದಿದ್ದ ವಿದ್ಯಾರ್ಥಿಗಳು, ಶಿಕ್ಷಕರು ಚಪ್ಪಾಳೆ ತಟ್ಟಿ ಹುರಿದುಂಬಿಸಿದರು.

ಸ್ಪೆಲ್ ಬೀ ಸ್ಪರ್ಧೆ: ಹಿರಿಯ ಮತ್ತು ಕಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಅರುಳ್ಮಣಿ ಅವರು ಸ್ಪೆಲ್ ಬೀ ಸ್ಪರ್ಧೆ ನಡೆಸಿಕೊಟ್ಟರು. ಅಂತಿಮ ಸುತ್ತಿಗೆ ಕಿರಿಯರ ವಿಭಾಗದಲ್ಲಿ ಏಳು ಮಕ್ಕಳು ಹಾಗೂ ಹಿರಿಯರ ವಿಭಾಗದಲ್ಲಿ ಆರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು.

ಕಿರಿಯರ ವಿಭಾಗದ ಅಂತಿಮ ಸುತ್ತಿನಲ್ಲಿ ಒಂದು ಚಮಚದ ವಿವಿಧ ಭಾಗಗಳನ್ನು ಹೆಸರಿಸುವುದು, ಇಂಗ್ಲಿಷ್ ಪದವೊಂದರ ಸ್ಪೆಲಿಂಗ್ ಅನ್ನು ಹೇಳುವುದು, ಹಿರಿಯರ ವಿಭಾಗದಲ್ಲಿ ಕುದುರೆಯ ದೇಹದ ಭಾಗಗಳನ್ನು ಗುರುತಿಸುವುದು, ವಿವಿಧ ಪ್ರಾಣಿಗಳ ಹೆಸರು ಬರೆಯುವುದು ಹಾಗೂ ಪದವೊಂದರ ಸ್ಪೆಲಿಂಗ್ ಅನ್ನು ತಪ್ಪದೇ ಹೇಳುವುದು ಮಕ್ಕಳ ಬುದ್ಧಿಮತ್ತೆಗೆ ಸವಾಲು ಎಸೆದವು.

ವರ್ಡ್ ವಿಂಡರ್ ಸ್ಪರ್ಧೆ: ‘ಶಾಲಾ ಮಕ್ಕಳ ಕಲಿಕೆಗಾಗಿ ಈ ಸ್ಪರ್ಧೆಯನ್ನು ರೂಪಿಸಲಾಗಿದೆ. ಶಬ್ದಗಳನ್ನು ಗುರುತಿಸುವ ಮೂಲಕ ಅವರ ಜ್ಞಾನವನ್ನ ಹೆಚ್ಚಿಸಿಕೊಳ್ಳಲು, ತಂಡವಾಗಿ ಹೇಗೆ ಕೆಲಸ ಮಾಡಬೇಕು ಎಂಬುದನ್ನು ಕಲಿತುಕೊಳ್ಳಲು ಹಾಗೂ ಸ್ಪರ್ಧಾ ಮನೋಭಾವನೆ ವೃದ್ಧಿಸಿಕೊಳ್ಳಲು ವರ್ಡ್ ವಿಂಡರ್ ಸ್ಪರ್ಧೆ ನೆರವಾಗಲಿದೆ’ ಎಂದು ಸ್ಪರ್ಧೆಯನ್ನು ನಿರ್ವಹಿಸಿದ ಸಂಜಯ್ ಅವರು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಬಾಲಭವನ ಸೊಸೈಟಿಯ ಸಹಯೋಗವಿದೆ.

ಸ್ಪೆಲ್ ಬೀ ಸ್ಪರ್ಧೆಯ ವಿಜೇತರು

ಕಿರಿಯರ ವಿಭಾಗ

ಪ್ರಥಮ: ಧೃತಿ ಮಧುಕರ್, ನ್ಯಾಷನಲ್ ಪಬ್ಲಿಕ್ ಶಾಲೆ

ದ್ವಿತೀಯ: ಟಿ. ಪ್ರಣವ್, ಸೇಂಟ್ ಮೈಕಲ್ಸ್ ಹೈಸ್ಕೂಲ್

ತೃತೀಯ: ಸಮಂತ್ ಎಂ., ಎಂಇಎಸ್ಕೆಕೆಪಿಎಸ್ (ಎಂಇಎಸ್–ಕಿಶೋರ್ ಕೇಂದ್ರ ಪಿ.ಎಸ್)

ಚತುರ್ಥ: ಅಥರ್ವ ಎ., ಎನ್ಪಿಎಸ್ ಶಾಲೆ ಮಾರತ್ಹಳ್ಳಿ

ಹಿರಿಯರ ವಿಭಾಗ

ಪ್ರಥಮ: ವೈಧಾನ್ ನಿಶಾದ್, ಎನ್ಪಿಎಸ್ ಯಶವಂತಪುರ

ದ್ವಿತೀಯ: ವೇದಾಂತ್ ನಾಯಕ್, ಬಂಟ್ಸ್ ಸಂಘ ಆರ್ಎನ್ಎಸ್ ವಿದ್ಯಾನಿಕೇತನ

ತೃತೀಯ: ಅರ್ಜುನ್ ರಾಜೇಶ್, ಜುಬಲಿ ಇಂಗ್ಲಿಷ್ ಹೈಸ್ಕೂಲ್

ಚತುರ್ಥ: ಪ್ರಣೀತ್, ಸಿಲಿಕಾನ್ ಸಿಟಿ ಅಕಾಡೆಮಿ

ವರ್ಡ್ ವಿಂಡರ್ ಸ್ಪರ್ಧೆ

ಪ್ರಥಮ: ವಂಶ್ ಡಿ. ಜೈನ್, ನಮನ್ ಎಂ.ಎಂ., ಭವ್ಯಶ್ರೀ, ನಿಶಾ ಬಿ., ಆಗಮ್ ಚಿರಾಗ್ ಶಾ, ಈಸ್ಟ್ ವೆಸ್ಟ್ ಅಕಾಡೆಮಿ ರಾಜಾಜಿನಗರ

ದ್ವಿತೀಯ: ಮಹಮ್ಮದ್ ವಾಫಿಕ್, ರುಷಿಕಾ ಎ., ಡಿ.ಎಂ. ಕಾರ್ತಿಕ್, ಸ್ನೇಹಾ ಎಚ್., ಹಿಶಿಕಾ ಪಿ., ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್, ನೆಲಗದರನಹಳ್ಳಿ

ತೃತೀಯ: ವಿಶೃತ ಪ್ರದೀಪ್, ಲಕ್ಷ್ ಜಿ. ರಾವ್, ಅನನ್ಯಾ ಎಸ್.ಕೆ., ಮಾನ್ಯತಾ ಬಿ. ಪ್ರಸಾದ್, ತನ್ಮಯ ಪಿ., ಎನ್ಪಿಎಸ್ ಯಶವಂತಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.