ಈ ಸ್ಪರ್ಧೆಯಲ್ಲಿ ಕರ್ನಾಟಕದ ಒಂಬತ್ತು ಸ್ಪರ್ಧಿಗಳು ಭಾಗವಹಿಸಿದ್ದರು. ಇವರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರೇಮ್ (ಆಡಿಟಿವ್ ಮ್ಯಾನುಫ್ಯಾಕ್ಚರಿಂಗ್ ವಿಭಾಗ), ತುಮಕೂರು ಜಿಲ್ಲೆಯ ದರ್ಶನ್ ಗೌಡ (ಮೆಕಾಟ್ರಾನಿಕ್ಸ್ ವಿಭಾಗ) ಅವರು ಮೂರು ಸ್ಪರ್ಧೆಗಳಲ್ಲಿ ಶ್ರೇಷ್ಠತಾ ಪದಕ ಪಡೆದಿದ್ದಾರೆ.
ಇದಕ್ಕೂ ಮುನ್ನ ಕಳೆದ ಮೇ ತಿಂಗಳಿನಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಕರ್ನಾಟಕದಿಂದ 62 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಯುವ ಕೌಶಲ ಸ್ಪರ್ಧೆಯಲ್ಲಿ 13 ಚಿನ್ನದ ಪದಕ, 12 ಬೆಳ್ಳಿ ಪದಕ, ನಾಲ್ಕು ಕಂಚಿನ ಪದಕ ಹಾಗೂ 19 ಶ್ರೇಷ್ಠತಾ ಪದಕ ಪಡೆದಿದ್ದರು. ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಒಂಬತ್ತು ಮಂದಿ ವಿಶ್ವ ಕೌಶಲ ಸ್ಪರ್ಧೆಗೆ ಆಯ್ಕೆಯಾಗಿದ್ದರು.