ಭಾನುವಾರ, ನವೆಂಬರ್ 28, 2021
19 °C

ಚಿದ್ರಿಯಲ್ಲಿ ಭಜನೆ ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ರಮಾಬಾಯಿ ಅಂಬೇಡ್ಕರ್ ಮಹಿಳಾ ಮಂಡಳದ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಕುರಿತ ವಿಚಾರ ಸಂಕಿರಣ ಹಾಗೂ ಭಜನೆ ಕಾರ್ಯಕ್ರಮ ಚಿದ್ರಿ ಜನತಾ ಕಾಲೊನಿಯ ಬೌದ್ಧ ವಿಹಾರದಲ್ಲಿ ನಡೆಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗುರು ಹಾಗೂ ರವಿ ಜಂಟಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ಮಂಡಳದ ಅಧ್ಯಕ್ಷೆ ಸುಬ್ಬಮ್ಮ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಸದಸ್ಯ ಸಂಗಪ್ಪ ಚಿದ್ರಿ, ಜಗನ್ನಾಥ ಬಾಡಿಗೆ, ಶಶಿರಾಮ ಬೆಳಕುಣಿ ಅತಿಥಿಗಳಾಗಿ ಪಾಲ್ಗೊಂಡಿದ್ದರು,

ಸುಬ್ಬಮ್ಮ ಸೋನಿ, ಲಕ್ಷ್ಮಿಬಾಯಿ ಚಂದಾಪೂರಕರ್ ಹಾಗೂ ಸಂಗಡಿಗರು ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.
ಕಲಾವಿದರಾದ ಶಶಿರಾವ್ ಹಾರ್ಮೋನಿಯಂ, ದತ್ತಪ್ಪ ಹಾಗೂ ನಾಗಪ್ಪ ತಬಲಾ ಸಾಥ್‌ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂಧ ವಿಶೇಷ ಘಟಕ ಯೋಜನೆಯಡಿಯಲ್ಲಿ ಪ್ರಯೋಜಿತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.