ಬೆಂಗಳೂರು: ‘ವಿದ್ಯಾರ್ಥಿಗಳಿಗೆ ಸಂಶೋಧನೆಗೆ ಪೂರಕವಾದ ಶೈಕ್ಷಣಿಕ ಪರಿಸರ ವ್ಯವಸ್ಥೆ ಅತ್ಯಗತ್ಯ’ ಎಂದು ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಜಿ. ಪ್ರಸಾದ್ ಅಭಿಪ್ರಾಯಪಟ್ಟರು.

ದಯಾನಂದ ಸಾಗರ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಜಾಗತಿಕ ಪರಿಣಾಮಕ್ಕೆ ನಾವೀನ್ಯ ಮತ್ತು ಸುಸ್ಥಿರ ಸಂಯೋಜನೆ’ ಕುರಿತ ಸಂಶೋಧನಾ ಸಮಾವೇಶದಲ್ಲಿ ಅವರು ಮಾತನಾಡಿದರು.

ಬೆಂಗಳೂರಿನಲ್ಲಿರುವ ಸೆಂಟ್ರಲ್ ಪವರ್ ರಿಸರ್ಚ್ ಇನ್ಸ್ಟಿಟ್ಯೂಟ್ನ ಮಹಾ ನಿರ್ದೇಶಕಿ ಡಾ. ಜೆ. ಶ್ರೀದೇವಿ ಅವರು ಸಂಶೋಧನೆ, ಜಾಗತಿಕ ಸಹಯೋಗ, ಸುಸ್ಥಿರ ತಾಂತ್ರಿಕ ಪ್ರಗತಿಯ ಮಹತ್ವದ ಮಾಹಿತಿ ನೀಡಿದರು. ಉಪ ಪ್ರಾಂಶುಪಾಲರಾದ ಡಾ. ವಿ.ಸುಮಾ ಅವರು ಸಮಾವೇಶದ ಅವಲೋಕನ ನಡೆಸಿದರು. ಬೆಂಗಳೂರಿನ ಸಿಎಸ್ಐಆರ್–4ಪಿಇನ ನಿರ್ದೇಶಕ ಡಾ. ಗೋಪಾಲ್ ಪಾತ್ರ, ನೆದರ್ಲೆಂಡ್ನ ಮ್ಯಾಸ್ಟ್ರಿಚ್ ವಿಶ್ವವಿದ್ಯಾಲಯದ ತಾಂತ್ರಿಕ ನಿರ್ದೇಶಕ ಡಾ. ಶ್ಯಾಮ್ ವಸುದೇವ ರಾವ್ ಅವರು ಭಾಗವಹಿಸಿದ್ದರು.

ದಯಾನಂದ ಸಾಗರ್ ಇನ್ಸ್ಟಿಟ್ಯೂಟ್ ಜಂಟಿ ಕಾರ್ಯದರ್ಶಿ ನಿಶಾನ್ ಎಚ್. ಸಾಗರ್, ಉಪ ಪ್ರಾಂಶುಪಾಲ ಡಾ. ಎಚ್.ಕೆ. ರಾಮರಾಜು ಅವರು ವಿದ್ಯಾರ್ಥಿಗಳನ್ನು ಪ್ರಶಂಸಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.