ಬೆಂಗಳೂರು: ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಮಾದರಿಯನ್ನು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.
‘ರೈಲುಗಳನ್ನು ಸಂಚಾರಕ್ಕಾಗಿ ಹಳಿಗೆ ಇಳಿಸುವ ಮೊದಲು 10 ದಿನಗಳು ಪರೀಕ್ಷಾರ್ಥ ಸಂಚಾರ ನಡೆಸಲಿವೆ. ಮುಂದಿನ ಮೂರು ತಿಂಗಳಲ್ಲಿ ರೈಲು ಪ್ರಯಾಣಿಕರ ಓಡಾಟಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಸಣ್ಣ ಸಣ್ಣ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಿ ಎಚ್ಚರಿಕೆಯಿಂದ ಈ ರೈಲನ್ನು ವಿನ್ಯಾಸಗೊಳಿಸಲಾಗಿದೆ. ಲೊಕೊ ಪೈಲಟ್‌ಗಳು, ನಿರ್ವಹಣಾ ಸಿಬ್ಬಂದಿ ಅಥವಾ ಹಾಸಿಗೆ ಮತ್ತು ಆಹಾರವನ್ನು ಪೂರೈಸುವ ಸಿಬ್ಬಂದಿಯ ಅಗತ್ಯತೆಗಳನ್ನು ಪರಿಗಣಿಸಲಾಗಿದೆ. ಪ್ರತಿ ಶೌಚಾಲಯವನ್ನು ವಿಶೇಷ ಸಾಮರ್ಥ್ಯವಿರುವ ವ್ಯಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಪರೀಕ್ಷೆಯು ಮುಂದಿನ ಒಂದರಿಂದ ಎರಡು ತಿಂಗಳವರೆಗೆ ಮುಂದುವರಿಯುತ್ತದೆ’ ಎಂದು ಹೇಳಿದ್ದಾರೆ.
‘ವಂದೇ ಭಾರತ್ ರೈಲಿನ ಟಿಕೆಟ್‌ಗಳು ಕೈಗೆಟಕುವ ದರದಲ್ಲಿದ್ದು, ಮಧ್ಯಮ ವರ್ಗದ ಜನರೂ ಕೂಡ ಪ್ರಯಾಣ ಮಾಡಬಹುದಾಗಿದೆ ಈ ರೈಲಿನಲ್ಲಿ ಸಾಕಷ್ಟು ಸುರಕ್ಷತಾ ವೈಶಿಷ್ಟ್ಯಗಳಿವೆ. ಈ ರೈಲನ್ನು ವಿಶ್ವದ ಅತ್ಯುತ್ತಮ ರೈಲುಗಳೊಂದಿಗೆ ಹೋಲಿಸಬಹುದು’ ಎಂದು ವಿವರಿಸಿದರು.
ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಆವರಣದಲ್ಲಿ ನೂತನ ವಂದೇ ಭಾರತ್ ಉತ್ಪಾದನಾ ಘಟಕಕ್ಕೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
VIDEO | "Its configuration has been carefully designed with a lot of attention to detail. The needs of the serving staff, whether it's the loco pilots, maintenance staff, or those serving bedding and food, have been considered. Every toilet has been designed keeping… pic.twitter.com/z8onase7yv
— Press Trust of India (@PTI_News) September 1, 2024
#WATCH | Bengaluru, Karnataka | Railway Minister Ashwini Vaishnaw says, "A lot of things have been taken care of in this coach...Four trains, Vande Chair Car, Vande Sleeper, Vande Metro and Amrit Bharat have been designed in a way to address many things, like modern technology,… https://t.co/e8YI0nDmEW pic.twitter.com/dq2UwMxY0j
— ANI (@ANI) September 1, 2024
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.