ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧರಿಂದ ಹಲಸೂರು ಕೆರೆ ಸ್ವಚ್ಛತಾ ಕಾರ್ಯ

Last Updated 25 ಡಿಸೆಂಬರ್ 2019, 3:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ವಿಶಾಲ ಕೆರೆಗಳಲ್ಲಿ ಒಂದಾದ ಹಲಸೂರು ಕೆರೆಯನ್ನು 70 ಎಂಇಜಿ ಸ್ಯಾಪರ್ಸ್‌ ಕೇಂದ್ರದ ಯೋಧರು ಬಿಬಿಎಂಪಿ ನೌಕರರ ನೆರವಿನಿಂದ ಸ್ವಚ್ಛಗೊಳಿಸಿದರು.

ಬಿಬಿಎಂಪಿಯ 30 ನೌಕರರೊಂದಿಗೆ ಕೈಜೋಡಿಸಿದ ಕೇಂದ್ರದ ಯೋಧರು 10 ಬೋಟ್‌ಗಳ ನೆರವಿನಿಂದ ಸೋಮವಾರ ಮತ್ತು ಮಂಗಳವಾರ ಕೆರೆಯ ಹೂಳೆತ್ತಿದರು. ಅಲ್ಲದೆ, ಜೆಸಿಬಿ ನೆರವಿನಿಂದಲೂ ಹೂಳು ಎತ್ತಲಾಯಿತು. ಕೆರೆಯ ಸುತ್ತ ಬಿದ್ದಿದ್ದ ಒಣ ಕಸವನ್ನೂ ಎತ್ತಲಾಯಿತು.

ಸ್ಥಳೀಯ ಮೀನುಗಾರರಿಗೆ ಜಲಕಾಯವು ಆದಾಯದ ತಾಣವಾಗಿದೆ. ಅಲ್ಲದೆ, ಸ್ಥಳೀಯರು ವಾಯುವಿಹಾರಕ್ಕೆ, ವ್ಯಾಯಾಮ ಮಾಡಲು ಕೆರೆಯ ಆವರಣವನ್ನು ಬಳಸುತ್ತಾರೆ. ಕೆರೆಯಲ್ಲಿ ಹೂಳು ತುಂಬಿದ್ದರಿಂದ ವಾತಾವರಣವು ಕಲುಷಿತಗೊಂಡಿದೆ. ರಾಜಕಾಲುವೆಯ ಕಲುಷಿತ ನೀರು ಸೇರುತ್ತಿರುವುದರಿಂದ ಕೆರೆ ಕಲುಷಿತಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT