ಬೆಂಗಳೂರು: ಕಸದಿಂದ ರಸ, ಗೊಬ್ಬರ... ಇದೆಲ್ಲ ಆಯಿತು. ಮನೆಗಳಿಂದ ಹೊರಬಿದ್ದ ತ್ಯಾಜ್ಯದಿಂದ ಮನೆಗಳಿಗೆ ಬೆಳಕು ನೀಡುವ ಸಮಯ ಇದು. ಬೇಡವೆಂದು ಹೊರಗೆಸೆದ ಸಾಮಗ್ರಿಗಳಿಂದಲೇ ದೀಪಗಳು ಬೆಳಗುತ್ತಿವೆ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ, ಬೆಂಗಳೂರಿನ ಕಸದಿಂದ ಉತ್ಪಾದಿಸಿದ ವಿದ್ಯುತ್, 25 ಸಾವಿರಕ್ಕೂ ಹೆಚ್ಚು ಮನೆಗಳಿಗೆ ನಿತ್ಯವೂ ಸರಬರಾಜಾಗುತ್ತಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮ ನಿಯಮಿತದ (ಕೆಪಿಸಿಎಲ್) ಕರ್ನಾಟಕ ಗ್ಯಾಸ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಸಿ–ಜಿಸಿಎಲ್) ನಗರದ ಅಂಚಿನಲ್ಲಿರುವ ಬಿಡದಿಯಲ್ಲಿ ಸ್ಥಾಪಿಸಿರುವ ‘ಕಸದಿಂದ ವಿದ್ಯುತ್ ಘಟಕ’ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದೆ. ಬೆಂಗಳೂರಿನಲ್ಲಿ ಸಂಗ್ರಹವಾಗುವ ಒಣತ್ಯಾಜ್ಯವನ್ನು, ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್ಡಬ್ಲ್ಯುಎಂಎಲ್) ಈ ಘಟಕಕ್ಕೆ ಕಳುಹಿಸುತ್ತಿದೆ. ಇಲ್ಲಿ ನಿತ್ಯ ಸರಾಸರಿ 11.5 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಬಳಿ ಕೆಪಿಸಿಎಲ್ ಮಾಲೀಕತ್ವದ 163 ಎಕರೆ ಜಾಗದಲ್ಲಿ ‘ವಿನ್ಯಾಸ, ಹಣಕಾಸು, ನಿರ್ಮಾಣ, ಕಾರ್ಯಾಚರಣೆ, ವರ್ಗಾವಣೆ’ (ಡಿಎಫ್ಸಿಒಆ್ಯಂಡ್ಟಿ) ಮಾದರಿಯಲ್ಲಿ ‘ಕಸದಿಂದ ವಿದ್ಯುತ್ ಉತ್ಪಾದನೆ ಘಟಕ’ವನ್ನು ಸ್ಥಾಪಿಸಲಾಗಿದೆ. ಉದ್ದೇಶಿತ ಅವಧಿಯಲ್ಲೇ ಘಟಕ ಆರಂಭವಾಗಿದ್ದರೆ, ಈ ವೇಳೆಗೆ ಮೂರು ವರ್ಷದ ಹಿಂದೆಯೇ ವಿದ್ಯುತ್ ಉತ್ಪಾದನೆಯಾಗಬೇಕಿತ್ತು. ಆದರೆ, ಹಲವು ತೊಡಕುಗಳ ನಂತರ 2024ರ ಸೆಪ್ಟೆಂಬರ್ನಲ್ಲಿ ಘಟಕ ಆರಂಭವಾಗಿದ್ದು, 2025ರ ಅಕ್ಟೋಬರ್ನಿಂದ ಪೂರ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿದೆ.

‘ಕಸದಿಂದ ವಿದ್ಯುತ್ ಉತ್ಪಾದನೆ ಘಟಕ’ ನಿರ್ಮಾಣಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಹಿಂದಿನ ಬಿಬಿಎಂಪಿ) ಶೇ 50ರಷ್ಟು ವೆಚ್ಚವನ್ನು ಭರಿಸಿದೆ. ಬಿಎಸ್ಡಬ್ಲ್ಯುಎಂಎಲ್ ಮಂಡೂರಿನ ಭೂಭರ್ತಿ ಪ್ರದೇಶದಿಂದ ಹಳೆಯ ತ್ಯಾಜ್ಯದಿಂದ (ಲೆಗೆಸಿ ವೇಸ್ಟ್), ಒಣ ತ್ಯಾಜ್ಯವನ್ನು ಬೇರ್ಪಡಿಸಿ (ಆರ್ಡಿಎಪ್) ಘಟಕಕ್ಕೆ ಕಳುಹಿಸುತ್ತಿದೆ. ಈ ಕಸಕ್ಕಿಂತ ನಗರದಲ್ಲಿ ನಿತ್ಯ ಸಂಗ್ರಹವಾಗುವ ಒಣಕಸವನ್ನು ಇಲ್ಲಿಗೆ ಕಳುಹಿಸಿದರೆ, ಹೆಚ್ಚು ವಿದ್ಯುತ್ ಉತ್ಪಾದನೆ ಸಾಧ್ಯ ಎಂಬುದನ್ನು ಮನಗಂಡಿರುವ ಬಿಎಸ್ಡಬ್ಲ್ಯುಎಂಎಲ್, ನವೆಂಬರ್ನಲ್ಲಿ ಈ ಸಂಗ್ರಹ ತ್ಯಾಜ್ಯವನ್ನೇ ಹೆಚ್ಚಾಗಿ ನೇರವಾಗಿ ವಿದ್ಯುತ್ ಉತ್ಪಾದನೆ ಘಟಕಕ್ಕೆ ಕಳುಹಿಸುತ್ತಿದೆ. ಇದರಿಂದ ಭೂಭರ್ತಿ ಪ್ರದೇಶಗಳಲ್ಲಿನ ವಿಲೇವಾರಿ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದೆ.

ಇನ್ನೂ ಮೂರು ಘಟಕ: ಕರೀಗೌಡ

‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಇನ್ನೂ ಮೂರು ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ನಿತ್ಯ ಸುಮಾರು 2000 ಟನ್ ಒಣತ್ಯಾಜ್ಯ ಸಂಗ್ರಹವಾಗಲಿದ್ದು ಅದರಿಂದ ವಿದ್ಯುತ್ ಉತ್ಪಾದಿಸಬಹುದು. ಹೊಸದಾಗಿ ನಾಲ್ಕು ಭಾಗಗಳಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಘಟಕಗಳು ಆರಂಭವಾಗಲಿದ್ದು ಅಲ್ಲಿ ವಿದ್ಯುತ್ ಉತ್ಪಾದನೆ ಘಟಕವೂ ಇರಲಿದೆ’ ಎಂದು ಬಿಎಸ್ಡಬ್ಲ್ಯುಎಂಎಲ್ ಸಿಇಒ ಕರೀಗೌಡ ತಿಳಿಸಿದರು. ‘ಬಿಡದಿಯಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆಗೆ ಭೂಭರ್ತಿ ಪ್ರದೇಶದ ಹೊರತಾಗಿ ನಗರದಲ್ಲಿ ಸಂಗ್ರಹವಾಗುವ ಸುಮಾರು 200 ಟನ್ ತ್ಯಾಜ್ಯವನ್ನು ನಿತ್ಯವೂ ಕಳುಹಿಸಲಾಗುತ್ತಿದೆ. ಸುಮಾರು 50 ಕಾಂಪ್ಯಾಕ್ಟರ್ಗಳು ಭೂಭರ್ತಿ ಪ್ರದೇಶಕ್ಕೆ ಹೋಗುವುದು ಕಡಿಮೆಯಾಗಿದೆ. ಇನ್ನೊಂದು ತಿಂಗಳಲ್ಲಿ ಪ್ರತಿ ನಿತ್ಯ 500 ಟನ್ ಕಳುಹಿಸಲಾಗುತ್ತದೆ. ನಾಗರಿಕರು ಪೌರಕಾರ್ಮಿಕರು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಸಹಕಾರ ಇನ್ನೂ ಹೆಚ್ಚಾದರೆ ಭೂಭರ್ತಿಗೆ ಹೋಗುವ ತ್ಯಾಜ್ಯವನ್ನು ಬಹುತೇಕ ಕಡಿಮೆ ಮಾಡಬಹುದು’ ಎಂದರು.

ಸರ್ಕಾರದ ಬದ್ಧತೆಗೆ ಸಾಕ್ಷಿ: ಕೆ.ಜೆ. ಜಾರ್ಜ್

ಪರಿಸರಸ್ನೇಹಿ ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಸರ್ಕಾರದ ಬದ್ಧತೆಗೆ ಬಿಡದಿಯ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ಸಾಕ್ಷಿ. ಕಸದಿಂದ ವಿದ್ಯುತ್ ಉತ್ಪಾದನೆ ಮೂಲಕ ಅದರ ವಿಲೇವಾರಿ ಸಮಸ್ಯೆಗೆ ಸ್ವಲ್ಪ ಪ್ರಮಾಣದಲ್ಲಿ ಪರಿಹಾರ ನೀಡಲಾಗುತ್ತಿದೆ. ಘಟಕದಲ್ಲಿ ಉತ್ಪಾದನೆಯಾಗುವ ಬೂದಿಯನ್ನು ರಸ್ತೆ ನಿರ್ಮಾಣಕ್ಕೆ ಬಳಸಿ ಅದಕ್ಕೂ ಪರಿಹಾರ ಒದಗಿಸಲು ಚಿಂತಿಸಲಾಗಿದೆ. ಜಿಬಿಎ ಇದಕ್ಕೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದೆ. ಕೆ.ಜೆ. ಜಾರ್ಜ್ ಇಂಧನ ಸಚಿವ

‘ವಾಯುಮಾಲಿನ್ಯ ಇಲ್ಲ ಪರಿಸರಸ್ನೇಹಿ’

‘ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಘಟಕದಿಂದ ಯಾವುದೇ ವಾಯುಮಾಲಿನ್ಯ ಉಂಟಾಗುವುದಿಲ್ಲ. ಈ ಘಟಕದಿಂದ ಹೊರಹೋಗುವ ಎಲ್ಲ ರೀತಿಯ ಅನಿಲಗಳ ಬಗ್ಗೆ 24 ಗಂಟೆಯೂ ನಿಗಾವಹಿಸಲಾಗುತ್ತಿದ್ದು ಆನ್ಲೈನ್ನಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಗೂ ದತ್ತಾಂಶ ರವಾನೆಯಾಗುತ್ತದೆ. ಯಾವುದೇ ರೀತಿಯ ವ್ಯತ್ಯಾಸವಾದರೂ ತಕ್ಷಣವೇ ಸರಿಪಡಿಸಲಾಗುತ್ತದೆ. ಪರಿಸರಸ್ನೇಹಿಯಾಗಿ ಕಸದಿಂದ ವಿದ್ಯುತ್ ಉತ್ಪಾದಿಸಲಾಗುತ್ತದೆ’ ಎಂದು ಕೆಪಿಸಿಎಲ್ ಕಾರ್ಯಪಾಲಕ ಎಂಜಿನಿಯರ್ ಸತೀಶ್ ಕುಮಾರ್ ತಿಳಿಸಿದರು.

‘ನಮ್ಮ ವ್ಯಾಪ್ತಿಯಲ್ಲೇ ಇರುವ ಕೆರೆಯ ಸಮೀಪದಲ್ಲಿ ಕೊಳವೆಬಾವಿಗಳನ್ನು ಕೊರೆಯಲಾಗಿದ್ದು ಅದರಿಂದ ಅಗತ್ಯ ಪ್ರಮಾಣದ ನೀರನ್ನು ಬಳಸಲಾಗುತ್ತದೆ. ಆ ನೀರನ್ನೂ ಸಂಸ್ಕರಿಸಿ ಮತ್ತೆ ಬಳಸಾಗುತ್ತಿದೆ. ಇಲ್ಲಿ ಉತ್ಪಾದನೆಯಾಗುತ್ತಿರುವ ವಿದ್ಯುತ್ ಅನ್ನು ತಲಾ 5 ಯೂನಿಟ್ಗಳಂತೆ 25 ಸಾವಿರ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ’ ಎಂದೂ ಹೇಳಿದರು.

ಘಟಕದ ಕಾರ್ಯವಿಧಾನ

ಕಾಂಪ್ಯಾಕ್ಟರ್ನಲ್ಲಿ ಬಂದ ಒಣ/ಪ್ಲಾಸ್ಟಿಕ್ ತ್ಯಾಜ್ಯವನ್ನು ತೂಕ ಮಾಡಿ 4200 ಟನ್ ಸಾಮರ್ಥ್ಯದ ಪಿಟ್ಗೆ ಸುರಿಯಲಾಗುತ್ತದೆ

‘ಗ್ರಾಬ್ ಕ್ರೇನ್’ ಮೂಲಕ ತ್ಯಾಜ್ಯವನ್ನು ಫೀಡರ್ಗೆ ಹಾಕಲಾಗುತ್ತದೆ * ಬಾಯ್ಲರ್ನಲ್ಲಿ (ಫರ್ನೀಸ್) 1200 ಡಿಗ್ರಿ ಸೆಲ್ಷಿಯಸ್ ತಾಪಮಾನದಲ್ಲಿ ಸುಡಲಾಗುತ್ತದೆ

ಉತ್ಪತ್ತಿಯಾಗುವ ವಿದ್ಯುತ್ ಅನ್ನು ನೆಲದಡಿ ಅಳವಡಿಸಲಾಗಿರುವ ಕೇಬಲ್ ಮೂಲಕ ಬಿಡದಿ ಗ್ರಿಡ್ಗೆ ಸರಬರಾಜು ಮಾಡಲಾಗುತ್ತದೆ

ಒಟ್ಟಾರೆ ತ್ಯಾಜ್ಯದ ಪ್ರಮಾಣದಲ್ಲಿ ಶೇ 21ರಷ್ಟು ‘ಬಾಟಂ ಆ್ಯಶ್’ ಶೇ 2 ರಷ್ಟು ಹಾರುಬೂದಿ ಉತ್ಪಾದನೆಯಾಗುತ್ತದೆ. ಅದನ್ನು ರಸ್ತೆ ನಿರ್ಮಾಣಕ್ಕೆ ಬಳಸಲು ಯೋಜಿಸಲಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.