ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್ ಕಾನ್‌ಸ್ಟೆಬಲ್‌ಗಳ ನಿರ್ಗಮನ ಪಥಸಂಚಲನ 

Last Updated 2 ಫೆಬ್ರುವರಿ 2021, 18:26 IST
ಅಕ್ಷರ ಗಾತ್ರ

ಯಲಹಂಕ: ‘ವೃತ್ತಿಯಲ್ಲಿ ಶ್ರದ್ಧೆ, ಜನರ ಜೊತೆಗೆ ಉತ್ತಮ ಸಂಪರ್ಕ ಹಾಗೂ ಸಾಮಾನ್ಯ ಜ್ಞಾನ ಗುಣಗಳನ್ನು ಹೊಂದಿರದವರು ಉತ್ತಮ ಪೊಲೀಸ್ ಅಧಿಕಾರಿಗಳಾಗಲು ಸಾಧ್ಯವಿಲ್ಲ’ ಎಂದು ಪೊಲೀಸ್ ಮಹಾನಿರ್ದೇಶಕ (ತರಬೇತಿ ವಿಭಾಗ) ಪಿ.ಕೆ.ಗರ್ಗ್ ತಿಳಿಸಿದರು.

ಯಲಹಂಕ ಸಮೀಪದ ಸಶಸ್ತ್ರ ಪೊಲೀಸ್ ತರಬೇತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ 32ನೇ ತಂಡದಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನೀವು ಸಶಸ್ತ್ರ ಪೊಲೀಸರಾಗಿರುವುದರಿಂದ ಸಾರ್ವಜನಿಕರ ಜೊತೆಗೆ ನೇರ ಸಂಪರ್ಕ ಇರುವುದಿಲ್ಲ. ಆದರೆ, ಕಠಿಣ ಪರಿಸ್ಥಿತಿಗಳಲ್ಲಿ ಗುಂಪು ನಿಯಂತ್ರಿಸುವ ವೇಳೆ ಕೋಪದಿಂದ ಬಲ ಪ್ರಯೋಗ ಮಾಡದೆ, ಅಗತ್ಯಕ್ಕೆ ಅನುಗುಣವಾಗಿ ಕರ್ತವ್ಯ ನಿಭಾಯಿಸಬೇಕು’ ಎಂದು ಸಲಹೆ ನೀಡಿದರು.

ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಸ್.ಇಂದು ಶೇಖರ್, ‘ತರಬೇತಿ ಪಡೆದಿರುವ 179 ಪ್ರಶಿಕ್ಷಣಾರ್ಥಿಗಳ ಪೈಕಿ ಏಳು ಮಂದಿ ಮಾಜಿ ಸೈನಿಕರಿದ್ದಾರೆ. ಎಂಟು ತಿಂಗಳ ಅವಧಿಯಲ್ಲಿ ಕಾನೂನು, ಕಂಪ್ಯೂಟರ್, ಮಾನಸಿಕ ಸ್ವಾಸ್ಥ್ಯ ಹಾಗೂ ಇತರೆ ಪ್ರಚಲಿತ ವಿಷಯಗಳಲ್ಲಿ ಬೋಧನೆ, ದೈಹಿಕ ಶಿಕ್ಷಣ, ಯೋಗ, ಕರಾಟೆ, ಕವಾಯತು ಹಾಗೂ ವಿವಿಧ ಶಸ್ತ್ರ ತರಬೇತಿಯನ್ನೂ ನೀಡಲಾಗಿದೆ’ ಎಂದರು.

ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಮತ್ತು ಫೈರಿಂಗ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ಮೂರೂ ವಿಭಾಗಗಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ ದಿನೇಶ್ ಕೆ.ಎಂ ಅವರಿಗೆ ‘ಸರ್ವೋತ್ತಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT