ಬೆಂಗಳೂರು: ಇಲ್ಲಿನ ಹಲಸೂರಿನಲ್ಲಿ ಬುಧವಾರ ಸಂಜೆ 4ರ ಸುಮಾರಿಗೆ ಸೈರನ್ ಮೊಳಗುತ್ತಿದ್ದಂತೆಯೇ ಸುತ್ತಮುತ್ತಲ ನಿವಾಸಿಗಳಲ್ಲಿ ಗಾಬರಿ... ಆ ಮಾರ್ಗದಲ್ಲಿ ತೆರಳುತ್ತಿದ್ದ ಪ್ರಯಾಣಿಕರು, ಪಾದಚಾರಿಗಳು, ವಾಹನ ಸವಾರರಲ್ಲಿ ಒಂದುಕ್ಷಣ ದಿಗಿಲು. ಸೈರನ್ ಆದ ಕೆಲವೇ ಕ್ಷಣಗಳಲ್ಲಿ ಅಗ್ನಿಶಾಮಕ ದಳದ ವಾಹನಗಳು ಹಾಗೂ ಆಂಬುಲೆನ್ಸ್ಗಳೂ ತಮ್ಮದೇ ಶಬ್ದವನ್ನು ಹೊರಡಿಸುತ್ತಾ ಅಲ್ಲಿಗೆ ದಾಂಗುಡಿ ಇಟ್ಟವು... ವಾಹನದಿಂದ ಧುಮುಕಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರು...

ಈ ದೃಶ್ಯವು ಹಲಸೂರು ಕೆರೆಯ ಪಕ್ಕದಲ್ಲಿರುವ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹರಕ್ಷಕ ದಳ ಮತ್ತು ನಾಗರಿಕ ರಕ್ಷಣೆ, ರಾಜ್ಯ ವಿಪತ್ತು ಸ್ಪಂದನಾ ಪಡೆಯ ಪೊಲೀಸ್ ಮಹಾನಿರ್ದೇಶಕ ಕಚೇರಿ ಆವರಣದಲ್ಲಿ ಕಂಡುಬಂತು.

ಪಹಲ್ಗಾಮ್ ದಾಳಿಯ ಬಳಿಕ ಪಾಕಿಸ್ತಾನ ಜೊತೆಗಿನ ಸಂಬಂಧವು ವಿಷಮಗೊಂಡಿದ್ದು, ಒಂದು ವೇಳೆ ವಾಯುದಾಳಿ ನಡೆದರೆ ನಾಗರಿಕರು ಹೇಗೆ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಕುರಿತು ‘ಆಪರೇಷನ್ ಅಭ್ಯಾಸ್’ ಹೆಸರಿನಲ್ಲಿ ನಾಗರಿಕರ ಸ್ವರಕ್ಷಣೆ ತಾಲೀಮು ನಡೆಸಲಾಯಿತು.

ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ ನಾಗರಿಕರ ರಕ್ಷಣೆ, ಅಗ್ನಿಶಮನ ಹಾಗೂ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡುವುದು ಸೇರಿದಂತೆ ವಿವಿಧ ಪ್ರಕಾರದ ತಾಲೀಮು ಮಾಡಲಾಯಿತು.

ಹಲಸೂರು ಕೆರೆಯ ದ್ವೀಪದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಕುರಿತ ತಾಲೀಮು ನಡೆಸಲಾಯಿತು. ಎರಡು ಬೋಟ್ಗಳಲ್ಲಿ ತೆರಳಿದ ರಕ್ಷಣಾ ಸಿಬ್ಬಂದಿ ದ್ವೀಪದಲ್ಲಿ ಸಿಲುಕಿದ್ದ ಗಾಯಾಳುಗಳನ್ನು ರಕ್ಷಿಸಿ ಕೆರೆಯ ದಡಕ್ಕೆ ಕರೆತಂದು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಿದರು. ಮೈದಾನದಲ್ಲೇ ನಿರ್ಮಿಸಿದ್ದ ತುರ್ತು ಚಿಕಿತ್ಸಾ ಘಟಕದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇದಕ್ಕೆ ಎಂ.ಎಸ್.ರಾಮಯ್ಯ ಆಸ್ಪತ್ರೆ ವೈದ್ಯರು ನೆರವು ನೀಡಿದರು.

ಆವರಣದಲ್ಲಿದ್ದ ಕಟ್ಟಡದ ಎರಡನೇ ಮಹಡಿಯಲ್ಲಿ ಸಿಲುಕಿದ್ದವರನ್ನು ಹಗ್ಗ, ಸ್ಟ್ರೆಚರ್ ಬಳಸಿ ರಕ್ಷಿಸಲಾಯಿತು. ದಾಳಿ ನಡೆದು ಕಟ್ಟಡ ಹೊತ್ತಿ ಉರಿದರೆ ಬಹುಮಹಡಿ ಕಟ್ಟಡದಲ್ಲಿ ಇದ್ದವರನ್ನು ಸ್ಕೈಲಿಫ್ಟ್ ಕ್ರೇನ್ ನೆರವಿನಿಂದ ರಕ್ಷಣೆ ಮಾಡುವ ವಿಧಾನವನ್ನೂ ಪ್ರದರ್ಶಿಸಲಾಯಿತು. ಬಹುಮಹಡಿ ಕಟ್ಟಡದಲ್ಲಿ ಬೆಂಕಿ ನಂದಿಸುವ ತಾಲೀಮು ನಡೆಸಲಾಯಿತು.

ಕಟ್ಟಡದ ಮೇಲೆ ಬಾಂಬ್ ದಾಳಿ ನಡೆದು ಬೆಂಕಿ ಉರಿಯುತ್ತಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದ ಸಿಬ್ಬಂದಿ, ಅಲ್ಯುಮಿನಿಯಂ ಏಣಿಯ ಸಹಾಯದಿಂದ ಕಟ್ಟಡವನ್ನೇರಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುವುದನ್ನು ಪ್ರದರ್ಶಿಸಲಾಯಿತು. ಸುಸಜ್ಜಿತವಾದ ಏರಿಯಲ್ ಲ್ಯಾಡರ್ ವಾಹನದ ಮೂಲಕ ರಕ್ಷಣೆ ಮಾಡುವುದನ್ನೂ ಸಿಬ್ಬಂದಿ ಪ್ರದರ್ಶಿಸಿದರು.

ಅಗ್ನಿಶಾಮಕ ಹಾಗೂ ತುರ್ತು ಸೇವಾ ಇಲಾಖೆ ಸಿಬ್ಬಂದಿ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ನಾಗರಿಕ ರಕ್ಷಣಾ ಸಿಬ್ಬಂದಿ, ಗೃಹರಕ್ಷದಳ, ಎನ್ಸಿಸಿ, ಎನ್ಎಸ್ಎಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್, ರೆಡ್ಕ್ರಾಸ್, ಪೊಲೀಸ್ ಸಿಬ್ಬಂದಿ ಪಾಲ್ಗೊಂಡಿದ್ದರು.

ಸೈರನ್ ಮೊಳಗಿದರೆ ಏನು ಮಾಡಬೇಕು?

ವಾಯುದಾಳಿ ಆದಂತಹ ಸಂದರ್ಭಗಳಲ್ಲಿ ಎರಡು ನಿಮಿಷ (ಕೋಡ್ ರೆಡ್) ಏರಿಳಿತದಲ್ಲಿ ಸೈರನ್ ಮೊಳಗಲಿದೆ. ಆಗ ನಾಗರಿಕರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು. ಒಂದು ನಿಮಿಷ (ಕೋಡ್ ಗ್ರೀನ್) ಸೈರನ್ ಮೊಳಗಿದರೆ ಜನರು ತಮ್ಮ ಸ್ಥಳಕ್ಕೆ ವಾಪಸ್ ತೆರಳಬಹುದು ಎಂದರ್ಥ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದರು.

ಬ್ಲಾಕ್ ಔಟ್

ನಾಗರಿಕ ರಕ್ಷಣೆ ತಾಲೀಮು ವೇಳೆ ಬ್ಲಾಕ್ ಔಟ್ ಕ್ರಮವನ್ನೂ ಪ್ರದರ್ಶಿಸಲಾಯಿತು. ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿಜಿಪಿ ಕಚೇರಿ ಆವರಣದಲ್ಲಿ ಸಂಜೆ 6.40ರಿಂದ 7ರ ವರೆಗೆ ವಿದ್ಯುತ್ ದೀಪಗಳನ್ನು ಬಂದ್ ಮಾಡಿಸಿ ಬ್ಲಾಕ್ಔಟ್ ಕ್ರಮ ಹೇಗಿರಲಿದೆ ಎಂಬುದನ್ನು ಪ್ರದರ್ಶಿಸಲಾಯಿತು.

‘ಪ್ರತಿ ನಿಮಿಷವೂ ಮುಖ್ಯ’

ಜಲಾಶಯಗಳು ಅಣು ಸ್ಥಾವರ ಕೈಗಾರಿಕಾ ಪ್ರದೇಶ ಹಾಗೂ ಹೆಚ್ಚು ಜನವಸತಿ ಪ್ರದೇಶ ಆಧರಿಸಿ ತಾಲೀಮು ನಡೆಸಲು ಸ್ಥಳಗಳ ಆಯ್ಕೆ ಮಾಡಲಾಗಿದೆ. ರಾಯಚೂರಿನಲ್ಲಿ ಉಷ್ಣ ವಿದ್ಯುತ್ ಸ್ಥಾವರ ಇದೆ. ಕಾರವಾರದಲ್ಲಿ ಅಣುಸ್ಥಾವರ ಇದೆ. ದೇಶದ ಆರ್ಥಿಕ ವ್ಯವಸ್ಥೆಗೆ ಹೆಚ್ಚು ತೆರಿಗೆ ನೀಡುವ ಶಕ್ತಿ ಬೆಂಗಳೂರಿಗೆ ಇದೆ. ಇಂತಹ ಸ್ಥಳಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಆಧರಿಸಿ ಗುರುತಿಸಲಾಗಿದೆ. ರಕ್ಷಣೆ ಕಾರ್ಯಾಚರಣೆ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಬಹಳ ಮುಖ್ಯ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.