ಶ್ರೀನಿವಾಸ ಬಿರಾದಾರ (35) ಕೊಲೆಯಾದವರು. ಕೃಷಿಕರಾಗಿರುವ ಇವರು ಬಿಜೆಪಿ ಬೂತ್ ಘಟಕದ ಅಧ್ಯಕ್ಷ ಸಹ ಆಗಿದ್ದಾರೆ. ಗ್ರಾಮಕ್ಕೆ ಸಮೀಪದಲ್ಲಿ ರಸ್ತೆ ಸುಧಾರಣಾ ಕಾರ್ಯ ನಡೆಯುತ್ತಿದ್ದು ಅಲ್ಲಿಗೆ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಈ ರಸ್ತೆಯಿಂದ ವೇಗವಾಗಿ ಹೋಗುತ್ತಿತ್ತು ಎನ್ನಲಾಗಿದೆ. ಹೀಗಾಗಿ ರಸ್ತೆ ಬದಿಯಲ್ಲಿ ನಿಂತಿದ್ದ ಶ್ರೀನಿವಾಸ ಅವರ ಮೈಮೇಲೆ ಕೆಸರು ಸಿಡಿದಿದೆ.