ಬೆಂಗಳೂರು: ಜ್ಞಾನದೀಪಿಕ ಶೈಕ್ಷಣಿಕ ದತ್ತಿ ಸಂಸ್ಥೆ ನೀಡುವ 2025ನೇ ಸಾಲಿನ ‘ಪ್ರೊ.ತಳುಕಿನ ವೆಂಕಣ್ಣಯ್ಯ ಸುಬ್ರಹ್ಮಣ್ಯ ಸ್ಮಾರಕ ಸಾಹಿತ್ಯ ಪ್ರಶಸ್ತಿ’ಗೆ ‘ಪ್ರಜಾವಾಣಿ’ಯ ಮುಖ್ಯ ಉಪಸಂಪಾದಕ ಸೂರ್ಯಪ್ರಕಾಶ್ ಪಂಡಿತ್ ಆಯ್ಕೆಯಾಗಿದ್ದಾರೆ.

‘ಶಿಕ್ಷಕ ರತ್ನ ಪ್ರಶಸ್ತಿ’ಗೆ ಹಾಸನದ ಚನ್ನರಾಯಪಟ್ಟಣದ ನವೋದಯ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಚಿದಂಬರ ಎ., ಬೆಂಗಳೂರಿನ ರಾಜಾಜಿನಗರದ ಬಾಲಮೋಹನ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶಾಂತಾ ನಾಗೇಶ್, ವಿದ್ಯಾವರ್ಧಕ ಸಂಘ ಸರ್ದಾರ್ ಪಟೇಲ್ ಪ್ರೌಢಶಾಲೆಯ ಶಿಕ್ಷಕಿ ಸಿ.ವಿ. ಪದ್ಮ, ಮಲ್ಲೇಶ್ವರದ ತಿರುಮಲ ವಿದ್ಯಾನಿಕೇತನ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕವಿತಾ ನಾರಾಯಣ್ ಹಾಗೂ ಮಧುಗಿರಿ ಜಿಲ್ಲೆಯ ಚಿಕ್ಕನಹಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕ ಕಾಗಿನ್ಕರ್ ಭಾಜನರಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಎಂ.ಎಲ್.ಎ. ಶಾರದಾ ವಿದ್ಯಾನಿಕೇತನ ಶಾಲೆಯ ಶಿಕ್ಷಕಿ ಭಾನುಮತಿ ಎಂ.ಜಿ. ಅವರು ‘ವಿಶೇಷ ಶಿಕ್ಷಕ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯು ಇದೇ 14ರಂದು ರಾಜಾಜಿನಗರದಲ್ಲಿರುವ ಎಂಇಎಸ್ ಟೀಚರ್ಸ್ ಕಾಲೇಜಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಸ್ಮಾರ್ಟ್ ವಿದ್ಯಾಕೇಂದ್ರದ ಸಂಸ್ಥಾಪಕ ಎಲ್.ಎಸ್. ಶಾಮಸುಂದರ ಶರ್ಮ ಪಾಲ್ಗೊಳ್ಳಲಿದ್ದಾರೆ. ಜ್ಞಾನದೀಪಿಕ ಶೈಕ್ಷಣಿಕ ದತ್ತಿ ಸಂಸ್ಥೆಯ ಅಧ್ಯಕ್ಷ ಎನ್. ಸತ್ಯಪ್ರಕಾಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.