ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜೂಮ್’ ಆ್ಯಪ್ ಹ್ಯಾಕ್; ಪ್ರಾಂಶುಪಾಲರಿಂದ ದೂರು

Last Updated 19 ಜೂನ್ 2020, 22:10 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಖಾಸಗಿ ಶಾಲೆಯೊಂದರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಬಳಸುತ್ತಿದ್ದ ‘ಜೂಮ್’ ಆನ್‌ ಲೈನ್ ಕ್ಲಾಸ್ ಆ್ಯಪ್ ಹ್ಯಾಕ್‌ ಆಗಿರುವ ಅನುಮಾನ ವ್ಯಕ್ತವಾಗಿದ್ದು, ಈ ಸಂಬಂಧ ಶಾಲೆ ಪ್ರಾಂಶುಪಾಲರು ಸಿಐಡಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

‘ಆ್ಯಪ್ ಹ್ಯಾಕ್ ಹಾಗಿರುವ ಹಾಗೂ ಹ್ಯಾಕ್ ಮಾಡಿದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಬಗ್ಗೆ ಹೆಬ್ಬಾಳ ಸಮೀಪದ ಶಾಲೆಯೊಂದರ ಪ್ರಾಂಶುಪಾಲರು ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆನ್‌ಲೈನ್ ಪಾಠಕ್ಕೆಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಮೇ 21ರಂದು ಆ್ಯಪ್‌ನಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದರು. ಅದೇ ವೇಳೆ ಆ್ಯಪ್ ಹ್ಯಾಕ್‌ಮಾಡಿದ್ದ ಆರೋಪಿ, ಅವಾಚ್ಯ ಶಬ್ಧಗಳಿಂದ ಶಿಕ್ಷಕರನ್ನು ನಿಂದಿಸಿದ್ದ. ವಿದ್ಯಾರ್ಥಿ ಇರಬಹುದೆಂದು ಶಿಕ್ಷಕರು ವಿಚಾರಿಸಿದ್ದರು. ಆದರೆ, ಶಾಲೆಗೆ ಸಂಬಂಧವಿಲ್ಲದ ವ್ಯಕ್ತಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT