ಬೆಂಗಳೂರು: ‘ತಿರುಪತಿ ಲಡ್ಡು ಪ್ರಸಾದ ತಯಾರಿಕೆಯಲ್ಲಿ ನಕಲಿ ತುಪ್ಪ ಬಳಸಿರುವುದು ಎಸ್ಐಟಿ ತನಿಖೆಯಲ್ಲಿ ದೃಢಪಟ್ಟಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ಒತ್ತಾಯಿಸಿದ್ದಾರೆ.

‘ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿರುವ ಗಂಭೀರ ಪ್ರಕರಣ ಇದಾಗಿದೆ. ಲಡ್ಡು ಪ್ರಸಾದದಲ್ಲಿ ₹250 ಕೋಟಿಗೂ ಅಧಿಕ ಮೌಲ್ಯದ 68 ಲಕ್ಷ ಕೆ.ಜಿ. ನಕಲಿ ತುಪ್ಪವನ್ನು ಬಳಸಿರುವುದು ಬಯಲಾಗಿದೆ. ಆಂಧ್ರಪ್ರದೇಶದ ಹಿಂದಿನ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ನೇತೃತ್ವದ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಕೃತ್ಯವಿದು. ಅಕ್ರಮಕ್ಕೆ ಕಾರಣರಾದವರ ವಿರುದ್ಧ ಸಿಬಿಐ ಮತ್ತು ಆಂಧ್ರಪ್ರದೇಶ ಪೊಲೀಸರ ತನಿಖೆಯ ಆಧಾರದ ಮೇಲೆ ಸೂಕ್ತ ಶಿಕ್ಷೆ ಆಗಬೇಕು’ ಎಂದು ಆಗ್ರಹಿಸಿದ್ದಾರೆ.

‘ಲಡ್ಡುಗಳಲ್ಲಿ ಕೊಬ್ಬಿನಾಂಶ, ಮಾಂಸದ ಅಂಶವಿರುವ ಕಳಪೆ ಪದಾರ್ಥಗಳನ್ನು ಬಳಸಲಾಗಿದೆ ಎಂಬುದೂ ತನಿಖೆಯಲ್ಲಿ ದೃಢವಾಗಿದೆ. ಉತ್ತರಾಖಂಡ ಮೂಲದ ಬೋಲ್ ಬಾಬಾ ಎಂಬ ಸಂಸ್ಥೆಯಿಂದ ಕಳಪೆ ತುಪ್ಪ ತರಿಸಿಕೊಂಡು ಅವ್ಯವಹಾರ ನಡೆಸಲಾಗಿದೆ. ಪ್ರಸಾದದ ಗುಣಮಟ್ಟ ಕಾಪಾಡಲು ನಂದಿನಿ (ಕೆಎಂಎಫ್) ತುಪ್ಪವನ್ನೇ ಬಳಸಬೇಕು’ ಎಂದು ಶರವಣ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.