ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ: ಎಪಿಎಂಸಿಯಲ್ಲಿ ಮೂಲಸೌಕರ್ಯ ಮರೀಚಿಕೆ

Published : 17 ಜೂನ್ 2025, 5:11 IST
Last Updated : 17 ಜೂನ್ 2025, 5:11 IST
ಫಾಲೋ ಮಾಡಿ
Comments
ಬಸವಕಲ್ಯಾಣದ ಎಪಿಎಂಸಿ ಕಚೇರಿ
ಬಸವಕಲ್ಯಾಣದ ಎಪಿಎಂಸಿ ಕಚೇರಿ
ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಗೆ ಚಿಕ್ಕ ವಾಹನದಲ್ಲಿ ತಂದಿದ್ದ ಚೀಲಗಳನ್ನು ಒಯ್ಯುತ್ತಿರುವುದು
ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಗೆ ಚಿಕ್ಕ ವಾಹನದಲ್ಲಿ ತಂದಿದ್ದ ಚೀಲಗಳನ್ನು ಒಯ್ಯುತ್ತಿರುವುದು
ಬಸವಕಲ್ಯಾಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ಚರಂಡಿ ಕಸದಿಂದ ತುಂಬಿರುವುದು
ಬಸವಕಲ್ಯಾಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ಚರಂಡಿ ಕಸದಿಂದ ತುಂಬಿರುವುದು
ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಯ ಚರಂಡಿಯಲ್ಲಿ ನೀರು ಸಂಗ್ರಹಗೊಂಡಿದೆ
ಬಸವಕಲ್ಯಾಣದ ಎಪಿಎಂಸಿ ಮಾರುಕಟ್ಟೆಯ ಚರಂಡಿಯಲ್ಲಿ ನೀರು ಸಂಗ್ರಹಗೊಂಡಿದೆ
ದವಸ ಧಾನ್ಯಗಳಿಗೆ ದೊಡ್ಡ ಮಾರುಕಟ್ಟೆಗಳಲ್ಲಿನ ಬೆಲೆಯೇ ಇಲ್ಲಿ ಸಿಗುವಂತಾಗಬೇಕು. ಗ್ರಾಮೀಣ ರೈತರ ವಾಸ್ತವ್ಯಕ್ಕಾಗಿ ರೈತ ಭವನದ ದುರಸ್ತಿ ಕೈಗೊಳ್ಳಬೇಕು
ಸುಭಾಷ ರಗಟೆ ತಾಲ್ಲೂಕು ರೈತ ಸಂಘದ ಅಧ್ಯಕ್ಷ
ಮಾರುಕಟ್ಟೆ ಆವರಣದಲ್ಲಿ ನಿಯಮಿತವಾಗಿ ಸ್ವಚ್ಛತೆ ಕೈಗೊಳ್ಳದೆ ತೊಂದರೆ ಅನುಭವಿಸಬೇಕಾಗಿದೆ. ಸಾಮೂಹಿಕ ಮೂತ್ರಾಲಯ ಶೌಚಾಲಯದ ವ್ಯವಸ್ಥೆ ಆಗಬೇಕು
ವೀರೇಶ ಬೋರಗೆ ರೈತ
ತರಕಾರಿ ಮಾರುಕಟ್ಟೆಗೆ ಬೀಗ
ಮುಖ್ಯ ಬಸ್‌ನಿಲ್ದಾಣದ ಹಿಂದುಗಡೆ ₹3 ಕೋಟಿ ವೆಚ್ಚದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹೊಸದಾಗಿ ತರಕಾರಿ ಮತ್ತು ಹಣ್ಣು ಮಾರುಕಟ್ಟೆ ನಿರ್ಮಿಸಿದ್ದರೂ ಪ್ರವೇಶ ದ್ವಾರಕ್ಕೆ ಬೀಗ ಹಾಕಲಾಗಿದೆ. ಇಲ್ಲಿ 30ಕ್ಕೂ ಅಧಿಕ ಮಳಿಗೆಗಳು ಮಾರಾಟದ ಪ್ರಾಂಗಣ ಇದೆ. ಆವರಣದಲ್ಲಿ ಮಳೆ ನೀರು ಸಂಗ್ರಹಗೊಳ್ಳದಂತೆ ಹಾಗೂ ಕೆಸರು ಆಗದಂತೆ ವ್ಯವಸ್ಥೆಗೈಯಬೇಕಾಗಿದೆ. ಬೇರೆ ಕಡೆ ಖಾಸಗಿ ಜಾಗದಲ್ಲಿ ತರಕಾರಿ ಮಾರುಕಟ್ಟೆ ಇದ್ದು ಅಲ್ಲಿ ಶುಚಿತ್ವದ ಕೊರತೆ ಕಾಡುತ್ತಿದೆ. ಆದ್ದರಿಂದ ಎಪಿಎಂಸಿಯ ಈ ಹೊಸ ಮಾರುಕಟ್ಟೆಯನ್ನು ಶೀಘ್ರದಲ್ಲಿ ಉದ್ಘಾಟಿಸಬೇಕು ಎಂಬುದು ಜನರ ಆಗ್ರಹವಾಗಿದೆ. ‘ಈ ಸ್ಥಳದಲ್ಲಿ ಇನ್ನೂ ವಿದ್ಯುತ್ ಸಂಪರ್ಕವಿಲ್ಲ. ಇತರೆ ಕೆಲ ವ್ಯವಸ್ಥೆ ಒದಗಿಸಿದ ನಂತರ ಇಲ್ಲಿ ವ್ಯಾಪಾರಕ್ಕೆ ಅನುವು ಮಾಡಿಕೊಡಲಾಗುವುದು’ ಎನ್ನುತ್ತಾರೆ ಎಪಿಎಂಸಿ ಕಾರ್ಯದರ್ಶಿ ಸಂತೋಷ ಮುದಗೊಂಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT