ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಪಶು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ

Published 18 ಜನವರಿ 2024, 7:33 IST
Last Updated 18 ಜನವರಿ 2024, 7:33 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 19ನೇ ಸಂಸ್ಥಾಪನಾ ದಿನ ಬುಧವಾರ ಆಚರಿಸಲಾಯಿತು.

ತೆಲಂಗಾಣದ ಪಟಂಚೇರುನಲ್ಲಿರುವ ಇಕ್ರಿಸ್ಯಾಟ್‍ ಪ್ರಧಾನ ವಿಜ್ಞಾನಿ ಮತ್ತು ಕಾರ್ಯತಂತ್ರದ ಸಲಹೆಗಾರ ಶ್ರೀನಾಥ ದೀಕ್ಷಿತ್ ಉದ್ಘಾಟಿಸಿ, ‘ಜೀವನೋಪಾಯದ ಸುಭದ್ರತೆಗಾಗಿ ಪಶುಸಂಗೋಪನೆ ಚಟುವಟಿಕೆಗಳನ್ನು ಅಳವಡಿಸಿಕೊಂಡು ಹೆಚ್ಚೆಚ್ಚು ಪ್ರಚುರಪಡಿಸಬೇಕು’ ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಮಾತನಾಡಿ, ‘ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ ವಿಶ್ವವಿದ್ಯಾಲಯವು ಮುಂದಿನ ದಿನಗಳಲ್ಲಿ ಹೆಚ್ಚು ಒತ್ತು ಕೊಡಲಿದೆ’ ಎಂದು ಹೇಳಿದರು.

ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಶಿವಮೊಗ್ಗದ ಪಶು ವೈದ್ಯಕೀಯ ಕಾಲೇಜಿನ  ಮುಖ್ಯಸ್ಥ ಎನ್.ಬಿ.ಶ್ರೀಧರ, ಅತ್ಯುತ್ತಮ ಶಿಕ್ಷಕೇತರ ಸಿಬ್ಬಂದಿ ಪ್ರಶಸ್ತಿಯನ್ನು ಬೆಂಗಳೂರು ಪಶು ವೈದ್ಯಕೀಯ ಕಾಲೇಜಿನ ಹಿರಿಯ ಟೆಲಿಫೋನ್‌ ಆಪರೇಟರ್‌ ಎಸ್‌.ವಿ.ಪ್ರಭಾಕರ್‌, ಅತ್ಯುತ್ತಮ ಕೃಷಿಕ ಪ್ರಶಸ್ತಿಯನ್ನು ಸಂತೋಷ ಉಮಾಕಾಂತ ಪಾಟೀಲ, ಕಾಶೆಂಪುರ್‌ ಗ್ರಾಮದ ಗೀತಾ ಮಾರುತಿ ಅವರಿಗೆ ಅತ್ಯುತ್ತಮ ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಾಹ್ಯ ಸಂಸ್ಥೆಗಳಿಂದ ಪಡೆದ ಅನುದಾನಕ್ಕಾಗಿ ಹಾಗೂ ಅವರ ಗಮನಾರ್ಹ ಕೊಡುಗೆ ಗುರುತಿಸಿ ವಿಶ್ವವಿದ್ಯಾಲಯದ ಒಟ್ಟು 8 ಪ್ರಧಾನ ಸಂಶೋಧಕರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಜಿಲಾಧಿಕಾರಿ ಗೋವಿಂದ ರೆಡ್ಡಿ, ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರಾದ ಭೋಜ್ಯಾ ನಾಯ್ಕ, ವಸಂತ ಬಿರಾದಾರ, ಲತಾ ಡಿ.ಎಚ್., ವೆಂಕಟಾಚಲ ವಿ.ಎಸ್. ಹಾಜರಿದ್ದರು. ರೈತರು ಮತ್ತು ಪಶು ವೈದ್ಯಾಧಿಕಾರಿಗಳಿಗೆ ಬರಗಾಲ ನಿರ್ವಹಣೆ ಕುರಿತು ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT