ಬುಧವಾರ, ಜೂನ್ 29, 2022
24 °C

ಸಮಾಜ ಸೇವೆಗೆ ಸಂಘಟನೆ ಅಗತ್ಯ: ಸದಾನಂದ ಬಿರಾದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ಸಮಾಜಸೇವೆ ಕೈಗೊಳ್ಳಲು ಸಂಘಟನೆಯ ಅಗತ್ಯವಿದೆ. ಉತ್ತಮ ಉದ್ದೇಶದಿಂದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘ ರಚಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷ ಸದಾನಂದ ಬಿರಾದಾರ ಹೇಳಿದರು.

ನಗರದ ಗೋಸಾಯಿ ಓಣಿಯಲ್ಲಿನ ಮಹಂತ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಛತ್ರಪತಿ ಶಾಹು ಮಹಾರಾಜ ಮರಾಠಾ ಸೇವಾ ಸಂಘದ ಉದ್ಘಾಟನೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ರಾಜಕುಮಾರ ಭೋಸಲೆ ಮಾತನಾಡಿ, ಮರಾಠಾ ಸಮಾಜದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಯತ್ನಿಸಲಾಗುವುದು ಎಂದರು.

ಸತೀಶ ಬಿರಾದಾರ ಮಾತನಾಡಿದರು. ಮಹಂತ ಮಠದ ಜಗದೀಶಗಿರಿ ಜಹಾಗೀರದಾರ ಭಾವಚಿತ್ರದ ಪೂಜೆ ನೆರವೆರಿಸಿದರು.

ಪದಾಧಿಕಾರಿಗಳು: ಈ ವೇಳೆ ಸಂಘದ ಪದಾಧಿಕಾರಿಗಳನ್ನು ನೇಮಿಸಲಾಯಿತು. ಸದಾನಂದ ಬಿರಾದಾರ (ಗೌರವ ಅಧ್ಯಕ್ಷ), ರಾಜಕುಮಾರ ಭೋಸಲೆ(ಅಧ್ಯಕ್ಷ), ಲಕ್ಷ್ಮಣ ಕಪನೂರೆ (ಕಾರ್ಯಾಧ್ಯಕ್ಷ), ಅಮಯಗಿರಿ ಜಹಾಗೀರದಾರ (ಉಪಾಧ್ಯಕ್ಷ/ ಖಜಾಂಚಿ), ಪರಮೇಶ್ವರ ಬಿರಾದಾರ(ಉಪಾಧ್ಯಕ್ಷ), ಸೂರಜ್ ಪಾಟೀಲ(ಪ್ರಧಾನ ಕಾರ್ಯದರ್ಶಿ), ಸತೀಶ ಬಿರಾದಾರ(ಕಾರ್ಯದರ್ಶಿ), ರಾಹುಲ್ ಪಾಟೀಲ(ಜಂಟಿ ಕಾರ್ಯ ದರ್ಶಿ), ದಿನೇಶ ಭೋಸಲೆ(ಸಂಘಟನಾ ಕಾರ್ಯದರ್ಶಿ) ಹಾಗೂ ನಿರ್ದೇಶಕರನ್ನಾಗಿ ಪ್ರದೀಪ ಶಿಂಧೆ, ಸಾಗರ ಜಾಧವ, ಈಶ್ವರ ಗವಳಿ, ಗುಂಡಾಜಿ ಜಾಧವ, ಅರವಿಂದ ಪವಾರ ಅವರನ್ನು ನೇಮಿಸಲಾಗಿದೆ.

ಸಭೆಯಲ್ಲಿ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.