ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಲಹಂಕ: ಕೆಂಪೇಗೌಡ ಜಯಂತಿ ಆಚರಣೆ

Published 27 ಜೂನ್ 2024, 16:29 IST
Last Updated 27 ಜೂನ್ 2024, 16:29 IST
ಅಕ್ಷರ ಗಾತ್ರ

ಯಲಹಂಕ: ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಮಿನಿವಿಧಾನಸೌಧದ ಮುಂಭಾಗದಲ್ಲಿರುವ ಕೇಂಪೇಗೌಡ ಪ್ರತಿಮೆಗೆ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಮಾಲಾರ್ಪಣೆ ಮಾಡಿದರು.

‘ಬೆಂಗಳೂರಿನ ಹೆಸರಿನಲ್ಲಿ ಇಂದು ನಾವು ನಮ್ಮ ಕುಟುಂಬಗಳನ್ನು ಪೋಷಣೆ ಮಾಡಿಕೊಂಡು ವ್ಯಾಪಾರ ಮತ್ತು ವ್ಯವಹಾರಗಳನ್ನು ಮಾಡುತ್ತಿರುವುದಕ್ಕೆ ನಾಡಪ್ರಭು ಕೆಂಪೇಗೌಡರು ಮೂಲ ಕಾರಣಕರ್ತರು’ ಎಂದು ಶಾಸಕರು ಸ್ಮರಿಸಿದರು.

ಕೆಂಪೇಗೌಡರ ಪ್ರತಿಮೆಯನ್ನು ಬೆಳ್ಳಿರಥದಲ್ಲಿ ಇಟ್ಟು, ಮಿನಿವಿಧಾನಸೌಧದಿಂದ ಪೊಲೀಸ್‌ ಠಾಣೆ ವೃತ್ತ, ಸಂತೆ ವೃತ್ತದ ಮೂಲಕ ಕೋಗಿಲು ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ನಾದಸ್ವರ, ಡೊಳ್ಳುಕುಣಿತ, ಗಾರುಡಿಗೊಂಬೆ, ತಮಟೆವಾದ್ಯ, ವಿವಿಧ ಜನಪದ ಕಲಾತಂಡಗಳ ಪ್ರದರ್ಶನಗಳು ಸಾಥ್‌ ನೀಡಿದವು.

ತಹಶೀಲ್ದಾರ್‌ ಅನಿಲ್‌ಕುಮಾರ್‌ ಆರೋಲಿಕರ್‌, ಬಿಬಿಎಂಪಿ ಕಾರ್ಯಪಾಲಕ ಎಂಜಿನಿಯರ್‌ ಸುಧಾಕರರೆಡ್ಡಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ.ಒ. ರಮೇಶ್‌, ಅಪೂರ್ವ ಕುಲಕರ್ಣಿ, ಪಾಲಿಕೆ ಮಾಜಿ ಸದಸ್ಯರಾದ ಎಂ.ಸತೀಶ್‌, ಎಂ.ಮುನಿರಾಜು, ಚಂದ್ರಮ್ಮ ಕೆಂಪೇಗೌಡ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT