ಮಂಗಳವಾರ, 20 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊನಲು–ಬೆಳಕಿನ ಕ್ರಿಕೆಟ್‌: ಮೋದಿ ಟ್ರೋಫಿ ಗೆದ್ದ ಬಸವಕಲ್ಯಾಣ ತಂಡ

Published 9 ಜನವರಿ 2024, 15:33 IST
Last Updated 9 ಜನವರಿ 2024, 15:33 IST
ಅಕ್ಷರ ಗಾತ್ರ

ಬೀದರ್‌: ಅಟಲ್‌ ಫೌಂಡೇಶನ್‌ನಿಂದ ಹಮ್ಮಿಕೊಂಡಿದ್ದ ಮೋದಿ ಟ್ರೋಫಿಯನ್ನು ಬಸವಕಲ್ಯಾಣದ ‘ಸ್ಕೈ ವೀವ್‌’ ತಂಡ ಗೆದ್ದುಕೊಂಡಿದೆ.

ನಗರದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಹೊನಲು–ಬೆಳಕಿನ ಪಂದ್ಯದಲ್ಲಿ ಬಸವಕಲ್ಯಾಣ ತಂಡವು ಬೀದರ್‌ ನಗರದ ‘ಚಾಲೆಂಜರ್ಸ್‌’ ತಂಡವನ್ನು ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. 

ಮೂರು ಪಂದ್ಯದಲ್ಲಿ ಒಟ್ಟು 107 ರನ್‌ ಬಾರಿಸಿದ ವಸೀಂ ಶೇಖ್‌ ‘ಮ್ಯಾನ್‌ ಆಫ್‌ ದಿ ಸಿರೀಸ್‌’, ಅತ್ಯುತ್ತಮ ಬ್ಯಾಟ್ಸಮನ್‌, ಮೂರು ಪಂದ್ಯದಲ್ಲಿ ಎಂಟು ವಿಕೆಟ್‌ ಗಳಿಸಿದ ಮಿನಾಜ್‌ ‘ಬೆಸ್ಟ್‌ ಬೌಲರ್‌’ ಪ್ರಶಸ್ತಿಗೆ ಪಾತ್ರರಾದರು. ವಿಜೇತ ಬಸವಕಲ್ಯಾಣ ತಂಡಕ್ಕೆ ಔರಾದ್‌ ಶಾಸಕ ಪ್ರಭು ಚವಾಣ್‌, ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ₹1 ಲಕ್ಷ ನಗದು, ಟ್ರೋಫಿ ವಿತರಿಸಿದರು. ರನ್ನರ್‌ ಅಪ್‌ ಬೀದರ್ ತಂಡಕ್ಕೆ ₹50 ಸಾವಿರ ನಗದು, ಟ್ರೋಫಿ ವಿತರಿಸಲಾಯಿತು. ಜಿಲ್ಲೆಯ ವಿವಿಧ ತಾಲ್ಲೂಕಿನ ಒಟ್ಟು 86 ತಂಡಗಳು ಪಾಲ್ಗೊಂಡಿದ್ದವು.

ಪ್ರಭು ಚವಾಣ್‌ ಮಾತನಾಡಿ, ಬೀದರ್‌ ನಗರದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿರುವುದು ಶ್ಲಾಘನೀಯವಾದದ್ದು. ಯುವ ಪೀಳಿಗೆಗೆ ಇಂತಹ ವೇದಿಕೆ ಮಾಡಿಕೊಡುವುದು ಅತ್ಯವಶ್ಯಕ. ಇದು ಪ್ರತಿವರ್ಷ ನಡೆಯಬೇಕು ಎಂದು ತಿಳಿಸಿದರು.

ಶಾಸಕ ಶರಣು ಸಲಗರ ಮಾತನಾಡಿ, ಕಲ್ಯಾಣ ಕರ್ನಾಟಕದಲ್ಲಿ ಇದೊಂದು ಮಾದರಿ ಕಾರ್ಯ. ಅಟಲ್‌ ಫೌಂಡೇಶನ್‌ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಗುರುನಾಥ ಕೊಳ್ಳೂರ ಅವರ ಸಾಮಾಜಿಕ ಕಾರ್ಯಗಳಿಗೆ ನನ್ನ ಸಹಕಾರ ಇರುತ್ತದೆ. ಮುಂದಿನ ವರ್ಷ ನಾನೂ ಕೂಡ ಬಸವಕಲ್ಯಾಣ ತಂಡದಲ್ಲಿ ಒಬ್ಬ ಆಟಗಾರನಾಗಿ ಭಾಗವಹಿಸುತ್ತೇನೆ ಎಂದು ಘೋಷಿಸಿದರು. 

ಅಟಲ್ ಫೌಂಡೇಶನ್ ಅಧ್ಯಕ್ಷ ಗುರುನಾಥ ಕೊಳ್ಳೂರ ಮಾತನಾಡಿ, ಸದುದ್ದೇಶದಿಂದ ಅಟಲ್ ಫೌಂಡೇಶನ್ ಪ್ರಾರಂಭಿಸಲಾಗಿದೆ. ನಮ್ಮ ಸಾಮಾಜಿಕ ಕಾರ್ಯಗಳಿಗೆ ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರೇರಣೆಯಾಗಿದ್ದಾರೆ. ಮೋದಿಯವರ ಸದೃಢ ನಾಯಕತ್ವ ನಮಗೆ ಮಾದರಿ. ಬರುವ ದಿನಗಳಲ್ಲಿ ಇನ್ನೂ ಹತ್ತು ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು. ಅದಕ್ಕೆ ಜನರ ಸಹಕಾರ ಅಗತ್ಯ ಎಂದು ತಿಳಿಸಿದರು.

ಅಟಲ್ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಬಾಬುವಾಲಿ ಮಾತನಾಡಿ, ಅಟಲ್ ಫೌಂಡೇಶನ್ ಅಸ್ತಿತ್ವಕ್ಕೆ ಬಂದಿರುವುದು ಸಮಾಜದ ಹಿತಕ್ಕಾಗಿ. ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸುವುದರ ಜೊತೆಗೆ ಬೀದರ್‌ ಜಿಲ್ಲೆಯ ಅಭಿವೃದ್ಧಿಗಾಗಿ ತನ್ನದೆ ಆದ ದೃಷ್ಟಿಕೋನ ಹೊಂದಿದೆ ಎಂದು ಹೇಳಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಜ್ಯೋತಿರ್ಮಯಾನಂದ ಸ್ವಾಮೀಜಿ, ಮಾಜಿ ಶಾಸಕರಾದ ಸುಭಾಷ ಗುತ್ತೇದಾರ, ಸುಭಾಷ ಕಲ್ಲೂರ, ಗುಂಡಪ್ಪಾ ವಕೀಲ, ಮುಖಂಡರಾದ ಚನ್ನಬಸವ ಬಳತೆ, ಬಸವರಾಜ ಆರ್ಯ, ಬಾಬುರಾವ ಕಾರಬಾರಿ, ಸೋಮಶೇಖರ ಪಾಟೀಲ ಗಾದಗಿ, ಹಾವಶೆಟ್ಟಿ ಪಾಟೀಲ, ಕಿರಣ ಪಾಟೀಲ,  ಪ್ರಭುರಾವ ವಸ್ಮತೆ, ಶರಣಪ್ಪಾ ಮಿಠಾರೆ, ಸುರೇಶ ಚನ್ನಶೆಟ್ಟಿ, ಸಚಿನ ಕೊಳ್ಳೂರ, ಗುರುನಾಥ ರಾಜಗೀರಾ, ಬೀದರ್‌ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಕುಶಾಲ ಪಾಟೀಲ ಗಾದಗಿ, ಅನೀಲ ದೇಶಮುಖ, ಸಂಜಯ ಜಾಧವ, ಯುವರಾಜ, ಮುಕ್ರಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT