ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಜೂನ್‌ 6 ಮತ್ತು 7ರಂದು ವಿವಿಧೆಡೆ ನೀರು ಪೂರೈಕೆ ವ್ಯತ್ಯಯ

Published 1 ಜೂನ್ 2024, 23:54 IST
Last Updated 1 ಜೂನ್ 2024, 23:54 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ 5ನೇ ಹಂತದ ಯೋಜನೆ ಅನುಷ್ಠಾನಕ್ಕೆ ಸಂಪರ್ಕ ಸೇರಿದಂತೆ ಹಲವು ಕಾಮಗಾರಿ ನಡೆಯಲಿರುವುದರಿಂದ ಜೂನ್‌ 6 ಮತ್ತು 7ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಮೊದಲು ಜೂನ್‌ 4, 5ರಂದು ನೀರು ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ತಿಳಿಸಲಾಗಿತ್ತು. ಈಗ ಕಾಮಗಾರಿ ದಿನ ಬದಲಾಗಿದೆ. ಗುರುವಾರ, ಶುಕ್ರವಾರ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

ಕಾವೇರಿ 1, 2, 3ನೇ ಹಂತ ಮತ್ತು 4ನೇ ಹಂತದ 1–2 ಘಟ್ಟಗಳ ನೀರು ಸರಬರಾಜು ಘಟಕಗಳಲ್ಲಿ ಕ್ರಮವಾಗಿ 12 ಹಾಗೂ 6 ಗಂಟೆ ಕಾಮಗಾರಿ ನಡೆಯಲಿದೆ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT